James 2022: ಥಿಯೇಟರ್‌ಗಳ ಮುಂದೆ ಶುರುವಾಗಿದೆ 'ಜೇಮ್ಸ್‌' ಸಂಭ್ರಮ

Mar 16, 2022, 5:57 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹುಟ್ಟುಹಬ್ಬಕ್ಕೆ  ಕ್ಷಣಗಣನೆ ಆರಂಭವಾಗಿದೆ. ದೊಡ್ಮನೆ ಅಭಿಮಾನಿಗಳಿಗೆ ನಾಳೆಯೇ ಹೋಳಿಹಬ್ಬ. ಅಪ್ಪು ಹುಟ್ಟುಹಬ್ಬದಂದು 'ಜೇಮ್ಸ್‌' ಸಿನಿಮಾ ರಿಲೀಸ್ ಆಗಲಿದೆ. ಅಂದರೆ ಮಾರ್ಚ್ 17ಕ್ಕೆ ಪವರ್‌ಫುಲ್ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ರಾಜ್ಯದ ಬಹುತೇಕ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಸಂಭ್ರಮ-ಸಡಗರ ಶುರುವಾಗಿದೆ. ಪುನೀತ್ ರಾಜ್‌ಕುಮಾರ್ ಕಟೌಟ್‌ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಪುನೀತ್ ನಟಿಸಿದ ಎಲ್ಲ ಚಿತ್ರದ ಪೋಸ್ಟರ್ ಹಾಗೂ ಕಟೌಟ್‌ಗಳ ಹವಾ ಶುರುವಾಗಿದೆ. 'ಜೇಮ್ಸ್' ಚಿತ್ರಕ್ಕೆ ಶಿವಣ್ಣ ಡಬ್ಬಿಂಗ್ ನೀಡಿದ್ದಾರೆ. ಚೇತನ್ ಕುಮಾರ್ (Chetan Kumar) ನಿರ್ದೇಶನದ ಈ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ (Kishore Pathikonda) ಬಂಡವಾಳ ಹೂಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies