ವಿದ್ಯುತ್ ಕಂಬದ ಮೇಲೇರಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಹುಚ್ಚಾಟ ಮಾಡಿದ ಘಟನೆ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ನಡೆದಿದೆ.
ಬೆಳಗಾವಿ (ಮೇ.26): ವಿದ್ಯುತ್ ಕಂಬದ ಮೇಲೇರಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಹುಚ್ಚಾಟ ಮಾಡಿದ ಘಟನೆ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ನಡೆದಿದೆ.
ಟಿಳಕವಾಡಿ ಚೌಕ್, ಸುತ್ತಮುತ್ತಲಿನ ಪ್ರದೇಶದಲ್ಲಿರುವ ಅಂಗಡಿಮುಂಗಟ್ಟುಗಳ ಮುಂದೆ ವಾಸವಾಗಿದ್ದ ಮಾನಸಿಕ ಅಸ್ವಸ್ಥ. ಇದ್ದಕ್ಕಿದ್ದಂತೆ ಅಪಾಯಕಾರಿ ವಿದ್ಯುತ್ ಏರಿ 'ಏ ದೋಸ್ತೀ ಹಮ್ ನಹೀ ಚೋಡೇಂಗೆ' ಎಂದು ಹಾಡು ಹಾಡುತ್ತ ಒಂದು ತಾಸು ಕಂಬದ ಮೇಲೆ ಕುಳಿತಿದ್ದಾನೆ. ಇದನ್ನ ಗಮನಿಸಿದ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರೀತಿ ನಿರಾಕರಿಸಿದಳೆಂದು ಯುವತಿ ಮನೆಗೆ ಕಲ್ಲು ತೂರಿದ ಪಾಗಲ್ ಪ್ರೇಮಿ!
ವಿದ್ಯುತ್ ಶಾಕ್ ಹೊಡೆದರೆ ಏನು ಗತಿ ಎಂದು ಸಾರ್ವಜನಿಕರು ಸಹ ಆತಂಕಗೊಂಡಿದ್ದರು. ಕೆಳಗಿಳಿಯಲು ಹೇಳಿದರೆ ಇಳಿಯದ ಮಾನಸಿಕ ಅಸ್ವಸ್ಥ ಯುವಕ ಕಂಬದ ಮೇಲೆ ತಾಸುಗಟ್ಟಲೆ ಕುಳಿತು ಹಾಡುಹಾಡುತ್ತಾ ಹುಚ್ಚಾಟ ಮಾಡಿದ್ದಾನೆ. ಘಟನೆಯ ದೃಶ್ಯವನ್ನು ಕೆಲವರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಥಳಕ್ಕೆ ಬಂದ ಹೆಸ್ಕಾಂ ಸಿಬ್ಬಂದಿಯಿಂದ ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ವಿದ್ಯುತ್ ಕಂಬದ ಮೇಲೆ ಏರಿದ್ದಾಗ ವಿದ್ಯುತ್ ಇರಲಿಲ್ಲ ಹೀಗಾಗಿ ಯುವಕ ಬಚಾವ್ ಆಗಿದ್ದಾನೆ. ಹೀಗೆ ಎಲ್ಲೆಂದರಲ್ಲೆ ಮಲಗಿ ವಿದ್ಯುತ್ ಕಂಬ ಏರುತ್ತಿದ್ದಾರೆ ಕಾಯುವವರು ಯಾರು? ಮಾನಸಿಕ ಅಸ್ವಸ್ಥನಿಗೆ ಮೋಜು ಆದರೆ ಹೆಸ್ಕಾಂ ಇಲಾಖೆಗೆ ಪೀಕಲಾಟ ಆಗಿದೆ.