Nov 9, 2023, 3:25 PM IST
ಆಪರೇಷನ್ ಗುಮ್ಮ.. ಇದು ನವೆಂಬರ್ ಆಪರೇಷನ್ ಗುಮ್ಮ. ಒಬ್ಬರದ್ದು ಆಪರೇಷನ್(operation) ಆಟ, ಮತ್ತೊಬ್ಬರದ್ದು ರಿವರ್ಸ್ ಆಪರೇಷನ್ ಜೂಟಾಟ. ನವೆಂಬರ್ 15ಕ್ಕೆ ಕಾದಿದ್ಯಂತೆ ರಾಜಕೀಯ ಕ್ಷಿಪ್ರಕ್ರಾಂತಿ.135 ಶಾಸಕರ ಬಲದ ಕಾಂಗ್ರೆಸ್(congress) ಸರ್ಕಾರಕ್ಕೂ ಆಪರೇಷನ್ ಭೀತಿ... 65 ಶಾಸಕರ ಬಲವಿರೋ ಬಿಜೆಪಿಗೂ(bjp) ಆಪರೇಷನ್ ಆತಂಕ.. ಕೇವಲ 19 ಶಾಸಕರಿದ್ರೂ ದಳಪತಿಗಳಿಗೂ ಆಪರೇಷನ್ ಭಯ. ಆ ಆಪರೇಷನ್ ಆಟಕ್ಕೀಗ ರೋಚಕ ತಿರುವು ಸಿಕ್ಕಿದೆ. ಆಪರೇಷನ್ ಆಟಕ್ಕೆ ನವೆಂಬರ್ 15ರ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಕಾಂಗ್ರೆಸ್ ಪಾಳೆಯದ ಆಪರೇಷನ್ ಬೇಟೆಗಾರ, ಕನಕವೀರ ಡಿಕೆ ಶಿವಕುಮಾರ್(DK shivakumar). ಇಡೀ ದೇಶವೇ ತಿರುಗಿ ನೋಡುವಂತೆ ಚುನಾವಣೆ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿದಿರೋ ಕಾಂಗ್ರೆಸ್ ಒಂದ್ಕಡೆ.. ಎಲೆಕ್ಷನ್'ನಲ್ಲಿ ಸೋತು ಸುಣ್ಣವಾಗಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಮತ್ತೊಂದ್ಕಡೆ.. ಇಬ್ಬರ ಮಧ್ಯೆ ನಿಜಕ್ಕೂ ಆಪರೇಷನ್ ಭಯ ಏನಾದ್ರೂ ಇದ್ರೆ ಅದು ಜೆಡಿಎಸ್'ಗೆ. ದಳಪತಿಗಳಿಗೆ ಇಂಥದ್ದೊಂದು ಭಯ ಹುಟ್ಟಲು ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುರು ಮಾಡಿರೋ ರಾಜಕೀಯ ಚದುರಂಗದಾಟ. ಯೆಸ್. ಕಾಂಗ್ರೆಸ್"ಗೆ ಕರ್ನಾಟಕ ಕುರುಕ್ಷೇತ್ರ ಗೆದ್ದು ಕೊಟ್ಟ ಭಲೇ ಜೋಡಿಯೀಗ ಮತ್ತೊಂದು ಆಟಕ್ಕೆ ಕೈ ಹಾಕಿದೆ, ಅದೇ ಆಪರೇಷನ್ ಆಟ.
ಇದನ್ನೂ ವೀಕ್ಷಿಸಿ: ಉಗ್ರಸಂಹಾರಕ್ಕೆ ಏನು ಮಾಡುತ್ತಿದೆ ಇಸ್ರೇಲ್..? ಏನು ಮಾಡಿತ್ತು ಭಾರತ..? ಏನು ಮಾಡಲಿದೆ ಇಸ್ರೇಲ್..?