ಬಂಧನಕ್ಕೊಳಗಾದ ಈ ನಟನನ್ನು ಸಲಿಂಗಕಾಮಿ ಎಂದು ಪತ್ನಿ ವಿಚ್ಚೇದನ ನೀಡಿದ್ದಳು!

Published : May 01, 2024, 06:41 PM IST

ಇತ್ತೀಚೆಗೆ ಈ ಬಾಲಿವುಡ್ ನಟನನ್ನು ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಬಂಧಿಸಲಾಯಿತು. ಈ ಹಿಂದೆ ಈತನ ಪತ್ನಿ ಇವನೊಬ್ಬ ಸಲಿಂಗಕಾಮಿ ಎಂದು ವಿಚ್ಚೇದನ ನೀಡಿದ್ದಳು. ಆದರೆ ಆತ ಅದನ್ನು ಒಪ್ಪಿರಲಿಲ್ಲ..

PREV
110
ಬಂಧನಕ್ಕೊಳಗಾದ ಈ ನಟನನ್ನು ಸಲಿಂಗಕಾಮಿ ಎಂದು ಪತ್ನಿ ವಿಚ್ಚೇದನ ನೀಡಿದ್ದಳು!

ಭಾನುವಾರ, ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ-ಫಿಟ್ನೆಸ್ ತಜ್ಞ ಸಾಹಿಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್‌ನ ಹಿಟ್ ಕಾಮಿಡಿ ಚಿತ್ರಗಳ ನಟನನ್ನು ಪೋಲೀಸರು 1800-ಕಿಮೀ ಬೆನ್ನಟ್ಟಿದ ನಂತರ ಬಂಧಿಸಲಾಯಿತು.

210

ಬಂಧನ ಮತ್ತು ನಂತರದ ಪೊಲೀಸ್ ಕಸ್ಟಡಿಯು ನಟನಿಗೆ ಖಂಡಿತವಾಗಿಯೂ ಸಮಸ್ಯೆ ತಂದಿದ್ದರೂ, ಇದು ನಟ ನೋಡಿದ ಮೊದಲ ವಿವಾದವೇನಲ್ಲ. 

ಈ ಹಿಂದೆ ನಟನನ್ನು ಮಾಜಿ ಪತ್ನಿಯು ಸಲಿಂಗಕಾಮಿ ಎಂದು ಆರೋಪಿಸಿ ವಿಚ್ಚೇದನ ಪಡೆದಾಗಲೂ ವಿವಾದವಾಗಿತ್ತು. 

310

ಸಾಹಿಲ್ ಖಾನ್ 2001ರಲ್ಲಿ ಸ್ಲೀಪರ್ ಹಿಟ್ ಸ್ಟೈಲ್‌ನೊಂದಿಗೆ ಖ್ಯಾತಿಯನ್ನು ಗಳಿಸಿದರು, ಇದರಲ್ಲಿ ಅವರು ಮತ್ತು ಶರ್ಮಾನ್ ಜೋಶಿ ನಟಿಸಿದ್ದರು. ಅವರು ಚಿತ್ರದ ಯಶಸ್ವಿ ಸೀಕ್ವೆಲ್ ಎಕ್ಸ್‌ಕ್ಯೂಸ್ ಮಿ (2003) ನಲ್ಲಿ ಸಹ ನಟಿಸಿದ್ದಾರೆ.

410

ಅದೇ ವರ್ಷದ ನಂತರ, ಸಾಹಿಲ್ ನಟಿ ಮತ್ತು ನೃತ್ಯಗಾರ್ತಿ ನೆಗರ್ ಖಾನ್ ಅವರೊಂದಿಗೆ ವಿವಾಹವಾದರು. ಆದರೆ ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ. 2005 ರಲ್ಲಿ, ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ಅದೇ ವರ್ಷ ಅದನ್ನು ಅಂತಿಮಗೊಳಿಸಲಾಯಿತು.

510

ವಿಚ್ಛೇದನಕ್ಕೆ ಸಾಹಿಲ್‌ನ ಸಲಿಂಗಕಾಮವೇ ಒಂದು ಕಾರಣ ಎಂದು ನೆಗರ್ ಹೇಳಿದ್ದರು. ಆದರೆ, ನಟ ಅದನ್ನು ಒಪ್ಪದೇ ನಿರಾಕರಿಸಿದರು.
 

610

ಆಯೇಶಾ ಶ್ರಾಫ್ ಜೊತೆ ಸಾಹಿಲ್ ಖಾನ್ ವಿವಾದ
ಸಾಹಿಲ್ ನಂತರ ಜಾಕಿ ಶ್ರಾಫ್ ಅವರ ಪತ್ನಿ ಆಯೇಶಾ ಶ್ರಾಫ್ ಅವರೊಂದಿಗೆ ವ್ಯಾಪಾರ ಉದ್ಯಮಕ್ಕೆ ಪ್ರವೇಶಿಸಿದರು. ಆದರೆ ಇದೂ ಕೂಡ ಬಹುಬೇಗ ಹಳಸಿತು.

710

ಇಬ್ಬರ ನಡುವೆ ಅಫೇರ್ ಇದೆ ಎಂಬ ವದಂತಿಗಳು ಹರಡಿದ್ದವು. ಆದರೆ ಆಯೇಶಾ ಈ ವದಂತಿಗಳನ್ನು ಹಬ್ಬಿಸುತ್ತಿರುವುದು ಸ್ವತಃ ಸಾಹಿಲ್ ಎಂದು ಹೇಳಿಕೊಂಡಿದ್ದಾರೆ. 2014ರಲ್ಲಿ, ಆಯೇಷಾ ಸಾಹಿಲ್ ವಿರುದ್ಧ ಮಾನನಷ್ಟ ಮತ್ತು ಇತರ ವಿಷಯಗಳ ಜೊತೆಗೆ ಬಾಕಿ ಪಾವತಿಸದ ಆರೋಪದ ಪ್ರಕರಣವನ್ನು ದಾಖಲಿಸಿದರು.
 

810

ಸಾಹಿಲ್ ಖಾನ್ ಬಂಧನ ಮತ್ತು ಪೊಲೀಸ್ ಕಸ್ಟಡಿ
ಸಾಹಿಲ್ ಖಾನ್ ಅವರನ್ನು ಶನಿವಾರ ಛತ್ತೀಸ್‌ಗಢದಿಂದ ಬಂಧಿಸಲಾಯಿತು. ಅಲ್ಲಿ ಅವರು ಸುಮಾರು 40 ಗಂಟೆಗಳ ಕಾಲ ಮತ್ತು 1800 ಕಿ.ಮೀ. ಪೋಲೀಸರಿಂದ ತಪ್ಪಿಸಿಕೊಂಡು ಹೋಗಿದ್ದರು.

910

ಬಾಂಬೆ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿದ್ದರಿಂದ ಬಂಧನಕ್ಕೆ ಮುಂಚಿತವಾಗಿ ಜಾಮೀನು ಪಡೆಯಲು ಅವರ ಪ್ರಯತ್ನಗಳು ವಿಫಲವಾದವು.

1010

ಬೆಟ್ಟಿಂಗ್ ಸೈಟ್ ನಡೆಸುತ್ತಿರುವ ಮತ್ತು ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳನ್ನು ಉತ್ತೇಜಿಸುವ ಆರೋಪವನ್ನು ನಟ ಹೊತ್ತಿದ್ದಾರೆ. ಮುಂಬೈನ ಮಾಟುಂಗಾ ಪೊಲೀಸರು ಮೆಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ತನಿಖೆ ಮಾಡುತ್ತಿದ್ದ ಸಮಯದಲ್ಲಿ ಅವರ ಹೆಸರು ಹೊರಬಿದ್ದಿದೆ. ಮುಂಬೈ ನ್ಯಾಯಾಲಯವು ಮೇ 1ರವರೆಗೆ  ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

Read more Photos on
click me!

Recommended Stories