ಕೈ ಇಲ್ಲದೇ ಕಾರು ಚಲಾಯಿಸುವ ಏಷ್ಯಾದ ಮೊದಲ ಮಹಿಳೆ!

By Kannadaprabha NewsFirst Published Apr 25, 2024, 4:38 AM IST
Highlights

ದೈಹಿಕವಾಗಿ ಸಧೃಡವಾಗಿದ್ದರೂ ಕೆಲವರಿಗೆ ಡ್ರೈವಿಂಗ್ ಅಂದ್ರೆ ಏನೋ ಭಯ. ಆದರೆ ಕೇರಳ ಮೂಲದ ಮಹಿಳೆ ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಈ ಮೂಲಕ ಕೈ ಇಲ್ಲದೇ ಕಾರು ಓಡಿಸುವ ಏಷ್ಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ತಿರುವನಂತಪುರಂ (ಏ.25) : ದೈಹಿಕವಾಗಿ ಸಧೃಡವಾಗಿದ್ದರೂ ಕೆಲವರಿಗೆ ಡ್ರೈವಿಂಗ್ ಅಂದ್ರೆ ಏನೋ ಭಯ. ಆದರೆ ಕೇರಳ ಮೂಲದ ಮಹಿಳೆ ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಈ ಮೂಲಕ ಕೈ ಇಲ್ಲದೇ ಕಾರು ಓಡಿಸುವ ಏಷ್ಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

32 ವರ್ಷದ ಜಿಲುಮೋಲ್ ಮಾರಿಯೇಟ್ ಥಾಮಸ್ ಗೆ ಹುಟ್ಟಿನಿಂದಲೇ ಎರಡೂ ಕೈಗಳಿರಲಿಲ್ಲ. ಆದರೆ ಕಾರು ಚಲಾಯಿಸುವುದರ ಬಗ್ಗೆ ವಿಪರೀತ ಆಸಕ್ತಿ. ಸ್ವತಂತ್ರವಾಗಿ ಬದುಕಬೇಕು ಎನ್ನುವ ಕಾರಣಕ್ಕೆ ಮರಿಯಾ ಡ್ರೈವಿಂಗ್ ಸ್ಕೂಲ್ ನಲ್ಲಿ ಡ್ರೈವಿಂಗ್ ಕಲಿತಿದ್ದಾರೆ. ಬಳಿಕ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದ ಆಕೆ ಬರೋಬ್ಬರಿ 6 ವರ್ಷಗಳ ಹೋರಾಟದ ನಂತರ 2023 ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಪಾಲಕ್ಕಡ್ ನಲ್ಲಿ ಚಾಲನಾ ಪರವಾನಗಿ ಹಸ್ತಾಂತರಿಸಿದ್ದಾರೆ.

 

ಇಂತಹ ಮಹಿಳೆಯರನ್ನು ಮದುವೆಯಾದರೆ ದಿನವೂ ನರಕವೇ.. ನೂರು ಬಾರಿ ಯೋಚಿಸಿ

ಈಕೆ ಚಾಲನಾ ಪರಾವನಗಿ ಪಡೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆರ್ ಟಿ ಓ ಲೈಸೆನ್ಸ್ ನೀಡುವುದಕ್ಕೆ ನಿರಾಕರಿಸಿತ್ತು. ಜಿಲುಮೋಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಟೆಸ್ಟಿಂಗ್ ನೀಡಲಾಗಿತ್ತು, ಅಲ್ಲಿಯೂ ಲೈಸೆನ್ಸ್ ನಿರಾಕರಣೆಯಾಗಿತ್ತು. ನಂತರ ಆಯೋಗದ ಮೊರೆ ಹೋದ ಜಿಲುಮೋಲ್ ಲೈಸೆನ್ಸ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಏಷ್ಯಾದ ಮೊದಲ ಮಹಿಳೆ ಎನ್ನುವ ದಾಖಲೆ ಬರೆದಿದ್ದಾರೆ.

click me!