ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಲವ್ ಮಾಕ್ಟೇಲ್ 2 ಸುಂದರಿ ರೆಚೆಲ್ ಡೇವಿಡ್

Published : Oct 31, 2024, 04:07 PM ISTUpdated : Nov 01, 2024, 08:41 AM IST

ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಸಿಹಿ ಪಾತ್ರದ ಮೂಲಕ ಮೋಡಿ ಮಾಡಿದ ನಟಿ ರೆಚೆಲ್ ಡೇವಿಡ್ ಇದೀಗ ಸುದ್ದಿಯೇ ಇಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.   

PREV
17
ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಲವ್ ಮಾಕ್ಟೇಲ್ 2 ಸುಂದರಿ ರೆಚೆಲ್ ಡೇವಿಡ್

ಲವ್ ಮಾಕ್ಟೇಲ್ ಸೀಕ್ವಲ್  (love mocktail 2) ಸಿನಿಮಾದಲ್ಲಿ ಸಿಹಿ ಪಾತ್ರದ ಮೂಲಕ ರಂಜಿಸಿದ ಬೆಡಗಿ ರೆಚೆಲ್ ಡೇವಿಡ್. ಸಿಹಿಯ ಮುದ್ದು ಮುದ್ದಾದ ಪಾತ್ರವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಆದಿಯನ್ನು ಸಿಕ್ಕಾಪಟ್ಟೆ ಇಷ್ಟಪಡುವ ಪಾತ್ರ ಇದಾಗಿತ್ತು. 

27

ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿಯನ್ನು ಬಾಲ್ಯದಿಂದಲೇ ಇಷ್ಟಪಡುವ, ಆದಿಯ ಪ್ರತಿಯೊಂದು ಹೆಜ್ಜೆಯನ್ನು ಗಮನಿಸಿಕೊಂಡು ಬಂದಿರುವ, ಅವನ ಲವ್ ಸ್ಟೋರಿ ಬ್ರೇಕ್ ಅಪ್ ಸ್ಟೋರಿ, ಮದುವೆ, ಹೆಂಡ್ತಿ ಸಾವು ಎಲ್ಲಾದ್ರ ಬಗ್ಗೆಯೂ ತಿಳ್ಕೊಂಡು, ಇವತ್ತಿಗೂ ಆದಿಗಾಗಿ ಕಾಯ್ತಿರೋ ಹುಡುಗಿಯಾಗಿ ರೆಚೆಲ್ (Rachel David) ನಟಿಸಿದ್ದರು. 
 

37

ಇದೀಗ ರೆಚೆಲ್ ಡೇವಿಡ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದಾರೆ. ಇವರ ಮದುವೆಯ ಮುದ್ದಾದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಮದುವೆ ಕೇರಳದ ಚರ್ಚ್ ನಲ್ಲಿ ನಡೆದಂತೆ ಕಾಣಿಸ್ತಿದೆ. ಕ್ರಿಶ್ಚಿಯನ್ ವೆಡ್ಡಿಂಗ ಭಾರಿ ಅದ್ಧೂರಿಯಾಗಿ ನಡಿದಿದೆ. ರೇಚೆಲ್ ವೈಟ್ ಗೌನ್ ಜೊತೆಗೆ ವೈಟ್ ಸ್ನೀಕರ್ ಧರಿಸಿದ್ರೆ, ಪತಿ ಬ್ಲ್ಯಾಕ್ ಆಂಡ್ ವೈಟ್ ಫಾರ್ಮಲ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

47

ಅಂಟೋ ಫಿಲಿಪ್ ಎನ್ನುವವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ರೆಚೆಲ್ ಗೆ ಲವ್ ಮಾಕ್ಟೇಲ್ ಸಿನಿಮಾದ ಸಹ ನಟಿಯರಾದ ಮಿಲನಾ ನಾಗರಾಜ್ (Milana Nagraj), ಅಮೃತ ಅಯ್ಯಂಗಾರ್ ಸೇರಿ ಹಲವು ತಾರೆಯರು ಶುಭ ಕೋರಿದ್ದಾರೆ. ಸದ್ಯಕ್ಕೆ ನಟಿ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಎಂಜಾಯ್ ಮಾಡ್ತಿದ್ದಾರೆ. 
 

57

ಬೆಂಗಳೂರಿನ ಹುಡುಗಿಯಾಗಿರುವ ರೆಚೆಲ್ ಡೇವಿಡ್, ಮಲಯಾಲಂ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ಜೊತೆ ಇರುಪತಿಯೊನ್ನಾಮ್ ನೂಟಾನ್ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದರು. ನಂತರ ಮತ್ತೊಂದು ಮಲಯಾಲಂ ಸಿನಿಮಾ ಒರೊನೊನ್ನಾರ ಪ್ರಣಯಕಥಾ ಹಾಗೂ ಕಾವಲ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. 
 

67

ಇದಾದ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚೇಲ್ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ನಟಿಸಿ ಜನಮನ ಗೆದ್ದರು. ಇತ್ತೀಚೆಗೆ ಚೆಫ್ ಚಿದಂಬರ ಸಿನಿಮಾದಲ್ಲೂ ನಟಿಸಿದ್ದರು. ಅಷ್ಟೇ ಅಲ್ಲ ಎರಡು ಸಿನಿಮಾಗಳು ನಟಿಯ ಕೈಯಲ್ಲಿದ್ದು ಭುವನಂ ಗಗನಂ ಎನ್ನುವ ಕನ್ನಡ ಸಿನಿಮಾ , ಹಾಗೂ ವಾಕಿಂಗ್ ಟಾಕಿಂಗ್ ಸ್ಟ್ರಾಬೆರ್ರಿ ಐಸ್ ಕ್ರೀಂ ಎನ್ನುವ ತಮಿಳು ಸಿನಿಮಾದಲ್ಲಿ ನಟಿ ನಟಿಸುತ್ತಿದ್ದಾರೆ. 
 

77

ರಚೇಲ್ ಹೆಚ್ಚಾಗಿ ತಮ್ಮ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಇತ್ತೀಚೆಗೆ ಅವರು ತಮ್ಮ ಜೀವನ ಸಂಗಾತಿಯಾಗುವ ಹುಡುಗ ಪ್ರಪೋಸ್ ಮಾಡಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದರು. ಇಬ್ಬರು ಜೊತೆಯಾಗಿರುವ ಹಲವು ಫೋಟೊಗಳು ಸೊಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿತ್ತು, ಇದೀಗ ಜೋಡಿ ಮದುವೆಯಾಗುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. 
 

Read more Photos on
click me!

Recommended Stories