vuukle one pixel image

ಶಿವಮೊಗ್ಗ ನಗರದಲ್ಲಿ ಸುವರ್ಣನ್ಯೂಸ್ ಮೆಗಾಫೈಟ್:ಕ್ಷೇತ್ರದ ರಣಾಂಗಣದ ಬಗ್ಗೆ ಜನಾಭಿಪ್ರಾಯವೇನು..?

Apr 14, 2023, 11:51 AM IST

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಈ ಮಧ್ಯೆ  ಶಿವಮೊಗ್ಗದಲ್ಲಿ  ರಣರೋಚಕ ಮೆಗಾಫೈಟ್‌ನ್ನು ಏಷ್ಯಾನೆಟ್​ ಸುವರ್ಣ ನ್ಯೂಸ್ ನಡೆಸಿದೆ. ಇಲ್ಲಿ ಘಟಾನುಘಟಿ ನಾಯಕರ ದಂಗಲ್ , ಕಾರ್ಯಕರ್ತರ ನಡುವೆ ಟಾಕ್ ವಾರ್ ನೋಡಬಹುದಾಗಿದೆ.  ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಸಾಕಷ್ಟು ಕುತೂಹಲ ಸೃಷ್ಟಿಸಿದೆ, ಬಿಜೆಪಿಯಿಂದ ಒಂದೆಡೆ ಮಾಜಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡಿ, ಬೆಂಬಲಿಗರಿಗೆ ಶಾಕ್ ಕೊಟ್ಟರೆ, ಇನ್ನೊಂದೆಡೆ ಪುತ್ರ ಕಾಂತೇಶ್ ಈಶ್ವರಪ್ಪ ಬಿಜೆಪಿಯಿಂದ ಟಿಕೆಟ್ ಪಡೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ.ಈಶ್ವರಪ್ಪ ಯಡಿಯೂರಪ್ಪನವರು ಇರುವಂತಹ ಘಟಾನುಘಟಿ ಜಿಲ್ಲೆ ಯಾಗಿದೆ. ಕಾಂಗ್ರೆಸ್ ಒಂದು ಕಾಲದಲ್ಲಿ ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರು ಇದ್ದವರು. ಹಾಗೆ ಕಳೆದ ಚುನಾವಾಣೆಯಲ್ಲಿ ಜೆಡಿಎಸ್‌ ಕೂಡಾ ಮೂರು ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು . ಈ ಚುನಾವಣೆಯಲ್ಲಿ ಯಾವ ಅಂಶಗಳನ್ನು ಇಟ್ಟುಕೊಂಡು ಪಕ್ಷಗಳು ಜನರ ಬಳಿ ಹೋಗುತ್ತೆ ಎನ್ನುವುದನ್ನು  ಪಕ್ಷದ ಮುಖಂಡರು ನೇರಾನೇರ ಚರ್ಚೆ ಯಲ್ಲಿ ಏನು ಹೇಳುತ್ತಾರೆ ನೋಡಿ