'ಅಂದು ಕರಸೇವೆಯಲ್ಲಿ ಪಾಲ್ಗೊಂಡಿದ್ದವರು ಇಂದು ಏನಾಗಿದ್ದಾರೆ'

Feb 7, 2021, 8:56 PM IST

ವಿಜಯಪುರ(ಫೆ.  07) ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ವಿಜಯಪುರದಲ್ಲಿ ದೇಣಿಗೆ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೇಜಾವರ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಚಾಲನೆ ನೀಡಿದರು.

ಗುಹೆಯಲ್ಲಿದ್ದ ಸಾಧುರಿಂದ ಒಂದು ಕೋಟಿ ರೂ. ದೇಣಿಗೆ

ಅಂದು ರಾಮ ಮಂದಿರ ಕರಸೇವೆಯಲ್ಲಿ ಪಾಲ್ಗೊಂಡವರು ಇಂದು ಸಂಸದ, ಎಮ್.ಎಲ್.ಎ ಸೇರಿ ಕೊನೆಪಕ್ಷ ಗ್ರಾಮ ಪಂಚಾಯ್ತಿ ಸದಸ್ಯರಾದ್ರು ಆಗಿದ್ದಾರೆ. ಬಾಬ್ರಿ ಮಸೀದಿ ದ್ವಂಸ ವೇಳೆ ನಾನು ಕೂಡ ಏನು ಇರಲಿಲ್ಲ. ಈಗ ಸಂಸದ, ಸಚಿವ ಎಲ್ಲವು ಆಗಿದ್ದೇನೆ ಎಂದ್ರು. ಇನ್ನು ಪ್ರತಿವರ್ಷ ಚುನಾವಣೆ ಬಂದಾಗಲು ರಾಮಮಂದಿರ ವಿಚಾರ ಪ್ರಸ್ತಾಪವಾಗ್ತಿತ್ತು. ಚುನಾವಣೆಗಾಗಿಯೇ ಬಿಜೆಪಿಯವರು ರಾಮಮಂದಿರ ನಿರ್ಮಾಣ ವಿಚಾರ ತೆಗೆಯುತ್ತಾರೆ ಎಂದು ಜನರು ಆಡಿಕೊಳ್ತಿದ್ರು. ಕೊನೆಗೆ ನರೇಂದ್ರ ಮೋದಿ ಹಸ್ತದಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ ಎಂದು  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.