ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಮನಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ..!

By Girish Goudar  |  First Published May 1, 2024, 8:32 PM IST

ಭಿನ್ನಮತ ಸ್ಫೋಟಗೊಂಡ ಬೆನ್ನ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯ ನಂತರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ನಿವಾಸಕ್ಕೆ ತೆರಳಿ ಅಲ್ಪೋಪಹಾರ ಸೇವಿಸುವದರ ಮೂಲಕ ಇಬ್ಬರು ನಾಯಕರುಗಳನ್ನು ಸಮದಾನ ಪಡಿಸಿದ್ದಾರೆ.


ರಾಮಮೂರ್ತಿ ನವಲಿ

ಗಂಗಾವತಿ(ಮೇ.01):  ಕೊಪ್ಪಳ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ನಾಯಕರುಗಳಿಗೆ ತಲೆ ನೋವಾಗಿರುವ ಗಂಗಾವತಿ ಸ್ಥಳೀಯ ನಾಯಕರುಗಳ ಭಿನ್ನಮತ ಸ್ಫೋಟಗೊಂಡ ಬೆನ್ನ ಹಿಂದೇಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಿನ್ನಮತ ನಾಯಕರುಗಳ ಮನೆಗೆ ತೆರಳಿ ಶಮನಗೊಳಿಸಲು ಮುಂದಾಗಿದ್ದಾರೆ. 

Tap to resize

Latest Videos

undefined

ಹೌದು, ನಗರದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಮಾರಂಭದಲ್ಲಿಯೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ಮಧ್ಯೆ ವಾಕ್ಸಮರ ನಡೆದಿತ್ತು. ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಲಿಸಿದರು. ಅನ್ಸಾರಿ ಮತ್ತು ಶ್ರೀನಾಥ ಅವರ ಅಕ್ರೋಶ, ಭಿನ್ನಮತ, ಅರೋಪ ಪ್ರತ್ಯಾರೋಪ, ಸಭಿಕರ ವಿರೋಧವನ್ನು ನೋಡುತ್ತಿದ್ದ ಸಿದ್ದರಾಮಯ್ಯ ಅವರು ಕೊನೆಗೂ ಭಿನ್ನಮತ ಇಲ್ಲ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿರಿ ಎಂದು ಕೋರಿದ್ದರು. 

ನಮ್ಮ ಸರ್ಕಾರ ಇಡೀ ಬಸ್ಸನ್ನೇ ಮಹಿಳೆ ಕೈಗೆ ಕೊಟ್ಟಿದೆ, ಡ್ರೈವರ್ ಮಾತ್ರ ಗಂಡುಮಕ್ಕಳು; ತಂಗಡಗಿ ಹಾಸ್ಯ ಚಟಾಕಿ

ಭಿನ್ನಮತ ಮುಖಂಡರ ಜತೆ ಸಿಎಂ ಚರ್ಚೆ

ವೇದಿಕೆಯಲ್ಲಿ ಭಿನ್ನಮತ ಸ್ಫೋಟಗೊಂಡ ಬೆನ್ನ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯ ನಂತರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ನಿವಾಸಕ್ಕೆ ತೆರಳಿ ಅಲ್ಪೋಪಹಾರ ಸೇವಿಸುವದರ ಮೂಲಕ ಇಬ್ಬರು ನಾಯಕರುಗಳನ್ನು ಸಮದಾನ ಪಡಿಸಿದ್ದಾರೆ. ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ ಉಭಯ ಕುಶಲೋಪರಿ ವಿಚಾರಿಸಿದರು. ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ಖಾಸಗಿ ಲಾಡ್ಜ್‌ನಲ್ಲಿದ್ದ ಮುಖ್ಯಮಂತ್ರಿಗಳನ್ನು ಇಬ್ಬರು ನಾಯಕರುಗಳು ಪ್ರತ್ಯೇಕವಾಗಿ ಭೇಟಿ ಮಾಡಿ ದೂರು ನೀಡಿದ್ದರು. 

click me!