ಪಂಚಾಂಗ: ಪಿತೃಗಳ ಸ್ಮರಣೆ ಮಾಡಿ ಒಳಿತಾಗುತ್ತದೆ!

Apr 22, 2021, 9:43 AM IST

22 ಏಪ್ರಿಲ್ 2021, ಗುರುವಾರದ ಪಂಚಾಂಗ| ಮಖಾ ನಕ್ಷತ್ರ ಪಿತೃದೇವತೆಗಳ ನಕ್ಷತ್ರ. ಹೀಗಾಗಿ ಪಿತೃಗಳ ಸ್ಮರಣೆ ಮಾಡುವುದು ಬಹಳ ಒಳ್ಳೆಯದು. ಇಷ್ಟೇ ಅಲ್ಲದೇ ಗುರುವಾರ ಗುರು ಸ್ಮರಣೆಯನ್ನು ಮಾಡಿ. ಗುರುವಿಗೆ ಎದುರಾಡಬಾರದು. ಆಗ ಅದೇ ಒಂದು ನಮಸ್ಕಾರವಾಗುತ್ತದೆ. ಗುರುವಿಗೆ ಶಿಷ್ಯನನ್ನು ಹೇಗೆ ತಯಾರಿ ಮಾಡಬೇಕು? ಸಾಮರ್ಥ್ಯ ಏನು? ಶಿಷ್ಯನಿಗೆ ಏನು ಉಪದೇಶಿಸಬೇಕು ಎಲ್ಲವೂ ತಿಳಿದಿರುತ್ತದೆ. ಹೀಗಾಗಿ ಇಂದು ಗುರವನ್ನು ಆರಾಧಿಸಿ.