ಕುಡುಕನ ಕರಾಮತ್ತು : ಎಣ್ಣೆ ಕಿಕ್‌ಗೆ ನಡುರಸ್ತೆಯಲ್ಲೇ ಯೋಗಾಸನ

Jun 24, 2022, 3:25 PM IST

ಕುಡಿದ ಮೇಲೆ ಏನು ನಡೆಯುತ್ತಿದೆ ಎಂಬುದನ್ನೇ ಅನೇಕರು ಮರೆತಿರುತ್ತಾರೆ. ಕುಡಿತದ ಮತ್ತಿನಲ್ಲಿ ತಾವು ಏನು ಮಾಡುತ್ತೇವೆ ಎಂಬುದರ ಅರಿವು ಕೂಡ ಅನೇಕರಿಗೆ ಇರುವುದಿಲ್ಲ. ಕುಡಿದು ಅವಾಂತರ ಸೃಷ್ಟಿಸಿದ ಕುಡುಕರ ಅನೇಕ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಈಗ ಕುಡುಕನೋರ್ವ ನಿಲ್ಲಲಾಗದೇ ತೂರಾಡುತ್ತಾ ನಡುರಸ್ತೆಯಲ್ಲಿ ಅತ್ತಿತ್ತ ವಾಲಾಡುತ್ತ ಸ್ಟಂಟ್ ಮಾಡುತ್ತಿದ್ದಾನೆ. ಬಿಳಿ ಪಂಚೆ ನೀಲಿ ಶರ್ಟ್‌ ಧರಿಸಿರುವ ಕುಡುಕ ಪಂಚೆಯನ್ನು ಎತ್ತಿಕಟ್ಟಿ ಯೋಗಾಸನ ಮಾಡುತ್ತಿದ್ದಾನೆ. ಈತನ ಅವತಾರಕ್ಕೆ ನೋಡುಗರೇ ದಂಗಾಗಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.