ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ!

Nov 8, 2019, 5:38 PM IST

 ಮುಂಬೈ(ನ.08) ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಹಾಗೂ ಶಿವ ಸೇನೆ ನಡುವಿನ ಕಸರತ್ತು ಮುಂದುವರಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಇದನ್ನೂ ಓದಿ: ED ಶೂನ್ಯ, CBIಗೆ ಅಗ್ರಸ್ಥಾನ; ಏನಿದು ಡಿಕೆಶಿ ಮಾತಿನ ಒಳ ಮರ್ಮ?

ಸರ್ಕಾರ ರಚನೆ ಗೊಂದಲ ಮುಂದುವರಿದಿದ್ದು, ಬಿಜೆಪಿ ಹಾಗೂ ಶಿವ ಸೇನೆ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದೆ. ಇದೀಗ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ. ಸರ್ಕಾರ ರಚನೆಯಾಗುವ ವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗೋ ಸಾಧ್ಯತೆ ಇದೆ.