ದುಬಾರಿ ಕಾರು ಖರೀದಿಸಿದ ನಟ ಅಭಿಷೇಕ್ ಅಂಬರೀಷ್: ಕಾರಿನ ಬೆಲೆ ಎಷ್ಟು ಗೊತ್ತಾ?

May 9, 2024, 10:53 AM IST

ನಟ ಅಭಿಷೇಕ್ ಅಂಬರೀಶ್ ಅವರು ಕೋಟಿ ಬೆಲೆಯ BMW ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ x7 ಎಂಬ ಹೆಸರಿನ ಕಾರನ್ನು ಖರೀದಿಸಿದ ಅಭಿಷೇಕ್ ಅಂಬರೀಶ್ ಅವರು ನಿವಾಸದ ಸುತ್ತಮತ್ತ ಡ್ರೈವ್ ಮಾಡಿ ಖುಷಿ ಪಟ್ಟಿದ್ದಾರೆ. ಇನ್ನು ಈ ಬಿಎಂಡಬ್ಲ್ಯೂ ಕಾರು 1 ಕೋಟಿ 30 ಲಕ್ಷಬೆಲೆಯುಳ್ಳದಾಗಿದೆ.

ಡಾಲಿ  ಕೋಟಿ ವಿಲನ್ ಇವರೆ: ನಿರ್ದೇಶಕ ಪರಮ್ ಅವರು ‘ಕೋಟಿ’ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದ್ದಾರೆ. ವಿಲನ್ ಪಾತ್ರದ ಕಿರು ಪರಿಚಯವನ್ನು ಅವರು ಈ ಪೋಸ್ಟರ್ ಮೂಲಕ ಮಾಡಿಸಿದ್ದಾರೆ. ರಮೇಶ್ ಇಂದಿರಾ ಅವರು ‘ಕೋಟಿ’ ಸಿನಿಮಾದಲ್ಲಿ ದಿನೂ ಸಾವ್ಕಾರ್ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಡಾಲಿ ಧನಂಜಯ್ ಹೀರೋ. ಅವರ ಎದುರು ವಿಲನ್ ಆಗಿ ಅಬ್ಬರಿಸುವುದು ರಮೇಶ್ ಇಂದಿರಾ. ಈಗಾಗಲೇ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಖಳನಾಗಿ ಗಮನ ಸೆಳೆದಿದ್ದಾರೆ. ‘ಕೋಟಿ’ ಸಿನಿಮಾದಲ್ಲೂ ಅವರಿಗೆ ಡಿಫರೆಂಟ್ ಆದಂತಹ ವಿಲನ್ ಪಾತ್ರವಿದೆ. ದಿನೂ ಸಾವ್ಕಾರ್ ಎಂಬುದು ಆ ಪಾತ್ರದ ಹೆಸರು. 

ಬೆಸ್ಟ್ ವರ್ಸಟೈಲ್ ನಟಿ- ನಯನತಾರಾ: 'ದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಅವಾರ್ಡ್ಸ್'ನಲ್ಲಿ ನಟಿ ನಯನತಾರಾಗೆ 'ಬೆಸ್ಟ್ ವರ್ಸಟೈಲ್ ನಟಿ ' ಪ್ರಶಸ್ತಿ ನೀಡಿ ಗೌರವಿಸಲಗಿದೆ. ವಿಭಿನ್ನ ಪಾತ್ರಗಳ ಮೂಲಕ ಸೌತ್ ಹಾಗೂ ನಾರ್ತ್ ಚಿತ್ರರಂಗಗಳಲ್ಲಿ ಬಹುಬೇಡಿಕೆಯಲ್ಲಿರುವ ನಟಿ ನಯನತಾರಾ 'ಅತ್ಯುತ್ತಮ ಬಹುಮಖ ಪ್ರತಿಭೆಯುಳ್ಳ ನಟಿ' ಪ್ರಶಸ್ತಿ ಗಳಿಸಿದ್ದಾರೆ.