ಗರ್ಭ ಧರಿಸಿಬಿಡುತ್ತೇನೆಂಬ ಭಯದಿಂದ 'ಆ' ಸುಖದಿಂದಲೇ ದೂರ ಉಳಿತಾರಿವರು!

By Suvarna News  |  First Published Jan 5, 2025, 5:49 PM IST

ಕೆಲವು ಜನ್ಮ ರಾಶಿಯವರು ಲೈಂಗಿಕ ಸಂಬಂಧದ ವಿಚಾರದಲ್ಲಿ ಸ್ವಲ್ಪ ಟ್ಯೂಬ್ ಲೈಟ್. ಯಾವ ಸ್ವಿಚ್ ಆನ್ ಮಾಡಿದರೆ, ಯಾವ ಬಲ್ಬ್ ಉರಿಯುತ್ತೆ ಎನ್ನುವ ಬೇಸಿಕ್ ಜ್ಞಾನವೂ ಇರೋಲ್ಲ. ಈ ರಾಶಿಯವರಿಗೆ ಸಂಗಾತಿಯೇ ಎಲ್ಲವನ್ನೂ ಹೇಳಿಕೊಡುವುದು ಅನಿವಾರ್ಯವಾಗುತ್ತೆ. 


ಈಗಿನ ಮಕ್ಕಳಿಗೆ ಇಂಟರ್ನೆಟ್ ಎನ್ನುವ ತಂತ್ರಜ್ಞಾನ ಎಲ್ಲವನ್ನೂ ಕಲಿಸಿರುತ್ತೆ. ಆದರೆ, ಒಂದು ಕಾಲವಿತ್ತು ಹೆಣ್ಣಾಗಲಿ, ಗಂಡಾಗಲಿ ಮದ್ವೆಯಾಗೋ ತನಕವೂ ಲೈಂಗಿಕ ವಿಷಯದಲ್ಲಿ ಎಂಥ ಜ್ಞಾನವೂ ಇರುತ್ತಿರಲಿಲ್ಲ. ಅದರಲ್ಲಿ ಕೆಲವು ರಾಶಿಯವರಂತೆ ಈ ವಿಷಯದಲ್ಲಿ very experimental. 

ಔದ್ಯೋಗಿಕ ಕ್ಷೇತ್ರದಲ್ಲಿ ಸಿಕ್ಕಪಾಟ್ಟೆ ಸ್ಕಿಲ್ ಇರೋ ಕೆಲವರು ಹಾಸಿಗೆಗೆ ಬಂದ್ರೆ ಫುಲ್ ಡಲ್ ಆಗಿರುತ್ತಾರೆ. ಅವರ ವರ್ತನೆಯೇ ಸ್ವಲ್ಪ ಅನ್ ರೊಮ್ಯಾಂಟಿಕ್ ಅಂದ್ರೆ ತಪ್ಪಾಗೋಲ್ಲ. ಸಂಗಾತಿಗಳು ಈ ವಿಷಯದಲ್ಲಿ ಚುರುಕಿದ್ದರೆ ಬಚಾವ್. ಇಲ್ಲದಿದ್ದರೆ ಇವರ ಪ್ರಣಯದ ಬದುಕು ಹೇಳುವಷ್ಟು ಸ್ವಾರಸ್ಯವಾಗಿರುವುದಿಲ್ಲ. ಯಾವ ರಾಶಿಯವರ ಬದುಕು ಹೇಗಿರುತ್ತೆ? ಇಲ್ಲಿದೆ ನೋಡಿ.

Tap to resize

Latest Videos

ವೃಷಭ ರಾಶಿ (Taurus)
ನಾಜೂಕು ಅಂದ್ರೇನು ಅಂತಾನೇ ಗೊತ್ತಿರದ ಈ ರಾಶಿಯವರು ಸ್ವಲ್ಪ ಒರಟು. ಹಾಸಿಗೆ ಮೇಲೂ ಇವರು ಸಿಕ್ಕಾಪಟ್ಟೆ ಒರಟು. ಗಂಡ ವೃಷಭ ರಾಶಿಯವರಾಗಿದ್ದರೆ ಹೆಂಡತಿ ನೋವು ಅನುಭವಿಸಬೇಕು. ಸ್ಮೂತ್ ಇರೋ ಹೆಣ್ಣು ಮಕ್ಕಳನ್ನು ಈ ರಾಶಿಯ ಪತಿಯಂದಿರನ್ನು ಸಹಿಸಿಕೊಳ್ಳುವುದು ಕಷ್ಟ.  ರೊಮ್ಯಾನ್ಸ್ ಸಹ ಬೇಗ ಮುಗಿಬೇಕು ಅಂತಾನೆ ಎಕ್ಸ್‌ಪೆಕ್ಟ್ ಮಾಡ್ತಾರೆ ಇವರು. ಒಟ್ಟಿನಲ್ಲಿ ಶೃಂಗಾರಕ್ಕೆ ಇವರು ಹೇಳಿ ಮಾಡಿಸಿದವರಲ್ಲ. ಇದರಲ್ಲಿ ನಿಧಾನವೇ ಪ್ರಧಾನ. ಅದೇ ಹೆಚ್ಚು ಕಾಲ ಸುಖ ಉಳಿಯುವಂತೆ ಮಾಡುತ್ತದೆ. 

Best Dads: ಕಠು ಹೃದಯಿಯಾದ್ರೂ, ಮಕ್ಕಳನ್ನು ರಕ್ಷಿಸೋದು ಈ ರಾಶಿಯವರಿಗೆ ಗೊತ್ತು!

ಸಿಂಹ ರಾಶಿ (Leo)
ಸಿಂಹದಂತಿದ್ದರೂ, ಸ್ವಲ್ಪ ನಾಚಿಕೆ ಹೆಚ್ಚು. ಪ್ರಪೋಸ್ ಮಾಡುವಾಗಲೂ ಸ್ವಲ್ಪ ಸಂಕೋಚದಿಂದ  ಹಿಂದೇಟು ಹಾಕುತ್ತಲೇ ಇರುತ್ತಾರೆ. ಎಲ್ಲದರಲ್ಲಿಯೂ ಇವರು ಹಿಂದೆಯೇ ಉಳಿದು ಬಿಡುತ್ತಾರೆ. ಇಷ್ಟಪಟ್ಟವರೇ ಮೊದಲ ಪ್ರಪೋಸ್ ಮಾಡಲೆಂದು ನಿರೀಕ್ಷಿಸುತ್ತಾರೆಯೇ ಹೊರತು, ತಾವು ಒಂದು ಹೆಜ್ಜೆ ಮುಂದೆ ಇಡೋಲ್ಲ. ಇದೇ ರೀತಿ ಹಾಸಿಗೆ ಮೇಲೂ ಇವರ ವರ್ತನೆ ಮುಂದುವರಿಯುತ್ತದೆ. ನಾಚಿಕೆ ಇದ್ದರೆ ಚಂದ ಹೌದು. ಪ್ರೀತಿ ಪ್ರೇಮ ಪ್ರಣಯದಲ್ಲೂ ಬರೀ ಅದೇ ಆದರೆ ಹೇಗೆ? ನಿಮ್ಮ ಆಸಕ್ತಿ, ಆಸೆ, ಬಯಕೆಗಳನ್ನು ಹಾಗೂ ಸೆಕ್ಷುಯುಲ್ ಫ್ಯಾಂಟಸಿಗಳನ್ನು ಹೇಳಿಕೊಳ್ಳಬೇಕು. ಆಗ ಲೈಫ್ ರೊಮ್ಯಾಂಟಿಕ್ ಆಗಿರುತ್ತೆ. ಅದು ಬಿಟ್ಟು ಸಂಕೋಚ ಪಟ್ಟುಕೊಂಡರೆ, ಮಜಾವೇ ಇರೋಲ್ಲ. 

ತುಲಾ ರಾಶಿ (Libra)
ಇವರಿಗೆ ವಿಪರೀತ ಧಿಮಾಕು. ಅಹಂಕಾರ. ಅದರಿಂದಾನೇ ಅನೇಕರ ಬದುಕು ಹಾಳಾಗಿದೆ. ಒಂದು ಕ್ಷಮೆಯಿಂದ ಸುಮಾರು ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ. ಉಹೂಂ. ಆದರೂ ಕೇಳೋಲ್ಲ. ಹೋಗಲಿ ಮನಸಾರೆ ಪ್ರೀತಿಸಲು ಬರುತ್ತಾ? ಅದೂ ಇವರಿಗೆ ಆಗೋಲ್ಲ. ಅಲ್ಲೂ ಸಿಕ್ಕಪಾಟ್ಟೆ ಒರಟು ಒರಟಾಗಿ ವರ್ತಿಸುತ್ತಾರೆ. ಅದಕ್ಕೆ ಇವರ ಲೈಂಗಿಕ ಜೀವನದಲ್ಲಿಯೂ ಖುಷಿ ಕಡಿಮೆಯೇ. ಹೊರಗೆ ಹೇಗಾದರೂ ಇರಿ. ಆದರೆ, ಬೆಡ್ ರೂಮಲ್ಲಿ ಸಂಗಾತಿ ಜೊತೆ ಏಕಾಂತದಲ್ಲಿರುವಾಗಲಾದರೂ ಹಮ್ಮು ಬಿಮ್ಮು ಬಿಡಬೇಕು ಅಲ್ವಾ? ನಾಡಿನ ದೊರೆಯಾದರೇನು, ಹೆಂಡತಿಗೆ ನೀವು ಗಂಡ ಅನ್ನೋದು ಮರೀಬಾರದು. ಅಲ್ಲಿ ಹೇಗೆ ವರ್ತಿಸಬೇಕೋ ಹಾಗೆಯೇ ನಡೆದುಕೊಳ್ಳಬೇಕು. ಅದು ಬಿಟ್ಟು, ಅಲ್ಲಿ ಅಧಿಕಾರ ಚಲಾಯಿಸಲು ಹೋದರೆ ಸುಖ ಸಿಗೋದು ಹೇಗೆ?

ಮಕರ ರಾಶಿ (Capricorn)
ಇವರಿಗೋ ವಿಪರೀತ ಅನುಮಾನ. ಯಾವಾಗಲೂ ದ್ವಂದ್ವ. ಕೆಲವೊಮ್ಮೆ ಓಕೆ. ಆದರೆ, ಸದಾ ಅದೇ ಮನಸ್ಥಿತಿ ಇದ್ದರೆ ಹೇಗೆ ಹೇಳಿ? ಇದೇ ರತಿಕ್ರೀಡೆ ಹಾಗೂ ಪ್ರಣಯಕ್ಕೂ ಇವರು ಮುಂದುವರಿಸುವುದರಿಂದ ಆ ಸುಖದಿಂದ ವಂಚಿತರಾಗುವುದೇ ಹೆಚ್ಚು. ಅಷ್ಟೇ ಇಲ್ಲ ಈ ರಾಶಿಯವರನ್ನು ಕಟ್ಟಿಕೊಂಡವರೂ ಹಲವು ಸುಖದಿಂ ವಂಚಿತರಾಗುವುದರಲ್ಲಿ ಅನುಮಾನವೇ ಇಲ್ಲ. ಅನುಮಾನ, ದ್ವಂದ್ವ ಬಿಟ್ಟರೆ ಮತ್ತೆಲ್ಲ ವಿಷ್ಯದಲ್ಲೂ ಇವರು ಓಕೆ. ಅದನ್ನು ಸರಿ ಮಾಡಿಕೊಳ್ಳಬೇಕು. 

ಬ್ರೇಕ್ ಅಪ್: ಈ ರಾಶಿಯವರು ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಮಾಡ್ಬಹುದು?

ಕುಂಭ ರಾಶಿ (Aquarius)
ಇವರಿಗೆ ಸದಾ ಅನಾರೋಗ್ಯದ ಭೀತಿ. ಅದರಿಂದಲಾ ಆತಂಕವೂ ಕಾಡೋದು ಹೆಚ್ಚು. ಎಲ್ಲಿ ರತಿಕ್ರೀಡೆಯಲ್ಲಿ ಸಕ್ರಿಯರಾದರೆ ಎಲ್ಲಿ ಬಸುರಾಗುತ್ತೇವೆ ಎಂಬ ಭಯ, ಆತಂಕ, ಅದರಿಂದಾನೇ ಲೈಫನ್ನು ಎಂಜಾಯ್ ಮಾಡೋಲ್ಲ ಇವರು. ಪಡೆಯಬೇಕಾದ ಸುಖದಿಂದ ವಂಚಿತರಾಗುತ್ತಾರೆ. ಸುರಕ್ಷಿತ ಸೆಕ್ಸ್‌ನಿಂದ ಗರ್ಭಧಾರಣೆಯನ್ನು ತಡೆಯಬಹುದೆಂಬ ಜ್ಞಾನವೂ ಇವರ ಸಹಾಯಕ್ಕೆ ಬರೋಲ್ಲ. 

 

ಒಟ್ಟಿನಲ್ಲಿ ಒಂದೊಂದು ರಾಶಿಯವರ ಸ್ವಭಾವ ಸಹಜವಾಗಿಯೇ ಒಂದೊಂದು ರೀತಿ ಇರುತ್ತೆ. ಆದರೆ, ಕೆಲವೊಂದು ವ್ಯಕ್ತಿತ್ವ ದೋಷವನ್ನು ಸರಿಪಡಿಸಿಕೊಂಡು ಮುನ್ನುಗ್ಗಬೇಕು. ಅದು ಆಯಾ ವ್ಯಕ್ತಿಯ ಕೈಯಲ್ಲೇ ಇರುತ್ತೆ. ಆದರೆ, ಅದಕ್ಕೆ ತಕ್ಕ ಪರಿಶ್ರಮ ಹಾಕಬೇಕು ಅಷ್ಟೇ. 

click me!