Latest Videos

ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಪೊಲೀಸರ ಹಾವಳಿ; ರಾತ್ರಿ ಗಸ್ತಿನಲ್ಲಿ ಸಾರ್ವಜನಿಕರಿಂದ ಸುಲಿಗೆ

By Sathish Kumar KHFirst Published May 26, 2024, 11:44 AM IST
Highlights

ಬೆಂಗಳೂರಿನಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಪೊಲೀಸರ ಸಮವಸ್ತ್ರ, ಹೆಲ್ಮೆಟ್ ಹಾಗೂ ನಕಲಿ ಗುರುತಿನ ಚೀಟಿಯೊಂದಿಗೆ ಆಗಮಿಸಿ ಜನರನ್ನು ಸುಲಿಗೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಬೆಂಗಳೂರು (ಮೇ 26): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಪೊಲೀಸರ ಸಮವಸ್ತ್ರ, ನಕಲಿ ಗುರುತಿನ ಚೀಟಿ ಹಾಗೂ ಪೊಲೀಸರ ಹೆಲ್ಮಟ್ ಧರಿಸಿ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರು ಹಾಗೂ ವ್ಯಾಪಾರಿಗಳನ್ನು ಸುಲಿಗೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ, ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ದಂಡ ವಸೂಲಿ ಮಾಡುವವರ ಜಾಲವೂ ಸಕ್ರಿಯವಾಗಿದೆ.

ಬೆಂಗಳೂರಿನಲ್ಲಿ ಪೊಲೀಸ್ ಹೆಸರಿನಲ್ಲಿ  ದೌರ್ಜನ್ಯ ಮುಂದುವರಿದೆ. ಪೊಲೀಸ್ ಹೆಲ್ಮೆಟ್ ಧರಿಸಿ ನಾನು ಪೊಲೀಸ್ ಎಂದು ಹೇಳಿ ವ್ಯಾಪಾರಿಯೊಬ್ಬರ ಬಳಿ ಬಿಟ್ಟಿಯಾಗಿ ಗುಟ್ಕಾ, ಸಿಗರೇಟ್ ಹಾಗೂ ಆತನ ಸಂಪಾದನೆ ಮಾಡಿದ್ದ ಹಣವನ್ನು ಕಿತ್ತುಕೊಂಡು ಹೋಗಿರುವ ಘಟನೆ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರತಿದಿನ ರಾತ್ರಿ ಬಂದು ವ್ಯಾಪಾರಿಯ ಬಳಿ ತನಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಹಣ ಕೊಡದೇ ಹೋಗುತ್ತಿದ್ದರು. ಹಣ ಕೇಳಿದರೆ ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಬಂದೂಕಿನಿಂದ ಶೂಟ್ ಮಾಡಿ ಬಿಸಾಕ್ತೀನಿ ಎಂದು ಜೀವ ಬೆದರಿಕೆ ಹಾಕಿ ಹೋಗುತ್ತಿದ್ದರು.

ಬೆಂಗಳೂರು ನಕಲಿ ಟ್ರಾಫಿಕ್ ಪೊಲೀಸರು; ವಾಟ್ಸಾಪ್‌ಗೆ ಸಂಚಾರಿ ನಿಯಮ ಉಲ್ಲಂಘಿಸಿದ ಫೋಟೋ ಕಳಿಸಿ ದಂಡ ವಸೂಲಿ

ಆದರೆ, ಮೇ 17ರಂದು ವ್ಯಾಪಾರಿಯ ಬಳಿಯಿದ್ದ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಕಿತ್ತುಕೊಂಡಿದ್ದಲ್ಲದೇ ಆತನ ಬಳಿಯೇ ಹಣ ಕೊಡು ಎಂದು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಅಸಲಿ ಪೊಲೀಸರು ವಾಹನದಲ್ಲಿ ಬರುತ್ತಿದ್ದುದನ್ನು ಕಂಡು ಅಲ್ಲಿಂದ ನಕಲಿ ಪೊಲೀಸ್ ಅಸಾಲಿ ಪರಾರಿ ಆಗಿದ್ದಾನೆ. ಆಗ ವ್ಯಾಪಾರಿಗೆ ಆತ ನಕಲಿ ಪೊಲೀಸ್ ಎಂದು ತಿಳಿದುಬಂದಿದೆ. ಸ್ಥಳೀಯರ ವಿಚಾರಿಸಲಾಗಿ, ನಕಲಿ ಪೊಲೀಸರ ರೀತಿ ವಂಚಿಸುತ್ತಿದ್ದ ವ್ಯಕ್ತಿಯನ್ನು ನಿತೇಶ್ ಎಂದು ಹೇಳಿದ್ದಾರೆ. ಈತನ ಕೃತ್ಯದಿಂದ ಪ್ರತಿನಿತ್ಯ ನೂರಾರು ರೂ. ಹಣವನ್ನು ನಷ್ಟ ಅನುಭವಿಸುತ್ತಿದ್ದ ವ್ಯಾಪಾರಿ ಅರ್ಜುನ್ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವ್ಯಾಪಾರಿ ಅರ್ಜುನ್ ಬಸವೇಶ್ವರ ನಗರ ಬಳಿಯ ಮಂಜುನಾಥ್ ನಗರದ ಮೋದಿ ಬ್ರಿಡ್ಜ್ ಬಳಿ ರಾತ್ರಿ ವೇಳೆ ಟಿ-ಕಾಫಿ, ಸಿಗರೇಟ್ ಮಾರಾಟ ಮಾಡುತ್ತಿದ್ದನು. ಅಲ್ಲಿಗೆ ಪೊಲೀಸ್ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬರುತ್ತಿದ್ದ ಆರೋಪಿ ನಿತೇಶ್ ಸಿಗರೇಟ್, ಗುಟ್ಕಾ ಹಾಗೂ ಹಣಕ್ಕಾಗಿ ಬೇಡಿಕೆ ಇಟ್ಟು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದನು. ಈ ವೇಳೆ ಅದೇ ರಸ್ತೆಗೆ ಎಂಟ್ರಿ ಕೊಟ್ಟ ಅಸಲಿ ಪೊಲೀಸರನ್ನು ಕಂಡು ನಕಲಿ ಪೊಲೀಸ್ ಅಲ್ಲಿಂದ ಪರಾರಿ ಆಗಿದ್ದನು. ಇನ್ನು ವ್ಯಾಪಾರಿ ಕೊಟ್ಟ ದೂರನ್ನು ಆಧರಿಸಿ ಬಸವೇಶ್ವರ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ನಕಲಿ ಟ್ರಾಫಿಕದ ಪೊಲೀಸರಿಂದ ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ:  ಪಶ್ಚಿಮ ಬಂಗಾಳದ ಗ್ಯಾಂಗ್ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಾಟ್ಸಾಪ್‌ಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಫೋಟೋ ಕಳಿಸಿ ದಂಡ ವಸೂಲಿ ಮಾಡುತ್ತಿದ್ದುದು ಕಂಡುಬಂದಿದೆ. ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ ಬಿನ್ ಬಹ್ಮದೇವ್ ಪೋರ್ಬಿ, ಇಸ್ಮಾಯಿಲ್ ಅಲಿ ಬಿನ್ ಅನಸರ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಬಿನ್ ಸುಶೀಲ್ ಮಲ್ಲಿಕ್ ಎಂಬ ವಂಚಕರನ್ನು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ಮೋಜಿಗಾಗಿ ವಾರಕ್ಕೆರಡು ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕ ಅರೆಸ್ಟ್!

ಮೊಬೈಲ್‌ಗೆ ಯುಪಿಐ ಐಡಿ ಕಳಿಸಿ ದಂಡ ವಸೂಲಿ: ವಾಹನ ಸವಾರರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಹಾಗೂ ಇತರೆ ಸಣ್ಣ ಪುಟ್ಟ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ನಂತರ, ವಾಹನ ಸವಾರರ ಮೊಬೈಲ್ ನಂಬರ್ ಹುಡುಕಿ ಅವರಿಗೆ ವಾಟ್ಸಾಪ್ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಫೋಟೋಗಳನ್ನು ಕಳಿಸಿ ದಂಡದ ಮೊತ್ತವನ್ನೂ ಕಳಿಸುತ್ತಿದ್ದರು. ಇನ್ನು ಬಹುತೇಕರಿಗೆ ವಾಟ್ಸಾಪ್ ಮೂಲಕ ಯುಪಿಐ ಐಡಿ ಹಾಗೂ ಕ್ಯೂ ಆರ್ ಕೋಡ್ ಸ್ಕ್ಯಾನ್ ಕಳಿಸಿ ಮೊಬೈಲ್ ಮೂಲಕವೇ ಹಣ ಪಾವತಿಸಿಕೊಳ್ಳುತ್ತಿದ್ದರು. 

click me!