ಶಾಮನಿಸಂ ಎಂದರೆ ಏನು.. ಇಲ್ಲಿದೆ ಯಾರಿಗೂ ಹೆಚ್ಚಾಗಿ ತಿಳಿದಿರದ ಜಗತ್ತಿನಲ್ಲಿರುವ ಆಚರಣೆ

Jan 20, 2022, 9:25 AM IST

ಶಾಮಿನಿಸಂನೆಡೆ ಆಕರ್ಷಿತಳಾಗಿ ಆತ್ಮಗಳ ಜೊತೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದ್ದ ಬೆಂಗಳೂರಿನ ಅಪ್ರಾಪ್ತ ಬಾಲಕಿಯೊಬ್ಬಳು ಕೆಲ ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾಗಿದ್ದ ಘಟನೆ ನಡೆದಿತ್ತು. ಆದರೆ ಈಗ ಈ ಬಾಲಕಿ ಗುಜರಾತ್‌ನಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಾಲಕಿಯೇನೋ ಪತ್ತೆಯಾಗಿದ್ದಾಳೆ. ಆದರೆ ಆಕೆ ಹೋಗಿದ್ದೆಲ್ಲಿಗೆ ಆಕೆಯನ್ನು ಸೆಳೆದ ಶಾಮನಿಸಂ ಎಂದರೆ ಏನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಸ್‌..

ಎಲ್ಲರೊಂದಿಗೆ ಚೆನ್ನಾಗಿ ಓದುತ್ತಾ ಚಟುವಟಿಕೆಯಿಂದ ಇದ್ದ ಈ ಬಾಲಕಿ ಈ ಶಾಮನಿಸಂ ಪ್ರಭಾವಕ್ಕೆ ಒಳಗಾದ ನಂತರ ಏಕಾಂಗಿಯಾಗೇ ಇರಲು ಬಯಸುತ್ತಿದ್ದಳು. ತಂದೆ ತಾಯಿ ಜೊತೆ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಸಾವನ್ನಪ್ಪಿದವರ ಆತ್ಮಗಳೊಂದಿಗೆ ಸಂವಾದ ಮಾಡಿ ಬದುಕಿದ್ದವರ ಕಾಯಿಲೆಗಳನ್ನು ನಿವಾರಿಸುವ ತಂತ್ರ.

Missing Case: ನಿಗೂಢವಾಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಅಪ್ರಾಪ್ತೆ ಸೂರತ್‌ನ ಅನಾಥಾಶ್ರಮದಲ್ಲಿ ಪತ್ತೆ!

ಮನುಷ್ಯನ ದೇಹಕ್ಕಷ್ಟೇ ಸಾವಿದೆ. ಆತ್ಮಗಳಿಗಿಲ್ಲ. ಮುನುಷ್ಯ ಸತ್ತ ಮೇಲೆ ಆತನ ದೇಹಕ್ಕೆ ಮುಕ್ತಿ ಕಲ್ಪಿಸುವ ತಂತ್ರ ಇದಾಗಿದೆಯಂತೆ. ಮಂಗೋಲಿಯಾ ದಕ್ಷಿಣ ಅಮೆರಿಕಾ ಮುಂತಾದ ದೇಶಗಳ ಬುಡಕಟ್ಟು ಸಮುದಾಯದಲ್ಲಿ ಈ ಶಾಮನಿಸಂ ಆಚರಣೆ ಇದೆ. ಇಷ್ಟು ದಿನ ಆ ಸಮುದಾಯಗಳಲಷ್ಟೇ ಇದ್ದ ಈ ಆಚರಣೆ ಈಗ ಜಗತ್ತಿನ ಹಲವರು ದೇಶಗಳ ಯುವ ಸಮುದಾಯವನ್ನು ಆಕರ್ಷಿಸುತ್ತಿದೆ ಎನ್ನಲಾಗುತ್ತಿದೆ.