ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಷ್ಟು ಮತ ಪಡೆದರು. ನಾವು ಎಷ್ಟು ಸೀಟ್ ಗೆದ್ದಿದ್ದೀವಿ ಎಂಬುದು ಜನತೆಗೆ ಗೊತ್ತಿದೆ ಎಂದ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್
ಮೈಸೂರು (ನ.26): ಬೈ ಎಲೆಕ್ಷನ್‌ನಲ್ಲಿ ನಾವು ಎಲ್ಲಿಯೂ ಎಡವಿಲ್ಲ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಗೆದ್ದಿರೋದಲ್ಲ, ಸಿ.ಪಿ. ಯೋಗೇಶ್ವರ್‌ರಿಂದ ಗೆದ್ದಿರೋದು ಎಂದು ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ ತಿಳಿಸಿದರು.
ಡಾ.ಸಿ.ಎನ್. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಷ್ಟು ಮತ ಪಡೆದರು. ನಾವು ಎಷ್ಟು ಸೀಟ್ ಗೆದ್ದಿದ್ದೀವಿ ಎಂಬುದು ಜನತೆಗೆ ಗೊತ್ತಿದೆ ಎಂದರು.
ಬೈ ಎಲೆಕ್ಷನ್ ನಲ್ಲಿ ಆಡಳಿತ ಪಕ್ಷದ ಸರ್ಕಾರಕ್ಕೆ ಹೆಚ್ಚಿನ ಅಡ್ವಾಂಟೇಜ್ ಇರುತ್ತದೆ. ಬೈ ಎಲೆಕ್ಷನ್ ನಲ್ಲಿ ಆಡಳಿತ ಪಕ್ಷ ಗೆದ್ದಿರುವಾಗ ಮಹತ್ವ ಇರೋಲ್ಲ, ಸೋತಾಗ ಮಹತ್ವ ಇರುತ್ತದೆ. ಆಡಳಿತ ಪಕ್ಷ ಜನ ವಿರೋಧಿಯಾಗಿರೋದು, ಜನರ ವಿಶ್ವಾಸ ಕಳೆದುಕೊಂಡಿರೋದು ಇಡೀ ದೇಶಕ್ಕೆ ಗೊತ್ತಾಗಿದೆ. ಇದು ಎಟಿಎಂ ಸರ್ಕಾರ, ಭ್ರಷ್ಟ ಸರ್ಕಾರ, ಜನವಿರೋಧಿ ಸರ್ಕಾರ ಎಂಬುದು ಗೊತ್ತಾಗಿದೆ ಎಂದು ಆರೋಪಿಸಿದರು.
INTERVIEW: ನಾಗಮಂಗಲ ಗಲಭೆಯ ನೈಜ ಆರೋಪಿಗಳನ್ನೇ ಬಿಟ್ಟಿದ್ದಾರೆ; ಡಾ ಅಶ್ವತ್ಥನಾರಾಯಣ
ನಮ್ಮದು 15 ಸಾವಿರ ಮತಗಳಷ್ಟೇ ಇದ್ದಿದ್ದು ಡಿ.ಕೆ. ಶಿವಕುಮಾರ್‌ಅವರೇ ಹೇಳಿದ್ದಾರೆ. ನಾವು ಕಾಂಗ್ರೆಸ್ ನಿಂದ ಗೆದ್ದಿಲ್ಲ ಎಂದು ಅವರೇ ಕೊಂಡಿದ್ದಾರೆ. ಹೇಳಿ ಅಂತ ಹೀಗಾಗಿ, ಈ ಗೆಲುವಿನಿಂದ ಸರ್ಕಾರಕ್ಕೆ ಕ್ರೆಡಿಟ್ ಕೊಡೋಕೆ ಆಗುತ್ತಾ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ನಾಯಕರ ಸಹಕಾರ ಪಡೆದು ಗೆದ್ದಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಹಾಕಿದ ಅಶ್ವತ್ಥನಾರಾಯಣ್ ಅವರು, ಯಾವುದೇ ಕಾರಣಕ್ಕೂ ಆ ರೀತಿ ಆಗಿಲ್ಲ. ಕಾಂಗ್ರೆಸ್ ನಲ್ಲಿ ಪಕ್ಷ ನಿಷ್ಠೆ ಇದೆಯೋ ಇಲ್ಲೋ ಗೊತ್ತಿಲ್ಲ. ನಮ್ಮಲ್ಲಿ ಪಕ್ಷ ನಿಷ್ಠೆ ಇದೆ. ನಮ್ಮ ಮನೆ ಬಾಗಿಲು ದಾಟಿ ಒಮ್ಮೆ ಹೋದ ಮೇಲೆ ಅಲ್ಲಿಗೆ ಮುಗಿಯಿತು. ಸಿ.ಪಿ. ಯೋಗೇಶ್ವರ್ ಅವರನ್ನು ನಾವು ಎದುರಾಳಿ ಯಾಗಿಯೇ ನೋಡಿದ್ದೇವೆ ಎಂದರು.
ನಿಖಿಲ್ ಕುಮಾರಸ್ವಾಮಿ ಪ್ರಭಾವಿಯಾಗಿ ಈ ಚುನಾವಣೆ ಎದುರಿಸಿದ್ದಾರೆ. ನಿಖಿಲ್ ಆಗಿರುವುದಕ್ಕೆ ಈ ಮಟ್ಟಕ್ಕೆ ಚುನಾವಣೆ ಎದುರಿಸಿದ್ದೇವೆ. ನಿಖಿಲ್ ಒಬ್ಬನಾಯಕರಾಗಿ ಬೆಳೆದಿದ್ದಾರೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಮೂರು ದಶಕಗಳಿಂದಲೂ ನುರಿತರಾಗಿ ಜನರ ಆಶೀರ್ವಾದ ಪಡೆದಿರೋದ್ರಿಂದ ಗೆದ್ದಿದ್ದಾರೆ. ಈ ಗೆಲುವು ಕೂಡ ತಾತ್ಕಾಲಿಕ. ಮುಂಬರಲಿರುವ 2028ರ ಚುನಾವಣೆಯತ್ತ ನಾವು ನೋಡೋಣ ಎಂದರು.
ನಮಗೆ ಮುಜುಗರ ಇಲ್ಲ:
ಬಿಜೆಪಿ ರೆಬಲ್ ನಾಯಕರಿಂದ ಜಾಗೃತಿ ಅಭಿಯಾನದಿಂದ ನಮಗೇನು ಮುಜುಗರ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರ. ವಕ್ಸ್ ವಿಚಾರದಲ್ಲಿ ಅಲ್ಪಸಂಖ್ಯಾತರ ತುಷ್ಠಿಕರಣ ಮಾಡ್ತಿರೋದು ಸ್ಪಷ್ಟವಾಗಿ ಗೊತ್ತಿದೆ. ವಕ್ಫ್ ಬೋರ್ಡ್ ಮೂಲಕ ರೈತರ ಜಮೀನನ್ನು ಹೇಗೆ ಕಬಳಿಸಿದ್ದಾರೆ ಎಂಬುದು ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಬಯಲಿಗೆಳೆಯೋದಕ್ಕೆ ನಮ್ಮ ಪಕ್ಷದವರು ಹೋರಾಟ ಮಾಡುತ್ತಿದ್ದಾರೆ. ಅಧಿಕೃತವಾಗಿ ಪಕ್ಷದ ವತಿಯಿಂದಲೂ ನಡೆದಿದೆ. ಈಗ ಇವರು ಕೂಡ ಮಾಡುತ್ತಿದ್ದಾರೆ. ಅದರ ಪಾಡಿಗೆ ಅದು ನಡೆಯುತ್ತದೆ. ಚುನಾಯಿತ ಜನಪ್ರತಿನಿಧಿಗಳಾಗಿ ಇವರು ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಮುಡಾ ಹಗರಣ: ಸಿಎಂ ರಾಜೀನಾಮೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ, ಅಶ್ವತ್ಥ್ ನಾರಾಯಣ್
ಜಮೀರ್ ಅವರು ಸಿದ್ದರಾಮಯ್ಯನವರ ಅನುಮತಿ ಪಡೆದು ಈ ಪಕ್ರಿಯೆ ಶುರು ಮಾಡಿದ್ದರು. ಬೇಲಿ ಹಾಕೋಳ್ಳಕ್ಕೂ ಮುಂದಾದರು, ಈಗ ಬೇಲಿಯನ್ನೂ ಬಿಟ್ಟು ಓಡೋಗಿದ್ದಾರೆ. ನಮಗೆ ದೇಶ ಮೊದಲು, ದೇಶ ಚೆನ್ನಾಗಿದ್ರೆ ನಾವು ಚನ್ನಾಗಿರುತ್ತೇವೆ ಎಂದರು.
ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯವನ್ನು ಅರಗಿಸಿಕೊಳ್ಳುವ ಶಕ್ತಿ ನಮಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಮತ್ತು ಕುಟುಂಬ ಪಕ್ಷವಾಗಿದೆ. ಜನರ ವಿಶ್ವಾಸ ಆಶೀರ್ವಾದ ನಮಗಿರುವವರೆಗೆ ನಮಗೆ ಯಾವುದೇ ಅಡೆತಡೆ ಇಲ್ಲ ಎಂದು ಹೇಳಿದರು.