Nov 8, 2022, 9:51 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪೌರ್ಣಮಿ ತಿಥಿ, ಇಂದು ಚಂದ್ರಗ್ರಹಣ.
ಗ್ರಹಣ ಆಗಿಯೇ ಚಂದ್ರ ಉದಯಕ್ಕೆ ಬರುವ ವಿಶೇಷ ದಿನವಾಗಲಿದೆ ಈ ಬಾರಿ ನವೆಂಬರ್ 8. ಈ ಗ್ರಹಣ ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಈ ಗ್ರಹಣ ಸಮಯವನ್ನು ನಾಲ್ಕು ವಿಭಾಗವಾಗಿ ವಿಂಗಡಿಸಲಾಗಿದೆ. ಆ ನಾಲ್ಕು ವಿಭಾಗಗಳು ಯಾವೆಲ್ಲ, ಸೂರ್ಯ, ಚಂದ್ರರ ಹೊರತಾಗಿ ಬೇರೆ ಗ್ರಹಗಳಿಗೆ ಗ್ರಹಣ ಹಿಡಿಯುವುದೇ? ಇಂದಿನ ಗ್ರಹಣದ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲ ಯಾವುದು? ಇಂದಿನ ಗ್ರಹಣ ಕುರಿತ ಸಂಪೂರ್ಣ ವಿವರವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ.
ಚಂದ್ರಗ್ರಹಣ ಹಿನ್ನೆಲೆ; ನ.8ರಂದು ಈ ದೇವಾಲಯಗಳು ಬಂದ್
ಜೊತೆಗೆ, ಚಂದ್ರಗ್ರಹಣವಾಗುತ್ತಿರುವ ಈ ಕಾರ್ತಿಕ ಪೌರ್ಣಮಿಯಂದು 12 ರಾಶಿಗಳ ಫಲಾಫಲ ಏನಿರಲಿದೆ ಎಂಬುದನ್ನೂ ಶಾಸ್ತ್ರಿಗಳು ತಿಳಿಸಿಕೊಡಲಿದ್ದಾರೆ.