ರಜನಿ ಮತ್ತು ಶ್ರೀದೇವಿ ಜೊತೆಯಾಗಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮೂಂಡ್ರು ಮುಡಿಚು', 'ನಾನ್ ಆಡಿಮೈ ಇಲ್ಲೈ', 'ಪೋಕಿರಿ ರಾಜ', 'ಭಗವಾನ್ ದಾದ', 'ಶಲ್ಬಾಸ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ ತಮ್ಮ 15ನೇ ವಯಸ್ಸಿನಲ್ಲಿ ರಜನಿ ಜೊತೆ ನಟಿಸಿದ್ದರು. ಒಂದು ಕಾಲದಲ್ಲಿ ರಜನಿಕಾಂತ್, ಶ್ರೀದೇವಿ ಅವರನ್ನು ಮದುವೆಯಾಗಬೇಕೆಂದುಕೊಂಡಿದ್ದರಂತೆ. ಆದರೆ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಆದರೂ ಇಬ್ಬರು ಸ್ಟಾರ್‌ಗಳ ನಡುವೆ ಉತ್ತಮ ಸ್ನೇಹ ಉಳಿದಿತ್ತು.