ವೋಟರ್‌ ಐಡಿ ಹಗರಣದಲ್ಲಿ ಅಧಿಕಾರಿಗಳ ತಪ್ಪು ಇದ್ರೆ ಕ್ರಮ: ಸಿಎಂ ಬೊಮ್ಮಾಯಿ

Nov 26, 2022, 3:07 PM IST

ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ವೋಟರ್​ ಐಡಿ ಹಗರಣ ಸಂಬಂಧಿಸಿದಂತೆ, ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ವಿಚಾರ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಪ್ರಕರಣದ ಮುಕ್ತ ತನಿಖೆ ಮಾಡಿಸಲು ಸರ್ಕಾರ ಬದ್ಧವಾಗಿದೆ.  ಹೀಗಾಗಿಯೇ ನಾವು ತನಿಖೆಗೆ ಕೊಟ್ಟಿರೋದು, ಹಲವಾರು ಜನರನ್ನು ಬಂಧನ ಕೂಡಾ ಮಾಡಿದೀವಿ, ಚುನಾವಣಾ ಆಯೋಗದ ತನಿಖೆಯನ್ನು ಸ್ವಾಗತಿಸುತ್ತೇವೆ. ಅಧಿಕಾರಿಗಳ ವಿರುದ್ಧ ತಪ್ಪು ಸಾಬೀತಾದರೆ ಕ್ರಮ ತಗೋತೀವಿ ಎಂದು ಹೇಳಿದ್ದಾರೆ.  ಚುನಾವಣಾ ಆಯೋಗ ರದ್ದಾದ ಓಟರ್ ಕಾರ್ಡ್'ಗಳ ಪರಿಷ್ಕರಣೆ ಮಾಡ್ತಿದೆ. ಅನ್ಯಾಯವಾಗಿ ರದ್ದಾಗಿದ್ರೆ ಸರಿಪಡಿಸಲಾಗುತ್ತದೆ. ಎರಡು ಕಡೆ ವೋಟರ್ ಕಾರ್ಡ್ ಇದ್ರೆ, ರದ್ದು ಮಾಡಲಾಗುತ್ತದೆ ಎಂದು ಕೂಡಾ ಸಿಎಂ ಹೇಳಿದ್ದಾರೆ. ಇನ್ನು ಬೆಂಗಳೂರು ನಗರ ಡಿಸಿ ಶ್ರೀನಿವಾಸ ವಿಚಾರಣೆಗೆ CS ಆದೇಶ ನೀಡಿದ್ದು, ಚಿಲುಮೆ  ಸಂಸ್ಥೆಯ 500 ಸಿಬ್ಬಂದಿಗೂ ನೋಟಿಸ್‌ ನೀಡಲೂ ಸಿದ್ಧತೆ ನಡೆದಿದೆ.

Chikkamagaluru : 28ರಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ