ಯುದ್ಧಕ್ಕೂ ಮೊದಲು ದೋಸ್ತಿ.. ಗೆದ್ದ ಮೇಲೆ ಕುಸ್ತಿ: ಮನೆಯೊಂದು 3 ಬಾಗಿಲು, 4 ಗೋಡೆಗಳ ಮಧ್ಯೆ ನಡೆದದ್ದೇನು..?

Nov 3, 2023, 3:52 PM IST

ಕಾಂಗ್ರೆಸ್ ಕೋಟೆಯಲ್ಲಿ ಧಗಧಗಿಸುತ್ತಿದೆ ಅಂತರ್ಯುದ್ಧದ ಜ್ವಾಲೆ. ಕೋಟೆ ಹೊತ್ತಿ ಉರಿಯುತ್ತಿರುವ ಹೊತ್ತಲ್ಲಿ ರಾಜ್ಯಕ್ಕೆ ಎಂಟ್ರಿ ಕೊಟ್ಟ ದೆಹಲಿ ದೂತರು. ಸಿಎಂ-ಡಿಸಿಎಂಗೇ ಹೈಕಮಾಂಡ್(High command) ಡೈರೆಕ್ಟ್ ವಾರ್ನಿಂಗ್ ಕೊಟ್ಟಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಆ ಕುರ್ಚಿಯಲ್ಲಿ ಸಿದ್ದರಾಮಯ್ಯ(Siddaramaiah) ಕೂತಿದ್ದಾರೆ.ಆದ್ರೂ ಕುರ್ಚಿಗಾಗಿ ಕಿತ್ತಾಟ. ಈ ಜಟಾಪಟಿ ಜೊತೆ ಕಾಂಗ್ರೆಸ್(Congress) ಸರ್ಕಾರಕ್ಕೆ ಕಂಟಕವಾದ ಬೆಳಗಾವಿ ಬೆಂಕಿ. ಗಾಯದ ಮೇಲೆ ಉಪ್ಪು ಸವರಿದ ಹಾಗೆ, ಉರಿಯುತ್ತಿರೋ ಬೆಂಕಿಗೆ ತುಪ್ಪ ಸುರಿದ ಹಾಗೆ ಹರಿ ಉರಿ ಬಿಸಿ. ಸಿದ್ದರಾಮಯ್ಯ ವಿರುದ್ಧ ಬಂಡೆದ್ದು ಉರಿದು ಬಿದ್ದಿದ್ದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್(BK Hariprasad). ಇಲ್ಲಿ ಮನೆಯೊಂದು ಮೂರು ಬಾಗಿಲಲ್ಲ, ಆರು ಬಾಗಿಲು. ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಶತ್ರು ಅನ್ನೋ ಮಾತು ಮತ್ತೆ ಮತ್ತೆ ಸಾಬೀತಾಗ್ತಾ ಇದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ, ಆಂತರಿಕ ಕಚ್ಚಾಟ, ಬಣ ಬಡಿದಾಟ ತಾರಕಕ್ಕೇರಿದೆ. ಚುನಾವಣೆಯಲ್ಲಿ ಇಡೀ ರಾಜ್ಯವೇ ಬೆರಗಾಗುವಂತೆ ಒಟ್ಟಾಗಿ, ಒಂದಾಗಿ ಹೋರಾಡಿದ್ದ ನಾಯಕರು ಅಧಿಕಾರ ಸಿಕ್ಕ ಮೇಲೆ ಕಿತ್ತಾಟಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಲ್ಲಿ ನಡೀತಾ ಇರೋ ಈ ಬಣಯುದ್ಧವೇ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ. ಕಾಂಗ್ರೆಸ್‌ನ ಬಣ ಬಡಿದಾಯ ಎಲ್ಲಿವರೆಗೆ ಬಂದಿದೆ ಅಂದ್ರೆ, ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಬದಲಾವಣೆ ಪ್ರಶ್ನೆಯೇ ಇಲ್ಲ ಅಂತ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟನೆ ನೀಡುವಷ್ಟರ ಮಟ್ಟಿಗೆ ಬಂದು ನಿಂತಿದೆ.

ಇದನ್ನೂ ವೀಕ್ಷಿಸಿ:  ಎನ್‌ಡಿಎ ಒಳಗೂ ನಡೀತಿದೆಯಾ ಮುಸುಕಿನ ಗುದ್ದಾಟ..? ಐಎನ್‌ಡಿಐಎಗೆ ಶಾಪವಾಗುತ್ತಾ ಒಳಜಗಳ..?