ಬೆಂಗಳೂರಿನ ಕೋಡಿಗೇಹಳ್ಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತಯಾದ ಮಹಿಳೆ, ಅತಿಯಾದ ಕಾಮದಾಹ ಮತ್ತು ಅಶ್ಲೀಲ ವಿಡಿಯೋದಲ್ಲಿರುವ ಭಂಗಿಯಂತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ತನ್ನ ಪ್ರೇಮಿಯಿಂದಲೇ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು (ಏ.24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಏ.19ರಂದು ಕೋಡಿಗೇಹಳ್ಳಿಯಲ್ಲಿ ವಾಸವಿದ್ದ ಮಹಿಳೆಯೊಬ್ಬಳು ತನ್ನ ಮನೆಯಲ್ಲಿಯೇ ನಗ್ನ ಶವವಾಗಿ ಪತ್ತೆಯಾದ ಈ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆ ಆರೋಪಿ ನವೀನ್‌ನನ್ನು ಬಂಧಿಸಿದ ಪೊಲೀಸರು ಸತ್ಯವನ್ನು ಬಾಯಿ ಬಿಡಿಸಿದ್ದಾರೆ. ಕೊಲೆಯಾದ ಮಹಿಳೆಯಿಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದೇ ಭಂಗಿಯಲ್ಲಿ ತನಗೂ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರಿಂದ ಗಲಾಟೆ ನಡೆದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಹೌದು, ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಅದೇ ಮಾದರಿಯಲ್ಲಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಕೊಂದಿರುವುದಾಗಿ ಹೇಳಿದ ಮೈಸೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ನವೀನ್‌ನನ್ನು (28) ಪೊಲೀಸರು ಬಂಧಿಸಿದ್ದಾರೆ. ಏ.19ರಂದು ಕೋಡಿಗೇಹಳ್ಳಿಯ ಮನೆಯೊಂದರಲ್ಲಿ ಒಬ್ಬಂಟಿ ಮಹಿಳೆ ಶೋಭಾ (48) ಕೊಲೆಯಾಗಿತ್ತು. ಮಹಿಳೆ ಮೃತದೇಹ ಬೆತ್ತಲೆಯಾಗಿ ಬಿದ್ದಿದ್ದು, ಯಾರೋ ಕೊಲೆ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಬಂದಿತ್ತು. ಆದರೆ, ಆರೋಪಿ ಮಹಿಳೆಯನ್ನು ಕೊಲೆ ಮಾಡಿ ಆಕೆಯದ್ದೇ ಕಾರು ಹಾಗೂ ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗಿದ್ದನು. ಎಟಿಂಎ ಕಾರ್ಡ್‌ನಲ್ಲಿದ್ದ 1.80 ಲಕ್ಷ ರೂ. ಡ್ರಾ ಮಾಡಿಕೊಂಡು ಕಾರನ್ನು ಬೆಂಗಳೂರು ಗಡಿ ಭಾಗದಲ್ಲಿ ಬಿಟ್ಟು ಪರಾರಿ ಆಗಿದ್ದನು. ಸಿಸಿಟಿವಿ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.
undefined
ಬೆಂಗಳೂರು ಭದ್ರಪ್ಪ ಲೇಔಟ್ ಮನೆಯಲ್ಲಿ ಒಬ್ಬಂಟಿ ಮಹಿಳೆ ಬೆತ್ತಲೆ ಮೃತದೇಹ ಪತ್ತೆ
ಅತಿಯಾದ ಕಾಮದಾಹಕ್ಕೆ ಬಲಿಯಾದ ಆಂಟಿ: ಮೃತ ಮಹಿಳೆ ಶೋಭಾ ಅವರಿಗೆ ಸುಂದರ ಸಂಸಾರವಿದ್ದು, ಎರಡು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು, ಜೀವನಕ್ಕಾಗಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಇನ್ನು ಗಂಡ ಚಿಕ್ಕಪೇಟೆಯಲ್ಲಿ ಉದ್ಯಮ ನಡೆಸುತ್ತಾ ಪ್ರತ್ಯೇಕ ಮನೆಯಲ್ಲಿದ್ದರು. ಇತ್ತ ಒಬ್ಬಂಟಿಯಾಗಿದ್ದ ಮಹಿಳೆ ಸಾಮಾಜಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದು, ಇನ್ಸ್‌ಸ್ಟಾಗ್ರಾಮ್‌ನಲ್ಲಿ ಚೆಂದದ ವೀಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದ ಮೈಸೂರಿನ ಯುವಕ ನವೀನ್‌ನೊಂದಿಗೆ ಕಾಮೆಂಟ್ ಮಾಡುತ್ತಾ ಸ್ನೇಹ ಬೆಳೆಸಿದ್ದಾಳೆ. ನಂತರ ಇವರ ಸ್ನೇಹದ ಫಲವಾಗಿ ಮೊಬೈಲ್ ನಂಬರ್ ಎಕ್ಸೇಂಜ್ ಮಾಡಿಕೊಂಡು ವಾಟ್ಸಾಪ್ ಚಾಟ್, ವಿಡಿಯೋ ಕರೆ ಮಾಡಿಕೊಂಡಿದ್ದಾರೆ. ಇವರ ನಡುವಿಮನ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಕೆಲ ತಿಂಗಳ ಹಿಂದೆ ಆರ್.ಟಿ. ನಗರದ ಹೋಟೆಲೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಅವರ ಸಂಬಂಧ ನಿರಂತರವಾಗಿ ಮುಂದುವರೆದಿತ್ತು.
ಇನ್ನು ಶೋಭಾ ತನ್ನ 2ನೇ ಮಗಳನ್ನು ಏ.04ರಂದು ಮದುವೆ ಮಾಡಿಕೊಟ್ಟು ಗಂಡನ ಮನೆಗೆ ಕಳುಹಿಸಿದ್ದರಿಂದ ಎಲ್ಲ ಜವಾಬ್ದಾರಿಯೂ ಮುಗಿದು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಈಗ ತನ್ನ ಪ್ರೇಮಿ ನವೀನ್‌ನನ್ನು ರಾತ್ರಿ 10 ಗಂಟೆಗೆ ಮನೆಗೆ ಕರೆಸಿಕೊಂಡಿದ್ದಾರೆ. ಆಗ ನವೀನ್‌ನೊಂದಿಗೆ ಊಟ ಮಾಡಿದ್ದಾರೆ. ಈ ವೇಳೆ ಶೋಭಾ ಸ್ವಲ್ಪ ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಇದಾದ ಬಳಿಕ ನವೀನ್‌ಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋವನ್ನು ತೋರಿಸಿ ನೀನು ಇದೇ ಶೈಲಿಯಲ್ಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ನವೀನ್‌ಗೆ ಇದು ಇಷ್ಟವಾಗದೇ ವಿರೋಧ ಮಾಡಿದ್ದಾನೆ. ಇನ್ನು ನವೀನ್‌ನ ಕೈಗೆ ಮೊದಲೇ ಸ್ವಲ್ಪ ಗಾಯವಾಗಿತ್ತು. ವಿವಿಧ ಭಂಗಿಯಲ್ಲಿ ಲೈಂಗಿಕ ಕ್ರಿಯೆಗೆ ಒಪ್ಪದ ನವೀನ್‌ನ ಗಾಯಗೊಂಡ ಕೈಯನ್ನು ಮತ್ತೆ ಗಾಯಗೊಳಿಸಿದ್ದಾರೆ.
ಮಗಳಿಲ್ಲದಾಗ ಇನ್ಸ್ಟಾಗ್ರಾಮ್ ಸ್ನೇಹಿತನನ್ನು ಮನೆಗೆ ಕರೆದ ಮಹಿಳೆ, ರಾತ್ರಿ ಆಪ್ತವಾಗಿ ಕಳೆದು ಬೆಳಗ್ಗೆ ಕೊಲೆ!
ಮದ್ಯ ಸೇವನೆ ಮಾಡಿ ವಿಚಿತ್ರ ಭಂಗಿಗಳಲ್ಲಿ ಕಾಮದಾಹ ತೀರಿಸಿಕೊಳ್ಳಲು ಮುಂದಾದ ಶೋಭಾ ಅವರನ್ನು ನಿರಾಕರಣೆ ಮಾಡಿದ್ದಾನೆ. ಇಷ್ಟಕ್ಕೂ ಬಗ್ಗದಿದ್ದಾಗ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ, ಆಕೆಯ ಬೆತ್ತಲೆ ದೇಹವನ್ನು ಅಲ್ಲಿಯೇ ಬಿಟ್ಟು ಅವರ ಕಾರಿನ ಕೀ ಮತ್ತು ಅವರ ಮೊಬೈಲ್ ಹಿಂದಿದ್ದ ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗಿದ್ದಾನೆ. ಮರುದಿನ ಬೆಳಗ್ಗೆ ಅವರ ಮೊದಲ ಪುತ್ರಿ ಅಮ್ಮನಿಗೆ ಕರೆ ಮಾಡಿದಾಗ ಫೋನ್ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡು ಬಂದು ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈಗ ಆರೋಪಿ ಸಿಕ್ಕಿದ್ದು, ಕಾಮದಾಸೆಗೆ ಮಹಿಳೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.