ಮುಸ್ಲಿಂ ಧರ್ಮಗುರು ಕೈ ಹಿಡಿದ ಗೋಲ್ಡನ್ ಸ್ಟಾರ್ ಗಣೇಶ್ ನಟಿ ಸನಾ; ಮದ್ವೆ ಆದ್ಮೇಲೆ ಆಸ್ತಿ 50 ಕೋಟಿ ಆಯ್ತಾ?

First Published | Nov 26, 2024, 11:30 AM IST

ಮದ್ವೆ ಆದ್ಮೇಲೆ ಸನಾ ಖಾನ್ ಆಸ್ತಿ ಮೌಲ್ಯ ಗಗನ ಮುಟ್ಟಿದೆ. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕೂಲ್‌ ಚಿತ್ರದ ನಟಿ............

ಹಿಂದಿ ಚಿತ್ರರಂಗದಲ್ಲಿ ಸಕತ್ ಹೆಸರು ಮಾಡಿದ ನಟಿ ಸನಾ ಖಾನ್ ವೈವಾಹಿಕ ಜೀನವಕ್ಕೆ ಕಾಲಿಟ್ಟ ಮೇಲೆ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ದೂರವಾಗುವ ಸಮಯದಲ್ಲೂ ಸ್ಪಷ್ಟನೆ ಕಾರಣ ಕೊಟ್ಟಿದ್ದರು.

ಮಾನವೀಯತೆ ಆಧಾರದ ಮೇಲೆ ಕೆಲಸ ಮಾಡಿಕೊಂಡು ದೇವರ ನಿಯಮಗಳನ್ನು ಪಾಲಿಸಿಕೊಂಡು ಇರುತ್ತೇನೆ. ನಾವು ಹಣ ಮಾಡಲು ಭೂಮಿಗೆ ಬಂದಿಲ್ಲ ಎಂದು ಗೊತ್ತಾಗಿದೆ ಹಣಕ್ಕಾಗಿಯೇ ಇಡೀ ಜೀವನವನ್ನು ಕಳೆಯುವುದಿಲ್ಲ ಎಂಬ ಹೇಳಿಕೆ ನೀಡಿದ್ದರು ಸನಾ ಖಾನ್.

Tap to resize

ಇದಾದ ಮೇಲೆ ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್‌ ಸೈಯದ್ ಜೊತೆ ಸನಾ ಖಾನ್ ಮದುವೆ ಅದ್ಧೂರಿಯಾಗಿ ನಡೆಯಿತ್ತು. ಈ ಜೋಡಿಗೆ ಈಗಾಗಲೆ ಒಬ್ಬ ಮಗನಿದ್ದಾನೆ. ಕೆಲವು ದಿನಗಳ ಹಿಂದೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡರು.

ಗೋಲ್ಡನ್‌ ಸ್ಟಾರ್ ಗಣೇಶ್‌ ಜೊತೆ ಕನ್ನಡ 'ಕೂಲ್‌' ಸಿನಿಮಾದಲ್ಲಿ ಸನಾ ಖಾನ್ ಅಭಿನಯಿಸಿದ್ದಾರೆ. ಮುಸ್ಲಿಂ ಧರ್ಮಗುರು ಕೈ ಹಿಡಿದ ಮೇಲೆ ಸನಾ ಒಟ್ಟು ಆಸ್ತಿ ಮೌಲ್ಯ ಗಗನ ಮುಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

ಸಿನಿಮಾ, ರಿಯಾಲಿಟಿ ಶೋ ಮತ್ತು ಸೀರಿಯಲ್‌ ಅಂತ ಬ್ಯುಸಿಯಾಗಿದ್ದ ಸನಾ ಖಾನ್ ಮದುವೆಗೂ ಮುನ್ನ 11 ಕೋಟಿ ರೂಪಾಯಿ ಆಸ್ತಿ ಮಾಡಿದ್ದರಂತೆ. ಮದುವೆ ಆದ ನಂತರ ಸುಮಾರು 354% ಆಸ್ತಿಯಲ್ಲಿ ಏರಿಕೆ ಆಗಿದೆ ಎಂದು ವರದಿ ಆಗಿದೆ.

ಹಣ ಮುಖ್ಯವಲ್ಲ ಹಣಕ್ಕಾಗಿ ಜೀವನ ಮಾಡುವುದಿಲ್ಲ ಹಾಗೆ ಹೀಗೆ ಎಂದು ಹೇಳಿದ್ದ ಸನಾ ಖಾನ್ ಹೆಸರಿನಲ್ಲಿ ಇರುವ ಒಟ್ಟು ಆಸ್ತಿ 50 ಕೋಟಿ ರೂಪಾಯಿ ಎನ್ನಲಾಗಿದೆ. ಮದುವೆ ಆದ ಮೇಲೆ ಹಣ ಮಾಡಿದ್ದಾರೆ ಹಾಗೂ ಗಳಿಸಿದ್ದಾರೆ. 

ಮದುವೆ ನಂತರ ಸನಾ ಖಾನ್ ಉದ್ಯಮಿಯಾಗಿ ಗುರುತಿಸಿಕೊಂಡರು. ಫೇಸ್ ಸ್ಪಾ ಸನಾ ಖಾನ್ ಹಾಗೂ ಹಯಾ ಬೈ ಸನಾ ಖಾನ್ ಎಂಬ ಎರಡು ಸಂಸ್ಥೆಗಳನ್ನು ತೆರೆದರು. ಅಲ್ಲದೆ ಪತಿ ಜೊತೆ ಹಯಾತ್ ವೆಲ್‌ಫೇರ್‌ ಫೌಂಡೇಷನ್‌ ಆರಂಭಿಸಿದ್ದರು. 

Latest Videos

click me!