Nov 12, 2023, 2:35 PM IST
ವಿಜಯೇಂದ್ರ ಪಟ್ಟಾಭಿಷೇಕದ ಹಿಂದೆ ನಮೋ-ಶಾ ನಿಗೂಢ ಲೆಕ್ಕಾಚಾರ ಅಡಗಿದೆ ಎನ್ನಲಾಗ್ತಿದೆ. ಬಿ.ಎಸ್. ಯಡ್ಯೂರಪ್ಪ(B. S. Yediyurappa) ರಾಜ್ಯ ಬಿಜೆಪಿಯ ಅಂತಃಶಕ್ತಿ. ಮುಖ್ಯಮಂತ್ರಿ ಗಾದಿಯಲ್ಲಿ ವಿಜೃಂಭಿಸಿದ ಬಿಎಸ್‌ವೈ ಈಗ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದಾರೆ. ಆದ್ರೆ ಅವರ ಪ್ರಭಾವ ಎಷ್ಟಿದೆ, ಅದರ ಪ್ರಾಧಾನ್ಯತೆ ಎಷ್ಟಿದೆ ಅನ್ನೋದು, ರಾಷ್ಟ್ರ ಬಿಜೆಪಿ ನಾಯಕರಿಗೆ ಗೊತ್ತಿಲ್ಲದ ವಿಚಾರ ಏನಲ್ಲ. ಹಾಗಾಗಿನೇ, ಲೋಕಸಮರದ ಸಂದರ್ಭದಲ್ಲಿ, ಮಹತ್ತರವಾಗಿ ನಿರ್ಣಯವೊಂದನ್ನ ಬಿಜೆಪಿ ಹೈಕಮಾಂಡ್(BJP Highcommand) ಕೈಗೆತ್ತಿಕೊಂಡಿದೆ. ಶಿಕಾರಿವೀರ, ಬಿಎಸ್ ಯಡ್ಯೂರಪ್ಪ ಪುತ್ರನಿಗೆ, ವಿಜಯ ಶಿಕಾರಿ ನಡೆಸೋಕೆ, ಪಟ್ಟಾಭಿಷೇಕ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಬಿಜೆಪಿ ಪಾಲಿಗೆ ನಿಜಕ್ಕೂ ಆಘಾತ ನೀಡಿತ್ತು. ಈ ಸೋಲಿನ ಬಳಿಕ ಕಂಗೆಟ್ಟು ಕೂತಿದ್ದ ರಾಜ್ಯ ಬಿಜೆಪಿಗೆ(BJP State President) ಈಗ ಹೊಸ ಸಾರಥಿಯ ಘೋಷಣೆಯಾಗಿದೆ. ಶಿಕಾರಿವೀರನ ಪುತ್ರ, ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ(B. Y. Vijayendra) ಅವರಿಗೆ ಕರ್ನಾಟಕ ಕಮಲ ಪಡೆಯ ಸೇನಾಧಿಪತ್ಯ ದಕ್ಕಿದೆ.. ಈ ಕ್ಷಣದಿಂದಲೇ ರಾಜ್ಯ ರಾಜಕಾರಣದ ದಿಕ್ಕುದೆಸೆ ಬದಲಾಗೋ ಸಾಧ್ಯತೆ ದಟ್ಟವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಮುಗಿದಾಗಿನಿಂದಲೂ, ಕರ್ನಾಟಕದ ಕೇಸರಿ ಕೋಟೆಯಲ್ಲಿ ಸದ್ದು ಮಾಡ್ತಿದ್ದದ್ದು ಎರಡೇ ಪ್ರಶ್ನೆ. ಮೊದಲನೇದು, ಬಿಜೆಪಿ ರಾಜ್ಯಾಧ್ಯಕ್ಷ ಯಾರು ಅನ್ನೋದು. ಇನ್ನೊಂದು ವಿರೋಧ ಪಕ್ಷದ ನಾಯಕ ಯಾರಾಗ್ತಾರೆ ಅನ್ನೋದು.. ಆದ್ರೆ ಈ ಪೈಕಿ ಮೊದಲನೇ ಪ್ರಶ್ನೆಗೆ, ಬಿಜೆಪಿ ಹೈಕಮಾಂಡ್ ಕಡೆಗೂ ಉತ್ತರ ಕೊಟ್ಟಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ.
ಇದನ್ನೂ ವೀಕ್ಷಿಸಿ: ಅಪ್ಪ ಪೊಲೀಸ್..ಅಮ್ಮ ಟೀಚರ್..ಮಗ ರೌಡಿ..! ಬರ್ತಡೇಗೆ ಬರಲ್ಲ ಅಂದಿದಕ್ಕೆ ಮುಗಿಸಿಬಿಡೋದಾ ?