Party Rounds: ಬಿಜೆಪಿ ಮೂರನೇ ಪಟ್ಟಿಯಲ್ಲೂ ಹಿರಿಯರಿಗೆ ಟಿಕೆಟ್‌ ಡೌಟು!

Apr 13, 2023, 10:12 PM IST

ಬೆಂಗಳೂರು (ಏ.12): ಕರ್ನಾಟಕ ವಿಧಾನಸಭೆ ಚುನಾವಣೆಯ ಮೊದಲ ಪಟ್ಟಿ ಬಿಡುಗಡೆಗೆ ಒಂದು ಸುದ್ದಿಗೋಷ್ಠಿ ಮಾಡಿ ವ್ಯವಸ್ಥಿತವಾಗಿ ಹೆಸರನ್ನು ಘೋಷಣೆ ಮಾಡಿದ್ದ ಬಿಜೆಪಿ ಪಕ್ಷ ತನ್ನ 2ನೇ ಲಿಸ್ಟ್‌ಅನ್ನು ಹೆಚ್ಚಿನ ಸುದ್ದಿಯಲ್ಲದೆ ಒಂದು ಪಿಡಿಎಫ್‌ ಫೈಲ್‌ ಹಂಚಿಕೊಳ್ಳುವ ಮೂಲಕ ಬಿಡುಗಡೆ ಮಾಡಿದೆ.

2ನೇ ಪಟ್ಟಿಯಲ್ಲಿ ಬಿಜೆಪಿ 23 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಅದರೊಂದಿಗೆ ಒಟ್ಟು 212 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಆದಂತಾಗಿದೆ. ಇನ್ನೂ 12 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಬಾಕಿ ಇದ್ದು, ಇದರಲ್ಲೂ ಹಿರಿಯರಿಗೆ ಟಿಕೆಟ್‌ ಅನುಮಾನ ಎನ್ನುವ ಲಕ್ಷಣಗಳ ಕಾಣುತ್ತಿವೆ.

Party Rounds: ಬಿಜೆಪಿ ಟಿಕೆಟ್‌ ಲಿಸ್ಟ್‌ ನೋಡಿ ಪ್ರಧಾನಿ ಮೋದಿ ಹೇಳಿದ್ದೇನು?

ಒಂದೆಡೆ ಜಗದೀಶ್‌ ಶೆಟ್ಟರ್‌ ತಮ್ಮ ವರಸೆ ಬದಲಾಯಿಸಿದ್ದು, ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ತನಗೆ ಟಿಕೆಟ್‌ ನೀಡದೇ ಇದ್ದರೂ, ತಾವು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್‌ಗೂ ಟಿಕೆಟ್‌ ಮಿಸ್‌ ಆಗುವ ಸಾಧ್ಯತೆ ಇದೆ.