ಕ್ರೆಡಿಟ್ ಕಾರ್ಡ್, ಎಲ್‌ಪಿಜಿಯಿಂದ ಹಿಡಿದು ರೈಲು ಟಿಕೆಟ್‌ವರೆಗೆ; ನವೆಂಬರ್ 1ರಿಂದ ಬದಲಾಗಲಿದೆ ಈ 6 ನಿಯಮಗಳು

By Mahmad RafikFirst Published Oct 31, 2024, 4:20 PM IST
Highlights

ನವೆಂಬರ್ 1 ರಿಂದ ಕ್ರೆಡಿಟ್ ಕಾರ್ಡ್, ಎಲ್‌ಪಿಜಿ, ರೈಲು ಟಿಕೆಟ್ ಸೇರಿದಂತೆ ಹಲವು ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಿದ್ದು, ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಬೆಂಗಳೂರು: ಪ್ರತಿ ತಿಂಗಳು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾತ್ತಿರುತ್ತವೆ. ಕ್ರೆಡಿಟ್ ಕಾರ್ಡ್, ಎಲ್‌ಪಿಜಿ ಮತ್ತು ರೈಲು ಟಕೆಟ್‌ನಿಂದ ಎಫ್‌ಡಿ ಡೆಡ್‌ಲೈನ್‌ವರೆಗೆ ನವೆಂಬರ್ 1ರಿಂದ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಈ ನಿಯಮಗಳ ಬದಲಾವಣೆ ನೇರವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಬದಲಾಗುತ್ತಿರುವ ನಿಯಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಈ ಲೇಖನದಲ್ಲಿ ಬದಲಾಗುತ್ತಿರುವ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.

ಎಲ್‌ಪಿಜಿ ಸಿಲಿಂಡರ್ ಬೆಲೆ
ಪ್ರತಿ ತಿಂಗಳು ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. ಹೊಸ ಬೆಲೆಗಳು ತಿಂಗಳ ಮೊದಲ ದಿನದಿಂದಲೇ ಅನ್ವಯವಾಗುತ್ತವೆ. ಗೃಹಬಳಕೆಯ 14 ಕೆಜಿ ಮತ್ತು ವಾಣಿಜ್ಯ ಬಳಕೆಯ 19 ಕೆಜೆ ಸಿಲಿಂಡರ್ ಬೆಲೆಗಳನ್ನು ತಿಳಿದುಕೊಳ್ಳಬೇಕು. ಜುಲೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡಿತ್ತು. ನಂತರ ಮೂರು ತಿಂಗಳ ಬೆಲೆ ಏರಿಕೆಯಾಗುತ್ತಿದ್ರೆ, ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. 

Latest Videos

ATF ಮತ್ತು CNG-PNG ಬೆಲೆಗಳು
ಎಲ್‌ಪಿಜಿ ಸಿಲಿಂಡರ್ ಬೆಲೆ ಜೊತೆಯಲ್ಲಿ ಪೆಟ್ರೋಲಿಯಂ ಕಂಪನಿಗಳು ಸಿಎನ್‌ಜಿ-ಪಿಎನ್‌ಜಿ ಮತ್ತು ಏರ್‌ ಟರ್ಬನ್ ಫ್ಯೂಲ್ (ATF) ದರಗಳನ್ನು ಪರಿಷ್ಕರಣೆ ಮಾಡುತ್ತದೆ. ಹಾಗಾಗಿ ಇವುಗಳ ದರದಲ್ಲಿಯೂ ವ್ಯತ್ಯಾಸ ಆಗುತ್ತಿರುತ್ತದೆ.

ಕ್ರೆಡಿಟ್ ಕಾರ್ಡ್‌ ನಿಯಮಗಳು  
ನವೆಂಬರ್ 1ರಿಂದ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಎಸ್‌ಬಿಐ ಕಾರ್ಡ್‌ನಲ್ಲಿ (SBI Card) ಮಹತ್ವದ ಬದಲಾವಣೆ ಉಂಟಾಗಲಿದೆ. ಈ ಕಾರ್ಡ್ ಮೂಲಕ ಯುಟಿಲಿಟಿ ಬಿಲ್ ಪೇಮೆಂಟ್ಸ್ ಮತ್ತು ಫೈನಾನ್ಸ್ ಚಾರ್ಜ್ ಮಾಡುವ ಬಳಕೆದಾರರು ನವೆಂಬರ್ 1ರಿಂದ  ಪ್ರತಿ ತಿಂಗಳು ಅನ್‌-ಸೆಕ್ಯೂರ್ಡ್ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೇಲೆ 3.75 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. 50 ಸಾವಿರಕ್ಕೂ ಅಧಿಕ ಮೌಲ್ಯದ ವಹಿವಾಟುಗಳ ಮೇಲೆ ಶೇ.1ರಷ್ಟು ಹೆಚ್ಚುವರಿ ಚಾರ್ಜ್ ಮಾಡಲಾಗುತ್ತದೆ. 

ಹಣ ವರ್ಗಾವಣೆ ನಿಯಮಗಳು
ಭಾರತೀಯ ರಿಸರ್ವ್ ಬ್ಯಾಂಕ್ (RBI) ಡೊಮೆಸ್ಟಿಕ್ ಮನಿ ಟ್ರಾನ್ಸ್ಫರ್ (DMT) ಗಾಗಿ ಹೊಸ ನಿಯಮಗಳನ್ನು ಘೋಷಣೆ ಮಾಡಿದೆ. ಈ ನಿಯಮಗಳು ನವೆಂಬರ್ 1, 2024ರಿಂದ ಜಾರಿಗೆ ಬರಲಿವೆ. ಬ್ಯಾಂಕಿಂಗ್ ವಂಚನೆಗಳನ್ನು ತಡೆಯಲು ಹೊಸ ನಿಯಮಗಳನ್ನು ರಿಸರ್ವ್ ಬ್ಯಾಂಕ್ ತಂದಿದೆ. 

ಇದನ್ನೂ ಓದಿ: ನ.1ರಿಂದ UPI ಪಾವತಿಯಲ್ಲಿ 2 ಬದಲಾವಣೆ; ಗೂಗಲ್ ಪೇ, ಫೋನ್‌ಪೇ,ಪೇಟಿಎಂ ಬಳಕೆದಾರರೇ ಗಮನಿಸಿ!

ರೈಲು ಟಿಕೆಟ್‌ ಬದಲಾವಣೆ 
ಭಾರತೀಯ ರೈಲ್ವೇಯ ರೈಲು ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯ ಅವಧಿಯು (ARP) ಪ್ರಯಾಣದ ದಿನವನ್ನು ಒಳಗೊಂಡಿಲ್ಲ, ನವೆಂಬರ್ 1, 2024 ರಿಂದ 120 ದಿನಗಳಿಂದ 60 ದಿನಗಳವರೆಗೆ ಕಡಿಮೆಯಾಗಿದೆ. ಟಿಕೆಟ್ ಖರೀದಿ ಪ್ರಕ್ರಿಯೆಯನ್ನು ಸರಳೀಕರಿಸುವ ಉದ್ದೇಶದಿಂದ ಮುಂಗಡ ಬುಕ್ಕಿಂಗ್ ದಿನದ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿಕೆ ಬಿಡುಗಡೆ ಮಾಡಿದೆ. 

13 ದಿನ ಬ್ಯಾಂಕ್ ರಜೆ 
ನವೆಂಬರ್-2024ರಲ್ಲಿ ಬ್ಯಾಂಕ್‌ಗಳು 13 ದಿನ ಬಂದ್ ಆಗಲಿವೆ. ಈ ಹಿನ್ನೆಲೆ ಬ್ಯಾಂಕ್‌ಗೆ ತೆರಳಿ ಹಣಕಾಸಿನ ವ್ಯವಹಾರ ಮಾಡುವ ಗ್ರಾಹಕರು ರಜಾದಿನಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದಿಷ್ಟ ರಾಷ್ಟ್ರೀಯ ರಜಾದಿನಗಳನ್ನು ಪಟ್ಟಿ ಮಾಡಿದೆ, ಇದರಿಂದ ಗ್ರಾಹಕರು ಸೇವೆಯಲ್ಲಿನ ಅಡಚಣೆಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬಹುದು.

ಇದನ್ನೂ ಓದಿ: ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ 13 ದಿನ ರಜೆ: ರಜಾ ಪಟ್ಟಿ ಇಲ್ಲಿದೆ!

click me!