ರಂಜಿತ್‌ಗೆ ಒಂದು ನ್ಯಾಯ ಮಂಜುಗೆ ಮತ್ತೊಂದು ನ್ಯಾಯ? ಶಿಶಿರ್‌ನ ಬಿಸಾಡಿದ್ದಕ್ಕೆ ಹೊರ ಹಾಕಿ ಎಂದ ನೆಟ್ಟಿಗರು

First Published | Nov 28, 2024, 11:44 AM IST

ರಂಜತ್‌ನ ಹೊರ ಹಾಕಿದ್ದಕ್ಕೆ ಈಗ ಉಗ್ರಂ ಮಂಜು ಕೂಡ ಹೊರ ಬರಬೇಕು ಎಂದು ವಾದ ವಿವಾದ ಸೃಷ್ಟಿ ಮಾಡಿದ ನೆಟ್ಟಿಗರು...............

ಬಿಗ್ ಬಾಸ್ ಸೀಸನ್‌ 11 ಯಶಸ್ವಿಯಾಗಿ 57ನೇ ದಿನಕ್ಕೆ ಕಾಲಿಟ್ಟಿದೆ. ಕ್ಯಾಪ್ಟನ್ ಉಗ್ರಂ ಮಂಜು ಈ ವಾರ ಮಹಾರಾಜನ ಸ್ಥಾನ ಸ್ವೀಕರಿಸಿದ್ದರೆ ಮೋಕ್ಷಿತಾ ಪೈ ಯುವ ರಾಣಿ ಸ್ಥಾನವನ್ನು ಅಲಂಕರಿಸಿದ್ದಾರೆ. 

ಈಗ ಮನೆಯಲ್ಲಿ ಎರಡು ತಂಡಗಳ ರಚನೆಯಾಗಿದೆ. ಸಹೋದರಿ ಮೋಕ್ಷಿತಾಗೆ ಮಂಜು ಮೋಸ ಮಾಡಿ ಅರಮನೆಯಿಂದ ಹೊರ ಹಾಕುತ್ತಾರೆ ಹಲವು ವರ್ಷಗಳ ನಂತರ ತಮ್ಮ ಸ್ಥಾನ ಮತ್ತು ಆಸ್ತಿಯನ್ನು ಪಡೆಯಲು ಯುವರಾಣಿ ಮತ್ತೆ ಅರಮನೆಗೆ ಮರುಳಿ ಬರುತ್ತಾಳೆ.

Tap to resize

ಲಿವಿಂಗ್ ಏರಿಯಾದಲ್ಲಿ ಮಂಜು ತಮ್ಮ ಪ್ರಜೆಗಳ ಜೊತೆ ಚರ್ಚಿಸಲು ಜಾಗ ನೀಡಲಾಗಿದೆ. ಮೋಕ್ಷಿತಾ ತಮ್ಮ ಪ್ರಜೆಗಳ ಜೊತೆ ಮಾತುಕತೆ ನಡೆಸಲು ಲಿವಿಂಗ್ ಏರಿಯಾದಲ್ಲಿ ಸ್ಥಾನ ನೀಡಲಾಗಿದೆ. ಇದನ್ನು ತಿಳಿಯದ ಮಂಜು ಮಹಾರಾಜ ದಾಳಿ ಮಾಡಲು ಮುಂದಾಗುತ್ತಾರೆ.

ಮಹಾರಾಣಿ ಮೋಕ್ಷಿತಾ ಪ್ರಜೆಯಾಗಿರುವ ಶಿಶಿರ್‌ ರಕ್ಷಣೆಗೆಂದು ಯುವರಾಣಿ ಅಡ್ಡ ನಿಲ್ಲುತ್ತಾರೆ ಆದರೆ ಮಂಜು ಕೋಪಗೊಂಡು ಪ್ರತಿಯೊಬ್ಬರನ್ನು ಎಳೆದು ಎಳೆದು ದೂರು ನೂಕುತ್ತಾರೆ. ಈ ವೇಳೆ ಶಿಶಿರ್ ಜೊತೆ ಮಂಜು ಜಗಳ ಮಾಡುತ್ತಾರೆ.

ಮೊದಲು ಶಿಶಿರ್‌ ಸೊಂಟ ಹಿಡಿದು ಎಳೆಯುವ ಪ್ರಯತ್ನ ಮಾಡುತ್ತಾರೆ. ಯಾವಾಗ ಶಿಶಿರ್‌ ಸೆರೆಯುವುದಿಲ್ಲ ಆಗ ತಮ್ಮ ಬಲದಿಂದ ಶಿಶಿರ್‌ನ ಎತ್ತಿ ಪಕ್ಕಕ್ಕೆ ಬಿಸಾಡುತ್ತಾರೆ. ಈ ದೃಶ್ಯಗಳನ್ನು ಬಿಗ್ ಬಾಸ್ 58ನೇ ದಿನ ಎಪಿಸೋಡ್‌ನಲ್ಲಿ ಸ್ಪಷ್ಟವಾಗಿ ಪ್ರಸಾರ ಮಾಡಿದ್ದಾರೆ.

ಲಾಯರ್ ಜಗದೀಶ್‌ಗೆ ಎದೆ ಕೊಟ್ಟು ನಿಂತಿದ್ದಕ್ಕೆ, ಕೈ ಹಿಡಿದು ಎಳೆದಿದ್ದಕ್ಕೆ ಮ್ಯಾನ್ ಹ್ಯಾಂಡ್ಲಿಂಗ್‌ ಎಂದು ಬಿಗ್ ಬಾಸ್ ಮನೆಯಿಂದ ಹೊರ ಹಾಕುತ್ತಾರೆ ಆದರೆ ಉಗ್ರಂ ಮಂಜು ಮಾಡಿರುವ ಜಗಳ ಎಷ್ಟು ಸರಿ? ಇದು ಕೂಡ ಮ್ಯಾನ್ ಹ್ಯಾಂಡ್ಲಿಂಗ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಹೀಗಾಗಿ ಉಗ್ರಂ ಮಂಜು ಕೂಡ ಮನೆಯಿಂದ ಹೊರ ಬರಬೇಕಿದೆ. ರಂಜಿತ್‌ಗೆ ಒಂದು ನ್ಯಾಯ ಕೊಟ್ಟು ಉಗ್ರಂ ಮಂಜುಗೆ ಒಂದು ತರ ನ್ಯಾಯ ಕೊಡುವುದು ಸರಿ ಅಲ್ಲ ಇಲ್ಲಿ ಮೋಸವಾಗುತ್ತಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

Latest Videos

click me!