Mar 17, 2022, 3:58 PM IST
ಇಂದು 'ಜೇಮ್ಸ್' (James) ಜಾತ್ರೆ ಶುರುವಾಗಿದ್ದು, ಈಗಾಗಲೇ ಚಿತ್ರಮಂದಿರಗಳ ಮುಂದೆ ಸಡಗರ-ಸಂಭ್ರಮ ಮನೆ ಮಾಡಿದೆ. ಥಿಯೇಟರ್‌ಗಳ ಮುಂದೆ ಇದೀಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿಮಾನಿಗಳು (Fans) ಜಮಾಯಿಸುತ್ತಿದ್ದಾರೆ. ಮಾತ್ರವಲ್ಲದೇ ಚಿತ್ರಮಂದಿರಗಳ ಬಳಿ ಫ್ಲೆಕ್ಸ್‌ಗಳು, ಕಟೌಟ್‌ಗಳು ರಾರಾಜಿಸುತ್ತಿದ್ದು, 'ಜೇಮ್ಸ್' ಸಿನಿಮಾ ಪ್ರದರ್ಶನವನ್ನು ಕಾಣುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ ಐದು ಭಾಷೆಗಳಲ್ಲಿ, 4 ಸಾವಿರ ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಚಿತ್ರ ಬಿಡುಗಡೆಯಾಗಿದೆ.
James: ಜೇಮ್ಸ್ ಜಾತ್ರೆ ಶುರು, ಮೊದಲ ದಿನ ಮೊದಲ ಶೋ ವೀಕ್ಷಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್
ಕೆನಡಾ, ಯೂರೋಪ್, ಯುಎಸ್‌ಎ, ಆಸ್ಪ್ರೇಲಿಯಾ ಸೇರಿ ಹೊರ ದೇಶಗಳ 72 ನಗರಗಳಲ್ಲಿ ‘ಜೇಮ್ಸ್’ ತೆರೆಗೆ ಬರುತ್ತಿದೆ. ಯುಎಸ್‌ನಲ್ಲಿ 270 ಸ್ಕ್ರೀನ್, ಆಸ್ಪ್ರೇಲಿಯಾದಲ್ಲಿ 150 ಸ್ಕ್ರೀನ್ ಸೇರಿ ಹೊರ ದೇಶಗಳಲ್ಲಿ ಒಟ್ಟು 1000 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಶೇಷ ಎಂದರೆ ಆಸ್ಪ್ರೇಲಿಯಾ ಸೆನ್ಸಾರ್ ಮಂಡಳಿಯಲ್ಲಿ ಸೆನ್ಸಾರ್ ಮಾಡಿಕೊಂಡ ಮೊದಲ ಕನ್ನಡ ಸಿನಿಮಾ ‘ಜೇಮ್ಸ್'. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies