ಕರ್ನಾಟಕದ ಮೊದಲ ಅತೀ ಎತ್ತರದ ಗಾಜಿನ ಸೇತುವೆ: ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ..!

By Girish Goudar  |  First Published May 1, 2024, 8:06 PM IST

ಕೊಡಗಿನ ಪ್ರವಾಸಿ ತಾಣಗಳ ಗರಿಗೆ ಈ ಸೇತುವೆ ಮತ್ತೊಂದು ಸೇರ್ಪಡೆಯಾಗಿದ್ದು, ಕೊಡಗಿನ ಪ್ರವಾಸೋದ್ಯಮವನ್ನು ಜಗತ್ತಿಗೆ ಇನ್ನಷ್ಟು ವಿಶೇಷಗೊಳಿಸಲಿದೆ. ನೀವು ಕೂಡ ಒಮ್ಮೆ ಸುಂದರ ಪರಿಸರದಲ್ಲಿ ಗಾಜಿನ ಆಕಾಶ ಮಾರ್ಗದ ಸೇತುವೆ ಮೇಲೆ ನಡೆದು ಖುಷಿಪಡಬಹುದು


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಮೇ.01):  ಪ್ರವಾಸಿಗರನ್ನು ಸೆಳೆಯಲು ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಅತೀ ಉದ್ದದ ಗಾಜಿನ ಸೇತುವೆ ಸಿದ್ಧಗೊಂಡಿದೆ. ಕರ್ನಾಟಕದಲ್ಲಿಯೇ ಇದೇ ಮೊದಲ ಬಾರಿಗೆ ಅತೀ ಉದ್ದದ ಹಾಗೂ ಅತೀ ಎತ್ತರದ ಗ್ಲಾಸ್ ಬ್ರಿಡ್ಜ್ ಇದಾಗಿದ್ದು, ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಫಾಲ್ಸ್ ಜಂಕ್ಷನ್ ಬಳಿಯೇ ಈ ಗಾಜಿನ ಸೇತುವೆ ಸಿದ್ಧಗೊಂಡಿದೆ. 

Latest Videos

undefined

ತಳಮಟ್ಟದಿಂದ ಬರೋಬ್ಬರಿ 250 ಅಡಿ ಎತ್ತರದಲ್ಲಿ ಗಾಜಿನ ಸೇತುವೆ ನಿರ್ಮಾಣಗೊಂಡಿದೆ. ಹಾಗೆ ಅತೀ ಉದ್ದದ ಸೇತುವೆಯೂ ಇದಾಗಿದ್ದು, 80 ಅಡಿಗೂ ಹೆಚ್ಚು ಉದ್ದವಿದೆ. ಭೂಮಿಯ ಮಟ್ಟದಿಂದ 250 ಅಡಿ ಎತ್ತರವಿರುವುದರಿಂದ ಎಂತಹವರಿಗಾದರೂ ಈ ಗಾಜಿನ ಸೇತುವೆ ಮೇಲೆ ನಡೆಯುವುದಕ್ಕೆ ಒಂದಿಷ್ಟಾದರೂ ಭಯವಾಗದೆ ಇರದು.

IRCTC Tour Package : ಕಡಿಮೆ ದರದಲ್ಲಿ ಥೈಲ್ಯಾಂಡ್ ಪ್ರವಾಸ ಮಾಡಲು ಬಯಸಿದ್ರೆ ಇಲ್ಲಿದೆ ಆಫರ್

ಪ್ರಯತ್ನಪಟ್ಟು ನೀವು ಗಾಜಿನ ಸೇತುವೆ ಮೇಲೆ ಹೆಜ್ಜೆ ಇಟ್ಟಿರೆಂದರೆ ಎತ್ತರದಿಂದ ಭೂಮಿಯ ಮೇಲೆ ಬಿದ್ದುಬಿಡುತ್ತೇವೆಯೇನೋ ಎಂದು ಭಯ ಆವರಿಸಿಯೇ ಬಿಡುತ್ತದೆ. ಹಾಗೆಯೇ ಮುಂದೆ ನಡೆದು ಹೋಗುತ್ತಿದ್ದರೆ, ಸುತ್ತಮುತ್ತಲೂ ಇರುವ ಹಸಿರ ಕಾನನ, ಬೆಟ್ಟಗುಡ್ಡಗಳ ರಾಶಿ ನಿಮ್ಮ ಕಣ್ಮನಗಳನ್ನು ಕೋರೈಸುತ್ತದೆ. ಸುಮಾರು 80 ಅಡಿಯಷ್ಟು ಗಾಜಿನ ಸೇತುವೆ ಮೇಲೆ ನಡೆದು ಸೇತುವೆಯ ತುದಿ ತಲುಪಿದಿರೆಂದರೆ ಆಳವಾದ ಜಾಗದಲ್ಲಿ ಇರುವ ಹಸಿರ ಕಾಡು ಎಂತಹವರನ್ನಾದರೂ ಮಂತ್ರಮುಗ್ಧರನ್ನಾಗಿಸುತ್ತದೆ. ಇವಿಷ್ಟೇ ಅಲ್ಲ, ಸೇತುವೆ ತುದಿಯಲ್ಲಿ ಗೋಪುರವೂ ಇದ್ದು, ಅಲ್ಲಿ ಇನ್ನಷ್ಟು ಎತ್ತರದ ಗಾಜಿನ ಗೋಪುರದ ಮೇಲೆ ಕುಳಿತು ನೀವು ಕೇಕ್ ಕತ್ತರಿಸಿ ಪರಿಸರದ ಒಡಲಿನಲ್ಲಿ ಅನಂತತೆಯಿಂದ ವಿವಿಧ ಸೆಲೆಬ್ರೇಷನ್ ಗಳನ್ನು ಮಾಡಿಕೊಳ್ಳಬಹುದು. 

ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿಗಳನ್ನು ವೀಕ್ಷಿಸಲು ಹೋಗುವ ಪ್ರವಾಸಿಗರಿಗೆ ಎರಡು ಪ್ರವಾಸಿ ತಾಣಗಳ ವೃತ್ತದಲ್ಲಿಯೇ ಈ ಗಾಜಿನ ಸೇತುವೆ ನಿಮ್ಮ ವೀಕ್ಷಣೆಗೆ ಸಿದ್ಧವಿದೆ. ಅಷ್ಟಕ್ಕೂ ಈ ಸೇತುವೆಯನ್ನು ಟಫನ್ ಗ್ಲಾಸ್ ಬಳಸಿ ಮಾಡಲಾಗಿದ್ದು, 40 ಎಂಎಂ ಗಾತ್ರದ ಗಾಜು ಬಳಸಿ ಸೇತುವೆಯನ್ನು ಮಾಡಲಾಗಿದೆ. ಹೀಗಾಗಿ ಒಂದೇ ಸಮಯದಲ್ಲಿ 35 ಜನರು ನಿಂತು ಇದನ್ನು ವೀಕ್ಷಿಸಬಹುದು. 

300 ರೂ. ಪ್ರವೇಶ ಶುಲ್ಕ

ಸೇತುವೆಯ ಎರಡು ಬದಿಯ ತಡೆಗೋಡೆಗಳ ಪಕ್ಕದಲಿಯೇ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಸಂಜೆ ವೀಕ್ಷಣೆಗೆ ಇನ್ನೂ ಅದ್ಭುತವಾಗಿ ಗೋಚರಿಸಲಿದೆ. ಇನ್ನು ಇಷ್ಟು ದೊಡ್ಡ ಮತ್ತು ಎತ್ತರದ ಗಾಜಿನ ಸೇತುವೆ ವೀಕ್ಷಣೆಗೆ ತಲಾ 300 ರೂ. ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ. 

ಮರಭೂಮಿಯ ದಿಬ್ಬದ ಮೇಲೆ ಬೆತ್ತಲೆಯಾಗಿ ಪೋಸ್‌ ನೀಡಿದ ಪ್ರವಾಸಿಗರು, ಸರ್ಕಾರದ ಆಕ್ರೋಶ!

ಒಟ್ಟಿನಲ್ಲಿ ಕೊಡಗಿನ ಪ್ರವಾಸಿ ತಾಣಗಳ ಗರಿಗೆ ಈ ಸೇತುವೆ ಮತ್ತೊಂದು ಸೇರ್ಪಡೆಯಾಗಿದ್ದು, ಕೊಡಗಿನ ಪ್ರವಾಸೋದ್ಯಮವನ್ನು ಜಗತ್ತಿಗೆ ಇನ್ನಷ್ಟು ವಿಶೇಷಗೊಳಿಸಲಿದೆ. ನೀವು ಕೂಡ ಒಮ್ಮೆ ಸುಂದರ ಪರಿಸರದಲ್ಲಿ ಗಾಜಿನ ಆಕಾಶ ಮಾರ್ಗದ ಸೇತುವೆ ಮೇಲೆ ನಡೆದು ಖುಷಿಪಡಬಹುದು. 

ಈ ಕುರಿತು ಮಾಹಿತಿ ನೀಡಿರುವ ಗ್ಲಾಸ್ ಸ್ಕೈವಾಕ್ ಮಾಲೀಕರಾದ ರಾಜೇಶ್ ಯಲ್ಲಪ್ಪ ಹಾಗೂ ಭೀಮಯ್ಯ ರಾಜ್ಯದಲ್ಲಿಯೇ ಇದೇ ಮೊದಲ ಇಷ್ಟು ಎತ್ತರದ ಸೇತುವೆಯಾಗಿದೆ. ಈಗಾಗಲೇ ಒಂದು ಸೇತುವೆ ಇದ್ದಿತ್ತಾದರೂ ಅದು ಚಿಕ್ಕ ಸೇತುವೆಯಾಗಿತ್ತು. ಇದು ಅತೀ ಎತ್ತರದ ಹಾಗೂ ಉದ್ದದ ಸೇತುವೆಯಾಗಿದ್ದು ಕೊಡಗಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಅನುಕೂಲ ಆಗಲಿದೆ ಎಂದಿದ್ದಾರೆ. 

click me!