ಸೋಲು ಗ್ಯಾರಂಟಿ ಇದ್ದರೂ ಮೈದಾನಕ್ಕಿಳಿದ ಕಾಂಗ್ರೆಸ್: ಅವಿಶ್ವಾಸ ನಿರ್ಣಯ ಮಂಡಿಸಿದ್ದೇಕೆ?

Aug 4, 2023, 9:01 PM IST

ಬೆಂಗಳೂರು (ಆ.04): ಸೋಲು ಗ್ಯಾರಂಟಿ ಇದ್ದರೂ, ಅವಿಶ್ವಾಸ ನಿರ್ಣಯ ಮಂಡಿಸಿದ್ದೇಕೆ ಕಾಂಗ್ರೆಸ್..? ನಂಬರ್ ಗೇಮ್ನ್ನೂ ಮೀರಿದೆ..ಮೋದಿ ವಿರುದ್ಧ ಯುದ್ಧದ ಲೆಕ್ಕ..! ಸೋಲು ಗೆಲುವು ಮುಖ್ಯವೇ ಅಲ್ಲ. ಆಟ ಬೇರೇನೇ ಇದೆ..! ಸೋಲುವ ಯುದ್ಧದಲ್ಲಿ ಮೋದಿ ವಿರೋಧಿಗಳ ರಣೋತ್ಸಾಹ ಏನಿದು ಅವಿಶ್ವಾಸದ ಆಟ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅವಿಶ್ವಾಸ ಆಯುಧ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನ ಬೀಳಿಸಬೇಕು, ತಾವು ಅಧಿಕಾರಕ್ಕೆ ಏರಬೇಕು ಅನ್ನೋ ನಿಟ್ಟಿನಲ್ಲಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ 26 ಪಕ್ಷಗಳು ಅವಿಶ್ವಾಸ ಮಂಡಿಸಿವೆ. ಎಲ್ಲಾ ಪಕ್ಷಗಳಿಗೂ ಗೊತ್ತು ಅವಿಶ್ವಾಸ ಮಂಡನೆಯಿಂದ ಮೋದಿಯನ್ನ ಕೆಡವೋಕೆ ಆಗೋದಿಲ್ಲಾ ಅನ್ನೋದು. ಯಾಕೆಂದ್ರೆ ಅವಿಶ್ವಾಸ ಅಂಕೆ ಸಂಖ್ಯೆಯ ಆಟದಲ್ಲಿ ಮೋದಿ ಊಹೆಗೂ ಮೀರಿದ ಅಂತರದಲ್ಲಿ ಮುಂದಿದ್ದಾರೆ. 

ಪ್ರತಿ ಪಕ್ಷಗಳು ಯಾಕಾಗಿ ಸೋಲುವ ಆಟಕ್ಕೆ ಇಳಿತು..? ಪರಾಜಯ ಪಕ್ಕಾ ಅಂತ ಗೊತ್ತಿದ್ರೂ ಕೂಡ ಮೋದಿ ವಿರುದ್ಧ ಅವಿಶ್ವಾಸದ ಯುದ್ಧಕ್ಕೆ ರಣಕಹಳೆ ಮೊಳಗಿಸಿತು..? ಅವಿಶ್ವಾಸ ಮಂಡನೆಯಿಂದ ಮೋದಿ ಸರ್ಕಾರಕ್ಕೆ ಅಪಾಯ ಆಗಬಲ್ಲದಾ..?  2024ರ ಲೋಕ ಸಮರಕ್ಕೆ ಎಲ್ಲಾ ಪಕ್ಷಗಳ ಸಮರ ತಾಲೀಮು ಶುರುವಾಗಿದೆ. ಮೋದಿಯನ್ನ ಮಣಿಸಬೇಕು , ಮೂರನೇ ಅವಧಿಯ ಅಜೇಯ ಓಟಕ್ಕೆ ಬ್ರೇಕ್ ಹಾಕಬೇಕು ಅನ್ನೋ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಪ್ರತಿ ಪಕ್ಷಗಳು ಯುದ್ಧ ತಂತ್ರ ರೂಪಿಸ್ತಾ ಇವೆ. ಅದರ ಒಂದು ಭಾಗವೇ ಅವಿಶ್ವಾಸ ಮಂಡನೆ. ಏನಿದು ಅವಿಶ್ವಾಸ ಮಂಡನೆ ಅನ್ನೋದನ್ನ ಮೊದಲು ಹೇಳಿ ಬಿಡ್ತೀವಿ ಕೇಳಿ. ಪ್ರಮುಖವಾಗಿ ಆಡಳಿತ ಪಕ್ಷವನ್ನ ನಂಬಿಕೆಯ ಆಟದಲ್ಲಿ ಸೋಲಿಸೋ ಅಂಕಿ ಅಂಶಗಳ ಆಟವಿದು. ಆಡಳಿತ ಸರ್ಕಾರದ ವಿರುದ್ಧ ವಿಶ್ವಾಸವಿಲ್ಲ ಅನ್ನೋದನ್ನ ಸಂಸತ್ತಿನಲ್ಲಿ ಸಾಬೀತು ಮಾಡೋದು. 

ಇದು ಏಕಾಏಕಿ ಸಂಸತ್ ಒಳಗೆ ನಡೆಯುವ ಪ್ರಕ್ರಿಯೆ ಖಂಡಿತ ಅಲ್ಲ.. ಸಾಕಷ್ಟು ಹಂತಗಳು ಇವೆ. ಪ್ರತಿಪಕ್ಷಗಳು ಅವಿಶ್ವಾಸ ಮಂಡನೆಗೆ ಅವಕಾಶ ಕೋರಬೇಕಾಗುತ್ತೆ. ಅದನ್ನು ಸ್ಪೀಕರ್ ಮಾನ್ಯ ಮಾಡಿ, ನಿಗದಿ ಪಡಿಸಿದ ದಿನಾಂಕದಂದು ಮತದಾನ ನಡೆಯುತ್ತೆ. ಇಲ್ಲಿ ಕೂಡ ಮ್ಯಾಜಿಕ್ ನಂಬರಿನದ್ದೇ ಆಟ. ಆಡಳಿತ ಪಕ್ಷಕ್ಕೆ ಮ್ಯಾಜಿಕ್ ನಂಬರ್ ಸಿಗದೇ ಇದ್ದಲ್ಲಿ ಸರ್ಕಾರ ಬಿದ್ದಂತೆ ಲೆಕ್ಕ. ಅವಿಶ್ವಾಸ ಮಂಡನೆ ಹೇಗೆ ಕಾಣಿಸ್ತಾ ಇದೆ ಅಂದ್ರೆ ಮೋದಿಯನ್ನ ಬೆದರಿಸೋಕೆ ಮದ್ದೇ ಇಲ್ಲದ ಪಟಾಕಿಯನ್ನ ಹಚ್ಚಿದಂತೆ. ಮೋದಿ ಬಳಿ ಇರೋ ಸಂಸದರ ಸಂಖ್ಯೆ ಕಾಂಗ್ರೆಸ್ಸಿಗೆ ಗೊತ್ತಿಲ್ಲವಾ..? ಇದೊಂದು ಆಟದಲ್ಲಿ ತಮಗೇ ಸೋಲು ಕಟ್ಟಿಟ್ಟ ಬುತ್ತಿ ಅನ್ನೋ ಅರಿವಿದ್ದರೂ 26 ಪಕ್ಷಗಳು ಅವಿಶ್ವಾಸ ಮಂಡಿಸಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಎಲೆಕ್ಷನ್ ತಯಾರಿ ಅಲ್ಲದೇ ಇನ್ನೇನು ಅಲ್ಲ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.