ಕೊನೆಗೂ ಈಡೇರಲಿಲ್ಲ ಅಭಿಮಾನಿಗಳ ಆಸೆ: 18 ವರ್ಷಗಳ ದಾಂಪತ್ಯ ಜೀವನಕ್ಕೆ ಐಶ್ವರ್ಯ- ಧನುಷ್‌ ತೆರೆ!

By Suchethana D  |  First Published Nov 28, 2024, 11:43 AM IST

ರಜನಿಕಾಂತ್‌ ಪುತ್ರಿ ಐಶ್ವರ್ಯ ಮತ್ತು ನಟ ಧನುಷ್‌ ಅವರು   ಒಂದಾಗುತ್ತಾರೆ ಎನ್ನುವ ಅಭಿಮಾನಿಗಳ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಜೋಡಿಗೆ ನ್ಯಾಯಾಲಯ ವಿಚ್ಛೇದನ ನೀಡಿದೆ! ಡಿಟೇಲ್ಸ್‌ ಇಲ್ಲಿದೆ... 
 


ಸೂಪರ್​ಸ್ಟಾರ್ ರಜನೀಕಾಂತ್ ಪುತ್ರಿ ಕಾಲಿವುಡ್ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್  (Aishwarya Rajinikanth) ಮತ್ತು ಧನುಷ್ (Dhanush)  ಪ್ರತ್ಯೇಕವಾಗಿದ್ದು ಮೂರು ವರ್ಷಗಳೇ ಕಳೆದು ಹೋಗಿವೆ. ಇವರು ಮತ್ತೆ ಒಂದಾಗುವರು, ಪರಸ್ಪರ ಒಬ್ಬರನ್ನೊಬ್ಬರು ಮತ್ತೆ ಇಷ್ಟಪಡಲು ಶುರು ಮಾಡಿದ್ದಾರೆ, ಇದರಿಂದ ಶೀಘ್ರವೇ ಒಂದಾಗುವ ಗುಡ್​ ನ್ಯೂಸ್ ಕೊಡಲಿದ್ದಾರೆ ಎನ್ನುವ ಅಭಿಮಾನಿಗಳ ಅನಿಸಿಕೆ ಕೊನೆಗೂ ಹುಸಿಯಾಗಿ ಹೋಯ್ತು. ಐಶ್ವರ್ಯಾ ರಜನಿಕಾಂತ್‌ ಮತ್ತು ನಟ ಧನುಷ್‌ ಇದೀಗ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಕಳೆದ ಏಪ್ರಿಲ್‌ನಲ್ಲಿಯೇ ಅರ್ಜಿ ಸಲ್ಲಿಸಿದ್ದು, ಇದೀಗ  ನ್ಯಾಯಾಲಯ, ವಿಚ್ಛೇದನ ಮಂಜೂರು ಮಾಡಿದೆ.  

2004 ರಲ್ಲಿ ವಿವಾಹವಾಗಿದ್ದ ಈ ಜೋಡಿ, 2022ರ ಜನವರಿಯಲ್ಲಿ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ಇದೀಗ ಇಬ್ಬರೂ  ದೂರವಾಗಿದ್ದರೂ  ಇಬ್ಬರ ನಡುವಿನ ಸ್ನೇಹ, ಗೌರವ ಹಾಗೆಯೇ ಇದೆ ಎನ್ನಲಾಗಿತ್ತು. ಕೆಲ ದಿನಗಳ ಹಿಂದಷ್ಟೇ  ಐಶ್ವರ್ಯ ಅವರು  ಧನುಷ್‌ ಅವರನ್ನು ನೆನಪು ಮಾಡಿಕೊಂಡಿದ್ದರು.  ಮದುವೆಯಾಗಿ ಎರಡು ಮಕ್ಕಳಾದ ಮೇಲೆ 18 ವರ್ಷಗಳ ಬಳಿಕ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿದ್ದ ಜೋಡಿ,  ಮತ್ತೆ ಒಂದಾಗಲಿದ್ದಾರೆ  ಎನ್ನುವ ಮಾತು ಕೇಳಿ ಬಂದಿತ್ತು.  ಅಧಿಕೃತವಾಗಿ ವಿಚ್ಛೇದನವನ್ನು ಇವರು ಘೋಷಿಸದಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಇದೀಗ ಅಧಿಕೃತ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 

Tap to resize

Latest Videos

ಪತಿ ಮರ್ಯಾದೆಯನ್ನು ಎಲ್ಲರ ಎದುರು ಹೀಗೆ ತೆಗೆಯೋದಾ ನಟಿ ಶ್ವೇತಾ? ನಾಚಿ ನೀರಾದ ಪ್ರದೀಪ್‌!
 
ಇವರಿಬ್ಬರ ನಡುವೆ  ಪರಸ್ಪರ ದ್ವೇಷವಿಲ್ಲ. ಅವರು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿಲ್ಲವಾದರೂ, ಇಬ್ಬರೂ  ಉತ್ತಮ ಸ್ನೇಹಿತರಾಗಿದ್ದೇವೆ ಎಂದಿದ್ದರು ಐಶ್ವರ್ಯ.  ಐಶ್ವರ್ಯಾ ಅವರು ತಮ್ಮ ನಿರ್ದೇಶದನದ ಲಾಲ್ ಸಲಾಂಗಾಗಿ ಸಂದರ್ಶನ ನೀಡುವ ಸಮಯದಲ್ಲಿ ಧನುಷ್​ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದು, ಇವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರಾ ಎನ್ನುವಂತೆ ಮಾಡಿತ್ತು. ದಕ್ಷಿಣ ಚಿತ್ರರಂಗದ ಪ್ರಸಿದ್ಧ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಐಶ್ವರ್ಯ ತಮ್ಮ ಪತಿ ಧನುಷ್​ ಅವರನ್ನು ಹೊಗಳಿದ್ದರು.  ಆದ್ದರಿಂದ ದಂಪತಿ ಒಂದಾಗುತ್ತಾರೆ ಎಂದೇ ನಂಬಲಾಗಿತ್ತು.   ಈ ಜೋಡಿ,  ತಮ್ಮ ನಿರ್ಧಾರವನ್ನು ಬದಲಿಸಿರಬಹುದು, ಮತ್ತೆ ಒಂದಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಕೋರ್ಟ್ ಅಧಿಕೃತವಾಗಿ ಡಿವೋರ್ಸ್ ಮಂಜೂರು ಮಾಡಿದೆ.
 
ಅದೇ ಇನ್ನೊಂದೆಡೆ, ಧನುಷ್‌ ಅವರು ಸದ್ಯ ನಟಿ ನಯನತಾರಾ ಮತ್ತು ಅವರ ಪತಿ, ಸಿನಿಮಾ ನಿರ್ದೇಶಕ ವಿಘ್ನೇಶ್‌ ಶಿವನ್‌ ವಿರುದ್ಧ ಕೇಸು ದಾಖಲು ಮಾಡಿದ್ದಾರೆ.  ಕೃತಿಚೌರ್ಯಕ್ಕೆ ಸಂಬಧಿಸಿದಂತೆ ಈ ಕೇಸ್‌ ದಾಖಲಾಗಿದೆ.  ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ  ನಯನತರಾ ಅವರ ‘ನಯನತಾರಾ: ಬಿಯಾಂಡ್‌ ದ ಫೇರಿಟೇಲ್‌’ ಡಾಕ್ಯುಮೆಂಟರಿಯಲ್ಲಿ ತಮ್ಮ ನಿರ್ಮಾಣದ ‘ನಾನುಮ್‌ ರೌಡಿ ಧಾನ್‌’ ಸಿನಿಮಾದ ಕೆಲವು ದೃಶ್ಯಗಳನ್ನು ಅನಧಿಕೃತವಾಗಿ ಬಳಸಿದ್ದಾರೆ. ಇದಕ್ಕೆ ಅಗತ್ಯವಿರುವ ಪರವಾನಗಿ ಪಡೆದಿಲ್ಲ ಎನ್ನುವುದು ಅವರ ಆರೋಪ.,

ಇವ್ರ ಮಾತನ್ನು ಸರಿಯಾಗಿ ಕೇಳಿಸ್ಕೊಳಿ... ಈಕೆ ಹಿಜಾಬ್‌ ಧರಿಸ್ತಿರೋದಕ್ಕೆ ನಾನ್‌ ಕಾರಣ ಅಲ್ಲ ಎಂದ ಸನಾ ಪತಿ
 

click me!