Latest Videos

ಶ್ರೀರಂಗಪಟ್ಟಣ: ಸಾಲ ಮರುಪಾವತಿಸಲು ವಿಫಲ, ಖಾಸಗಿ ಶಾಲೆಗೆ ಬೀಗ..!

By Kannadaprabha NewsFirst Published May 26, 2024, 11:37 AM IST
Highlights

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಖಾಸಗಿ ಶಾಲೆ ಆಡಳಿತ ಮಂಡಳಿಯವರು ಸರ್.ಎಂ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ನಿಂದ ಸಾಲ ಪಡೆದಿದೆ. ಆದರೆ, ಸಾಲವನ್ನು ಮರುಪಾವತಿ ಮಾಡದ ಪರಿಣಾಮ ಬ್ಯಾಂಕ್ ಅಧಿಕಾರಿಗಳು ವಿದ್ಯಾಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡು ಅತಿಕ್ರಮಣ ಮಾಡದಂತೆ ಶಾಲಾ ಗೇಟಿಗೆ ನಾಮ ಫಲಕ ಅಳವಡಿಸಿದ್ದಾರೆ.

ಶ್ರೀರಂಗಪಟ್ಟಣ(ಮೇ.26):  ಸಾಲ ಮರುಪಾವತಿಗೆ ವಿಫಲವಾದ ಖಾಸಗಿ ಶಾಲೆ ಗೇಟಿಗೆ ಈ ಆಸ್ತಿಯು ಶ್ರೀ ಎಂ ವಿಶ್ವೇಶ್ವರಯ್ಯ ಸಹಕಾರಿ ಬ್ಯಾಂಕ್‌ನ ಸ್ವಾಧೀನದಲ್ಲಿದೆ. ಅತಿಕ್ರಮಣದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸರ್.ಎಂ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ನಾಮ ಫಲಕ ಹಾಕಿದೆ.

ತಾಲೂಕಿನ ಕಿರಂಗೂರು ಗ್ರಾಮದ ಖಾಸಗಿ ಶಾಲೆ ಆಡಳಿತ ಮಂಡಳಿಯವರು ಸರ್.ಎಂ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ನಿಂದ ಸಾಲ ಪಡೆದಿದೆ. ಆದರೆ, ಸಾಲವನ್ನು ಮರುಪಾವತಿ ಮಾಡದ ಪರಿಣಾಮ ಬ್ಯಾಂಕ್ ಅಧಿಕಾರಿಗಳು ವಿದ್ಯಾಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡು ಅತಿಕ್ರಮಣ ಮಾಡದಂತೆ ಶಾಲಾ ಗೇಟಿಗೆ ನಾಮ ಫಲಕ ಅಳವಡಿಸಿದ್ದಾರೆ.

ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್‌ನಿಂದ ಅವಾಂತರ ಸೃಷ್ಟಿ: ಜಿ.ಟಿ.ದೇವೇಗೌಡ

ರಾಜ್ಯಾದ್ಯಂತ ಒಂದೆರಡು ದಿನಗಳಲ್ಲಿ ಶಾಲೆ ಮರು ಆರಂಭಗೊಳ್ಳಲಿದೆ. ಇದೀಗ ವಿದ್ಯಾಸಂಸ್ಥೆ ಗೇಟ್ ಸೀಲ್ ಮಾಡಿ ಬೀಗ ಹಾಕಿರುವುದರಿಂದ ಶಾಲಾ ಆಡಳಿತ ಮಂಡಳಿ ವಿರುದ್ಧ ಪಾಲಕರು ನಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಹುದು ಎಂದು ಆತಂಕಗೊಂಡು ಕಿಡಿಕಾರಿದ್ದಾರೆ. ವಿದ್ಯಾಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಹೆಚ್ಚಿನ ಗೊಂದಲ ಮೂಡಿದೆ. ಆದರೆ, ಶಾಲೆ ಆಡಳಿತ ಮಂಡಳಿಯು ಸಾರ್ವನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಒಂದೆರಡು ದಿನಗಳಲ್ಲಿ ಎಂದಿನಂತೆ ಶಾಲೆ ಆರಂಭಗೊಳ್ಳುವುದಾಗಿ ತಿಳಿಸಿದೆ.

click me!