ಶಮಿ ಮಾಜಿ ಪತ್ನಿಯ ಬೆಡ್ ರೂಮ್ ವಿಡಿಯೋ ವೈರಲ್

By Roopa Hegde  |  First Published Nov 26, 2024, 11:40 AM IST

ಕ್ರಿಕೆಟರ್ ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸೀನ್ ಜಹಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಬೆಡ್ ರೂಮ್ ವಿಡಿಯೋ ವೈರಲ್ ಆಗಿದೆ. ಐಟಂ ಸಾಂಗ್ ಗೆ ಡಾನ್ಸ್ ಮಾಡಿರುವ ಹಸೀನ್ ಟ್ರೋಲ್ ಆಗಿದ್ದಾ
 


ಕ್ರಿಕೆಟರ್ ಮೊಹಮ್ಮದ್ ಶಮಿ (cricketer mohammed shami) ಮಾಜಿ ಪತ್ನಿ ಹಸೀನ್ ಜಹಾನ್ (Haseen Jahan) ಬೆಡ್ ರೂಮ್ ವಿಡಿಯೋ (bed room video) ವೈರಲ್ ಆಗಿದೆ. ಹಸೀನ್ ಜಹಾನ್ ಹೊಸ ವೇಷ ನೋಡಿದ ನೆಟ್ಟಿಗರು ಕೋಪಗೊಂಡಿದ್ದಾರೆ. ಹಸೀನ್ ಜಹಾನ್ ತನ್ನ ಡಾನ್ಸ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಬಳಕೆದಾರರು, ಮೊಹಮ್ಮದ್ ಶಮಿ ಪರ ಬ್ಯಾಟ್ ಬೀಸಿದ್ದಾರೆ.

ಬೆಡ್ ರೂಮಿನಲ್ಲಿ ಶಮಿ ಮಾಜಿ ಪತ್ನಿಯ ಡಾನ್ಸ್ : ಇನ್ಸ್ಟಾದಲ್ಲಿ ಹಾರ್ಟ್ ಎಮೋಜಿ ಜೊತೆ ಡಾನ್ಸ್ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಐಶ್ವರ್ಯ ರೈ ಬಚ್ಚನ್ ಐಟಂ ಸಾಂಗ್ ಗೆ ಹಸೀನ್ ಜಹಾನ್ ಡಾನ್ಸ್ ಮಾಡಿದ್ದಾರೆ. ಮೊದಲು ತಮ್ಮ ಬ್ಯಾಕ್ ತೋರಿಸುವ ಹಸೀನ್  ನಂತ್ರ ಬೆಡ್ ರೂಮಿನಲ್ಲಿರುವ ಖುರ್ಚಿ ಮೇಲೆ ಕುಳಿತುಕೊಳ್ತಾರೆ. ಆ ನಂತ್ರ ಬೆಡ್ ಮೇಲೆ ಹೋಗಿ ಮಲಗ್ತಾರೆ. ಬಿಳಿ ಬಣ್ಣದ ಡ್ರೆಸ್ ಧರಿಸಿರುವ ಹಸೀನ್ ಜಹಾನ್ ವಿಡಿಯೋಕ್ಕೆ 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ನೂರಾರು ಮಂದಿ ಕಮೆಂಟ್ ಕೂಡ ಮಾಡಿದ್ದಾರೆ. 

Tap to resize

Latest Videos

ಇದು ಎಲ್ಲರಿಗೂ ಗೊತ್ತು ಎನ್ನುತ್ತಲೇ ವಿಜಯ್ ಜೊತೆಗಿನ ಸಂಬಂಧ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ!

ಶಮಿ ಪರ ನಿಂತ ಫ್ಯಾನ್ಸ್ : ಹಸೀನ್ ಜಹಾನ್ ವಿಡಿಯೋ ನೋಡಿದ ನೆಟ್ಟಿಗರು, ಮೊಹಮ್ಮದ್ ಶಮಿ ಪರ ನಿಂತಿದ್ದಾರೆ. ಇದೇ ಕಾರಣಕ್ಕೆ ಶಮಿ, ಹಸೀನಾ ಜಹಾನ್ ಅವರನ್ನು ಬಿಟ್ಟಿದ್ದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಶಮಿ ಹಣದಲ್ಲಿ ಮೋಜು – ಮಸ್ತಿ ಮಾಡ್ತಿದ್ದಾರೆ ಹಸೀನಾ ಎಂದು ಇನ್ನೊಬ್ಬರು ಬರೆದಿದ್ದಾರೆ. ಶಮಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ, ಯಾರದ್ದು ತಪ್ಪು ಎಂಬುದು ಈ ವಿಡಿಯೋ ನೋಡಿದ್ರೆ ಸ್ಪಷ್ಟವಾಗುತ್ತೆ, ಎಲ್ಲದಕ್ಕೂ ಒಂದು ಮಿತಿ ಇದೆ ಹೀಗೆ ಬಳಕೆದಾರರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ. 

ಹಸೀನ್ ಜಹಾನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಸಾಕಷ್ಟು ಫೋಟೋ, ವಿಡಿಯೋಗಳನ್ನು ಅವರು ಪೋಸ್ಟ್ ಮಾಡ್ತಿರುತ್ತಾರೆ. ಸಖತ್ ಬೋಲ್ಡ್ ಆಗಿರುವ ಹಸೀನಾ ಜಹಾನ್, ಮೊಹಮ್ಮದ್ ಶಮಿ ವಿರುದ್ಧ ಹೇಳಿಕೆಗಳನ್ನು ನೀಡಿ ಆಗಾಗ ಸುದ್ದಿಯಲ್ಲಿರ್ತಾರೆ.

ಸೆಲೆಬ್ರಿಟಿಗಳಿಗೂ ಈ ಕನ್ಫ್ಯೂಸ್ ಆಗುತ್ತಾ? ಬೆಲ್ ಅಂತ ತಮನ್ನಾ ಏನ್ ಒತ್ತಿದ್ರು ನೋಡಿ

ಕೊಲ್ಕತ್ತಾ ನೈಟ್ ರೈಡರ್ಸ್ ಚೀರ್ ಲೀಡರ್ ಆಗಿದ್ದ ಹಸೀನಾ ಜಹಾನ್ ಅಲ್ಲಿಯೇ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಭೇಟಿಯಾಗಿದ್ದರು. 2012ರಿಂದ ಅವರ ಸ್ನೇಹ ಶುರುವಾಗಿತ್ತು. ಹಸೀನ್ ಜಹಾನ್ ಮತ್ತು ಮೊಹಮ್ಮದ್ ಶಮಿ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಸೀನ್ ಜಹಾನ್ ಗೆ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳ ತಾಯಿಯಾಗಿದ್ದ ಹಸೀನ್ ಜಹಾನ್ 2010ರಲ್ಲಿ ವಿಚ್ಛೇದನ ಪಡೆದಿದ್ದರು. ಮೊಹಮ್ಮದ್ ಶಮಿ, ಹಸೀನ್ ಜಹಾನ್ ಗಿಂತ 13 ವರ್ಷ ಚಿಕ್ಕವರು. ಮದುವೆಯಾದ್ಮೇಲೆ ಹೆಣ್ಣು ಮಗುವಿಗೆ ತಾಯಿಯಾಗಿದ್ದ ಹಸೀನ್ ಮಾಡಲಿಂಗ್ ವೃತ್ತಿ ಬಿಟ್ಟಿದ್ದರು.  2018ರಲ್ಲಿ ಹಸೀನ್ ಜಹಾನ್,  ಶಮಿ ವಿರುದ್ಧ ಮೊದಲ ಬಾರಿ ಮಾತನಾಡಿದ್ದರು. ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದ್ರಿಂದಾಗಿ ಮೊಹಮ್ಮದ್ ಶಮಿ ವೃತ್ತಿ ಜೀವನದಲ್ಲಿ ಏರುಪೇರಾಗಿತ್ತು. ನಂತ್ರ ಶಮಿ ಕೂಡ, ಹಸೀನ್ ವಿರುದ್ಧ ದೂರಿದ್ದರು. ಮೊಹಮ್ಮದ್ ಶಮಿ ಹಾಗೂ ಹಸೀನ್ ಜಹಾನ್ ಇಬ್ಬರೂ ದೂರವಾಗಿದ್ದಾರೆ. ಸದ್ಯ ಹಸೀನ್ ಜಹಾನ್ ತನ್ನ ಅಮ್ಮನ ಮನೆಯಲ್ಲಿ ವಾಸವಾಗಿದ್ದಾರೆ. ಮಗುವನ್ನು ಮೊಹಮ್ಮದ್ ಶಮಿ ನೋಡಿಕೊಳ್ತಿಲ್ಲ ಎಂದು ಕೆಲ ದಿನಗಳ ಹಿಂದೆ ಹಸೀನ್ ಜಹಾನ್ ಆರೋಪ ಮಾಡಿದ್ದರು. ಸದ್ಯ ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಜನವರಿ 2023ರವರೆಗೆ ಹಸೀನ್ ಜಹಾನ್‌ಗೆ ಪ್ರತಿ ತಿಂಗಳು 1.30 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೋಲ್ಕತ್ತಾ ನ್ಯಾಯಾಲಯ ಶಮಿಗೆ ಆದೇಶಿಸಿತ್ತು. ಇದರಲ್ಲಿ ಮಾಜಿ ಪತ್ನಿಯ ಪೋಷಣೆಗೆ 50 ಸಾವಿರ ಹಾಗೂ ಮಗಳ ಪೋಷಣೆಗೆ 80 ಸಾವಿರ ನೀಡುವಂತೆ ಆದೇಶ ನೀಡಲಾಗಿತ್ತು. 

click me!