ರಾಜ್ಯದ 869 ಸೇರಿ ದೇಶದಲ್ಲಿ 58929 ವಕ್ಫ್‌ ಆಸ್ತಿ ಅತಿಕ್ರಮಣ: ಸಂಸದ ಬೊಮ್ಮಾಯಿಗೆ ಕೇಂದ್ರದ ಮಾಹಿತಿ

By Kannadaprabha News  |  First Published Nov 28, 2024, 12:17 PM IST

ವಕ್ಫ್‌ ಆಸ್ತಿ ನಿರ್ವಹಣಾ ವ್ಯವಸ್ಥೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 58,929 ವಕ್ಫ್‌ ಆಸ್ತಿಗಳು ಅತಿಕ್ರಮಿಸಲ್ಪಟ್ಟಿದ್ದು, ಅವುಗಳಲ್ಲಿ 869 ಆಸ್ತಿಗಳು ಕರ್ನಾಟಕದಲ್ಲೇ ಇವೆ. ಈ ಸಂಬಂಧ ಕಾಲಕಾಲಕ್ಕೆ ಸಚಿವಾಲಯ ಹಾಗೂ ಕೇಂದ್ರ ವಕ್ಫ್‌ ಕೌನ್ಸಿಲ್‌ಗೆ ದೂರುಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಸಂಬಂಧಪಟ್ಟ ರಾಜ್ಯ ವಕ್ಫ್‌ ಬೋರ್ಡ್ ಹಾಗೂ ಸರ್ಕಾರಗಳಿಗೆ ಸಲ್ಲಿಸಲಾಗಿದೆ ಎಂದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು


ನವದೆಹಲಿ(ನ.28): ಕರ್ನಾಟಕದ 869 ಸೇರಿದಂತೆ ದೇಶಾದ್ಯಂತ ವಕ್ಫ್‌ಗೆ ಸೇರಿದ 58,929 ಆಸ್ತಿಗಳು ಅತಿಕ್ರಮಿಸಲ್ಪಟ್ಟಿವೆ ಬುಧವಾರ ಮಾಹಿತಿ ನೀಡಿದೆ ಎಂದು ಕೇಂದ್ರ ಸರ್ಕಾರ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ಬಿಜೆಪಿ ಸಂಸದ ಸಂಸದ ಬಸವರಾಜ ಬೊಮ್ಮಾಯಿಯವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 

ವಕ್ಫ್‌ ಆಸ್ತಿ ನಿರ್ವಹಣಾ ವ್ಯವಸ್ಥೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 58,929 ವಕ್ಫ್‌ ಆಸ್ತಿಗಳು ಅತಿಕ್ರಮಿಸಲ್ಪಟ್ಟಿದ್ದು, ಅವುಗಳಲ್ಲಿ 869 ಆಸ್ತಿಗಳು ಕರ್ನಾಟಕದಲ್ಲೇ ಇವೆ. ಈ ಸಂಬಂಧ ಕಾಲಕಾಲಕ್ಕೆ ಸಚಿವಾಲಯ ಹಾಗೂ ಕೇಂದ್ರ ವಕ್ಫ್‌ ಕೌನ್ಸಿಲ್‌ಗೆ ದೂರುಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಸಂಬಂಧಪಟ್ಟ ರಾಜ್ಯ ವಕ್ಫ್‌ ಬೋರ್ಡ್ ಹಾಗೂ ಸರ್ಕಾರಗಳಿಗೆ ಸಲ್ಲಿಸಲಾಗಿದೆ' ಎಂದರು. 

Latest Videos

undefined

ಚಳಿಗಾಲದ ಅಧಿವೇಶನದಲ್ಲಿ ವಕ್ಫ್‌ ಮಸೂದೆ ಮಂಡನೆ ಅನುಮಾನ?

ವಕ್ಫ್‌ ಕಾಯ್ದೆಯ 54 ಹಾಗೂ 55ನೇ ಸೆಕ್ಷನ್ ಪ್ರಕಾರ ಇಂತಹ ಅನಧಿಕೃತ ಅತಿಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯ ವಕ್ಫ್‌ ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗಿದೆ ಎಂದು ಅವರು ತಿಳಿಸಿದರು.

ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್? ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಕಲಬುರಗಿ: ಇಲ್ಲಿ ಯಾರೂ ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್ ಎಂದು ಪರೋಕ್ಷವಾಗಿ ಬಿಎಸ್ ವೈ-ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದರು.

ಕಲಬುರಗಿಯಲ್ಲಿ ನಡೆದ ವಕ್ಫ ವಿರುದ್ಧದ ಹೋರಾಟದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ವಕ್ಪ್‌ ವಿರುದ್ಧದ ಹೋರಾಟ ಅಧಿಕಾರ, ಅಂತಸ್ತು, ಹುದ್ದೆ ಮೇಲೆ ಕಣ್ಣಿಟ್ಟು ಆರಂಭಿಸಿದ್ದಲ್ಲ. ಇಲ್ಲಿ ಹೋರಾಟದಲ್ಲಿ ಭಾಗಿಯಾಗಿರೋರು ಯಾರೂ ಸ್ವಾರ್ಥಕ್ಕಾಗಿ ಬಂದಿಲ್ಲ.ವಕ್ಪ್‌ ವಿರುದ್ಧ ಜನಜಾಗೃತಿ ಹೋರಾಟ, ಪ್ರಧಾನಿ ಬೆಂಬಲಿಸಿ ಹೋರಾಟ ಮಾಡುತ್ತಿದ್ದೇವೆ.ನಾವು ಮುಖ್ಯಮಂತ್ರಿ ಆಗುವುದಕ್ಕೋಸ್ಕರ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಜನ ಜಾಗೃತಿ ಗಾಗಿ ಹೋರಾಟ ಮಾಡುತ್ತಿದ್ದೇವೆ ಹೊರತು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ. ಯಾವುದೇ ಕುಟುಂಬವನ್ನು ಮುಗಿಸಲು ನಾವು ಹೋರಾಟ ಮಾಡುತ್ತಿಲ್ಲ. 

ಮುಸ್ಲಿಮರಿಗೆ ಮತದ ಹಕ್ಕು ಬೇಡ: ಚಂದ್ರಶೇಖರ ಶ್ರೀ ವಿವಾದಾತ್ಮಕ ಹೇಳಿಕೆ

ನಮ್ಮ ಟೀಂ ಇರೋರೇ ಮುಂದಿನ ಸಿಎಂ:

ಯಡಿಯೂರಪ್ಪ ಏನಾದ್ರೂ ಹೇಳಲಿ, ವಿಜಯೇಂದ್ರ ಏನಾದ್ರೂ ಹೇಳಲಿ,ಮಾಧ್ಯಮದವರು ಏನಾದ್ರೂ ಬರೆದುಕೊಳ್ಳಲಿ. ಅದಕ್ಕೆ ನಾನು ಉತ್ತರ ಕೊಡುವುದಿಲ್ಲ. ನನ್ನ ಬಗ್ಗೆ ಕಠಿಣ ಕ್ರಮ ಕೈಗೊಳ್ತೇವೆ ಅಂತಾರೆ ಯಾಕೆ ಕೈಗೊಳ್ತಿರಾ? ನಾವು ವಾಲ್ಮೀಕಿ ಹಗರಣದ ಕುರಿತು ಪಾದಯಾತ್ರೆ ಮಾಡೋಣ ಅಂದೇವು. ಅನೌನ ಅವರು ಬರೀ 14 ಪ್ಲಾಟ್ ಕಡೆ ಹೋದ್ರು. ನಮ್ಮ ಹೋರಾಟ ಈಗ ವಕ್ಪ್ ವಿರುದ್ದವೇ ಹೊರತು ಯಾರ ವಿರುದ್ದವೂ ಅಲ್ಲ. ನಾವು ಕಲಬುರಗಿ ಬಳಿಕ ಬೆಳಗಾವಿಯಲ್ಲಿ ಬೃಹತ್ ಹೋರಾಟ ಮುಗಿಸಿ ದೆಹಲಿಗೆ ಹೋಗ್ತೆವೆ. ಡಿ. 3-4 ರಂದು ದೆಹಲಿಗೆ ಹೋಗಿ ವಕ್ಪ್ ವಿರುದ್ದ ವರದಿ ನೀಡ್ತೇವೆ ಎಂದರು. ಇದೇ ವೇಳೆ ಮುಂದೆ ನಮ್ಮ ಈ ತಂಡದಲ್ಲಿದ್ದವರೇ ಸಿಎಂ ಆಗೋದು ಗ್ಯಾರೆಂಟಿ ಎನ್ನುವ ಮೂಲಕ ಮುಂದಿನ ಬಿಜೆಪಿ ಸಿಎಂ ಕುರಿತು ಹೊಸ ಚರ್ಚೆ ಹುಟ್ಟುಹಾಕಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಯತ್ನಾಳ್ ಕಿಡಿ:

ಪ್ರಿಯಾಂಕ್ ಖರ್ಗೆ ಹೇಳ್ತಾರೆ, ತಮ್ಮ ಕುಟುಂಬ ಸುಟ್ಟವರು ಮುಸ್ಲಿಂರಲ್ಲ ರಜಾಕರು ಎಂದು. ಹಾಗಾದ್ರೆ ರಜಾಕರೇನು ಲಿಂಗಾಯತರಾ? ನಾನು ಬರೀ ರಾಹುಲ್ ಗಾಂಧಿ ಮಾತ್ರ ಭಾರಿ ಶಾಣ್ಯಾ ಅಂತ ತಿಳಿದಿದ್ದೆ. ಆದ್ರೆ ಕಲಬುರಗಿಯಲ್ಲೂ ಒಂದು ಅಂತದ್ದೇ ಚೀಜ್ ಇದೆ. ಭಾಯಿ ಭಾಯಿ ಅನ್ನಬೇಕಿರೋದು ಹಿಂದುಗಳಲ್ಲಿರುವ ಒಳ ಜಾತಿಯವರನ್ನೇ ಹೊರತು ಬೇರೆಯವರನ್ನಲ್ಲ. ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನುವರಿಗೆ ಚಪ್ಪಲಿಲೇ ಹೊಡೆಯಿರಿ ಎಂದ ಯತ್ನಾಳ್. 

click me!