Feb 15, 2023, 10:55 PM IST
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತೊಂದು ಬಾಂಬ್ ಸಿಡಿಸಿದೆ. ಬಿಜೆಪಿ ಅಧಿಕಾರ ಅವಧಿ ಇನ್ನು ಒಂದು ತಿಂಗಳು ಇದೆ. ಹೀಗಾಗಿ ತರಾತುರಿಯಲ್ಲಿ ಸರ್ಕಾರ 500 ರೂಪಾಯಿ ಟೆಂಡರ್ನ್ನು 1,000 ರೂಪಾಯಿಗೆ ಹಂಚಿಕೆ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಬೀದಿ ಬೀದಿಯಲ್ಲಿ ಕಮಿಷನ್ ನೀಡುವ ಕಾಂಟ್ರಾಕ್ಟರ್ ಹುಡುಕಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಟೆಂಡರ್ ಆರೋಪಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ದಾಖಲೆ ಸಮೇತ ಸದನದಲ್ಲಿ ಮಾತನಾಡಲಿ, ಉತ್ತರ ಕೊಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇತ್ತ ಸಿದ್ದರಾಮಯ್ಯ ಹಾಗೂ ಹೆಚ್ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.