ಪೋಷಕರು ಹಾಗೂ ಶಿಕ್ಷಕರು, ಮೌಲ್ಯಮಾಪಕರು ಮನಸೋ ಇಚ್ಛೆ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡಿದ್ದಾರೆ. ಪರಿಣಾಮ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಹಾಗೂ ಒಳ್ಳೆಯ ಶಾಲೆಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಎದುರಿಸುವಂತಾಗಿದೆ. ಅಲ್ಲದೆ, ಮರು ಮೌಲ್ಯ ಮಾಪನಕ್ಕೆ ಹೆಚ್ಚಿನ ಹಣ ನಿಗದಿಪಡಿಸಿದ್ದಾರೆ ಎಂದು ಆಪಾದಿಸಿದ ವಿದ್ಯಾರ್ಥಿಗಳು
ಬೆಂಗಳೂರು(ಮೇ.26): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಸಮರ್ಪಕವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ನಡೆಸಿದ ಕಾರಣ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಶನಿವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು, ಮೌಲ್ಯಮಾಪಕರು ಮನಸೋ ಇಚ್ಛೆ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡಿದ್ದಾರೆ. ಪರಿಣಾಮ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಹಾಗೂ ಒಳ್ಳೆಯ ಶಾಲೆಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಎದುರಿಸುವಂತಾಗಿದೆ. ಅಲ್ಲದೆ, ಮರು ಮೌಲ್ಯ ಮಾಪನಕ್ಕೆ ಹೆಚ್ಚಿನ ಹಣ ನಿಗದಿಪಡಿಸಿದ್ದಾರೆ ಎಂದು ಆಪಾದಿಸಿದರು.
undefined
ಎಸ್ಸೆಸ್ಸೆಲ್ಸಿ ರಿಸಲ್ಟ್ ಕುಸಿತ: ಛಾಯಾಪ್ರತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲೂ ಇಳಿಕೆ
ಖಾಸಗಿ ಶಾಲೆಯೊಂದರ ಶಿಕ್ಷಕಿ ರೇಖಾ ಮಾತನಾಡಿ, ಹಿಂದೆ ದಿನಕ್ಕೆ ಹದಿನೈದು ಉತ್ತರಪತ್ರಿಕೆಗಳ ಮೌಲ್ಯ ಮಾಪನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ದಿನಕ್ಕೆ 30 ಪತ್ರಿಕೆಗಳ ಮೌಲ್ಯ ಮಾಪನದಗುರಿನೀಡಲಾಗಿತ್ತು. ಮೌಲ್ಯಮಾಪಕರು ಒತ್ತಡಕ್ಕೆ ಸಿಲುಕಿ ಎಡವಟ್ಟು ಮಾಡಿದ್ದಾರೆ. ಶಾಲೆಯಿಂದ ಉತ್ತರಪತ್ರಿಕೆ ಫೋಟೋಕಾಪಿ ತರಿಸಿಕೊಂಡವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಸರಿಯಾಗಿ ನಡೆದಿಲ್ಲ. ಎಂಬುದು ನನ್ನ ಗಮಕ್ಕೆ ಬಂದಿದೆ ಎಂದು ಹೆಳಿದರು. ಜೊತೆಗೆ ಸರಿ ಉತ್ತರಕ್ಕೆ ಪೂರ್ಣಾಂಕ ನೀಡದಿರುವುದು. ಗಣಿತದ ಪ್ರತಿ ಹಂತಕ್ಕೆ ಅನುಗುಣವಾಗಿ ಅಂಕ ನೀಡದಿರು ವುದು, ಒಟ್ಟಾರೆ ಅಂಕ ನೀಡುವಾಗ ತಪ್ಪುಗಳು ಕಂಡು ಬಂದಿದೆ. ಇದಕ್ಕೆಲ್ಲ ಹೊಣೆ ಯಾರೆಂದು ಪ್ರಶ್ನಿಸಿದರು.
ಖಾಸಗಿ ಶಾಲೆ ವಿದ್ಯಾರ್ಥಿ ಕುಶಾಲ್ ಆರ್. ಮಾತನಾಡಿ, ಮೌಲ್ಯಮಾಪಕರ ತಪ್ಪಿಂದಾಗಿ ಗಣಿತದಲ್ಲಿ ನನಗೆ 10 ಅಂಕಗಳು ಕಡಿಮೆಯಾಗಿವೆ. ಇದರಿಂದ ಭವಿಷ್ಯದ ವಿದ್ಯಾ ಭ್ಯಾಸಕ್ಕೆ ತೊಡಕಾಗಿದ್ದು, ನಾನು ಬಯಸಿದ ಕಾಲೇಜಿನಲ್ಲಿ ದಾಖಲಾತಿ ಸಿಗುತ್ತಿಲ್ಲ. ಜತೆಗೆ ರಾಜ್ಯ ಪಠ್ಯಕ್ರಮದಲ್ಲಿ ಓದುತ್ತಿರುವ ಮಕ್ಕಳು ಅಂತಿಮ ಹಂತದ ಮೂರು ಪರೀಕ್ಷೆ ಬರೆಯಬೇಕಿದ್ದು, ಒತ್ತಡ ಉಂಟಾಗಿದೆ ಎಂದರು.
ವಿದ್ಯಾರ್ಥಿಯ ಪೋಷಕ ವೇಬಗೋಪಾಲ್ ಮಾತನಾಡಿ, ಮೌಲ್ಯಮಾಪನದಲ್ಲಿ ಶಿಸ್ತು ತರುವುದು ಅಗತ್ಯ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಈ ಸಮಸ್ಯೆಗಳಿಗೆ ಕ್ರಮ ಸೂಚಿಸಬೇಕು ಎಂದು ಒತ್ತಾಯಿಸಿದರು.