ಶಾಲೆಗೆ ಹೋಗುವಾಗ ಮಗ ಸ್ಕೂಲ್ ಬ್ಯಾಗ್ ಮರೆತು ಹೋದಾಗ ತಾಯಿ ಡೆಲಿವರಿ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಾಯಿಗೆ ತಕ್ಕ ಮಗ ಎಂದು ಕಮೆಂಟ್ ಮಾಡಿದ್ದಾರೆ.
ನವದೆಹಲಿ: ಎಲ್ಲಿಯಾದ್ರೂ ಹೋಗುತ್ತಿರುವಾಗ ಅವಶ್ಯಕ ವಸ್ತುಗಳನ್ನು ಮರೆತು ಹೋಗುವುದು ಸಾಮಾನ್ಯದ ಸಂಗತಿ. ಪರ್ಸ್, ಮೊಬೈಲ್, ಲಂಚ್ ಬಾಕ್ಸ್ ಹೀಗೆ ಕೆಲ ವಸ್ತುಗಳನ್ನು ಮರೆತು ಹೋಗಿ ಮತ್ತೆ ಬಂದು ತೆಗೆದುಕೊಂಡು ಹೋಗುತ್ತವೆ. ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಯಾವುದೋ ಒಂದು ಪುಸ್ತಕವನ್ನು ಮರೆತು ಹೋಗುವುದು ಸಾಮಾನ್ಯ. ಶಾಲೆಗೆ ಹೋದ್ಮೇಲೆ ಆ ವಿಷಯ ನೆನಪಿಗೆ ಬಂದು ಶಿಕ್ಷಕರಿಂದ ಪೆಟ್ಟು ತಿನ್ನುತ್ತಾರೆ. ಆದ್ರೆ ಇಲ್ಲೊಬ್ಬ ಬಾಲಕ ಶಾಲೆಗೆ ಹೋಗುವಾಗ ಸ್ಕೂಲ್ ಬ್ಯಾಗ್ ಮರೆತು ಹೋಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಗನ ಬ್ಯಾಗ್‌ನ್ನು ತಾಯಿ ಶಾಲೆಗೆ ತಲುಪಿಸಿದ ವಿಧಾನಕ್ಕೆ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋವನ್ನು Gojo Rider ಹೆಸರಿನ ವ್ಲಾಗರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ 9.02 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು 5 ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ತಾಯಿಗೆ ತಕ್ಕ ಮಗ ಎಂದು ಕಮೆಂಟ್ ಮಾಡಿದ್ದಾರೆ. ನಾನು ಬಾಲಕನನ್ನು ನೋಡಬೇಕು ಎಂದು ಹಲವರು ಬೇಡಿಕೆಯನ್ನಿರಿಸಿದ್ದಾರೆ. ಹಾಗೆ ವಿಡಿಯೋ ಮಾಡಿದ ವ್ಯಕ್ತಿಯನ್ನು ಸಹ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಮಹಾನಗರಗಳಲ್ಲಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಸೇವೆಗಳಿವೆ. ಒಂದು ಕರೆ ಮಾಡಿದ್ರೆ ನೀವಿರುವ ಸ್ಥಳಕ್ಕೆ ಬಂದು ಕೊಡುವ ವಸ್ತುವನ್ನು ಸೂಚಿಸಿರುವ ವಿಳಾಸಕ್ಕೆ ತಲುಪಿಸುತ್ತಾರೆ. ಇದೇ ರೀತಿ ಮಹಿಳೆಯೂ ಮಗನ ಸ್ಕೂಲ್ ಬ್ಯಾಗ್ ಕಳುಹಿಸಿದ್ದಾರೆ. ಬ್ಯಾಗ್ ಪಡೆಯಲು ಬಂದ ವ್ಯಕ್ತಿ ಈ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಬೈಕ್‌ನಲ್ಲಿರೋ ಬರೋ ವ್ಯಕ್ತಿ, ಏನು ಪಾರ್ಸೆಲ್ ಇದೆ ಎಂದು ಕೇಳುತ್ತಾನೆ. ಇದಕ್ಕೆ ಮಹಿಳೆ ಸ್ಕೂಲ್ ಬ್ಯಾಗ್ ನೀಡುತ್ತಾರೆ. ಒಂದು ಕ್ಷಣ ಆಶ್ಚರ್ಯಗೊಂಡ ವ್ಯಕ್ತಿ ಸ್ಕೂಲ್ ಬ್ಯಾಗ್ ಬಿಟ್ಟು ಹೋಗಿದ್ದಾನೆಯೇ ಎಂದು ಪ್ರಶ್ನೆ ಮಾಡುತ್ತಾನೆ. ಶಾಲೆ ಹೊರಗೆ ನಿಂತ್ರೆ ಸಾಕಲ್ಲವೇ? ಎಂದು ಕೇಳುತ್ತಾನೆ. ಇದಕ್ಕೆ ಮಹಿಳೆ ಹೌದು, ಮಗನ ಹೆಸರು ಇಶಾಂತ್ ಶರ್ಮಾ, ಫಸ್ಟ್ ಸಿ ಕ್ಲಾಸ್ ಎಂದು ಹೇಳಿ ಮನೆಯೊಳಗೆ ಹೋಗುತ್ತಾರೆ.
ಇದನ್ನೂ ಓದಿ: ಹಾರ ಬದಲಿಸ್ಕೊಂಡು ವರ ಮಾಡಿದ ಕೆಲಸಕ್ಕೆ ಹೆಣ್ಮಕ್ಕಳು ಫುಲ್ ಖುಷ್; ಕಾರ್ಪೋರೇಟ್ ಗಂಡ ಅಂದ್ರು ಗಂಡೈಕ್ಳು
ಶಾಲೆಯ ಗೇಟ್ ಬಳಿ ಹೋದ ಅಲ್ಲಿಯ ಸೆಕ್ಯೂರಿಟಿ ಹತ್ರವೂ ಹೋಗಿ ಈ ಬ್ಯಾಗ್ ವಿದ್ಯಾರ್ಥಿಗೆ ಕೊಡಬೇಕು ಎಂದು ಹೇಳುತ್ತಾನೆ. ಸೆಕ್ಯೂರಿಟಿ ಸಹ ಬ್ಯಾಗ್ ಇಲ್ಲದೇ ಶಾಲೆಗೆ ಬಂದನಾ ಎಂದು ನಗುತ್ತಾರೆ. ಹುಡುಗನ ಹೆಸರು ಆಶೀಶ್ ಇರಬೇಕು ಅಂತ ಗೊಂದಲದಲ್ಲಿ ಹೇಳುತ್ತಾನೆ. ಇಲ್ಲ ಮರೆತು ಹೋಯ್ತು ಎಂದು ಬ್ಯಾಗ್ ಓಪನ್ ಮಾಡಿ, ಪುಸ್ತಕ ತೆಗೆದು ಬಾಲಕ ಹೆಸರು, ತರಗತಿ ಹೇಳುತ್ತಾನೆ.
ಈ ವಿಡಿಯೋ ನೋಡಿದ ನೆಟ್ಟಿಗರು ಬ್ಯಾಗ್ ಡೆಲಿವರಿ ಮಾಡಿದ ವ್ಯಕ್ತಿಯನ್ನು ಸಹ ಟ್ರೋಲ್ ಮಾಡಿದ್ದಾರೆ. ಇಷ್ಟು ದೊಡ್ಡವನಾಗಿ ಆ ಮಹಿಳೆ ಹೇಳಿದ್ದ ಹೆಸರನ್ನು ಕೆಲವೇ ನಿಮಿಷದಲ್ಲಿ ಮರೆತಿದ್ದೀಯಾ? ಪಾಪ ಆ ಬಾಲಕನದ್ದು ಯಾವುದೇ ತಪ್ಪಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ಘಟನೆ ಪಂಜಾಬ್‌ದ್ದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರವಾಸಿ ಮಹಿಳೆಗೆ ಕಾಶ್ಮೀರದಲ್ಲಿ ಸಿಕ್ತು ಕ್ಯೂಟ್ ಮಗು; ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು