ದ್ವಿಪೌರತ್ವ ಕಾನೂನು ಕುಣಿಕೆಯಲ್ಲಿ ರಾಹುಲ್‌! ಸಂವಿಧಾನದಲ್ಲಿ ಏನಿದೆ? ಸಾಬೀತಾದ್ರೆ ಏನಾಗತ್ತೆ? ಇಲ್ಲಿದೆ ಡಿಟೇಲ್ಸ್‌

By Suchethana D  |  First Published Nov 28, 2024, 12:14 PM IST

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದ್ವಿಪೌರತ್ವದ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಸಾಬೀತಾದರೆ ಏನಾಗುತ್ತದೆ? ಸಂವಿಧಾನ ಹೇಳುವುದೇನು? ಇಲ್ಲಿದೆ ಡಿಟೇಲ್ಸ್‌...
 


 ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತ ಮತ್ತು ಬ್ರಿಟಿಷ್‌ ಪೌರತ್ವ ಎರಡನ್ನೂ ಪಡೆದಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಇದಾಗಲೇ ಇವರ ವಿರುದ್ಧ ಕೆಲ ತಿಂಗಳ ಹಿಂದೆ ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್‌ ಸ್ವಾಮಿ ಅವರು ದೆಹಲಿ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದರು. ಅದಿನ್ನೂ ವಿಚಾರಣೆಗೆ ಬಾಕಿ ಇರುವ ನಡುವೆಯೇ ಇದೀಗ ಮತ್ತೊಮ್ಮೆ ಅವರ ವಿರುದ್ಧ ಅಲಹಾಬಾದ್‌ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಲಾಗಿದೆ. ಇವರ ವಿರುದ್ಧ ಕರ್ನಾಟಕದ ಶಿಶಿರ್‍‌ ಎನ್ನುವವರು ಕೇಸ್‌ ದಾಖಲು ಮಾಡಿದ್ದಾರೆ. ರಾಹುಲ್‌ ಗಾಂಧಿಯವರು ಉತ್ತರ ಪ್ರದೇಶದಲ್ಲಿನ ಸಂಸದರಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯ ನ್ಯಾಯಾಲಯದಲ್ಲಿ ಈ ಕೇಸು ದಾಖಲಾಗಿದೆ. ರಾಹುಲ್‌ ಅವರು ದ್ವಿಪೌರತ್ವ ಹೊಂದಿರುವ ಹಿನ್ನೆಲೆಯಲ್ಲಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು, ದ್ವಿಪೌರತ್ವ ರದ್ದಾಗಬೇಕು, ಸಂಸದನ ಸ್ಥಾನವನ್ನೂ ರದ್ದು ಮಾಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ! ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಡಿಸೆಂಬರ್‍‌ 19ರ ಒಳಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನ್ಯಾಯಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ಆದೇಶಿಸಿದೆ. 

ಹಾಗಿದ್ದರೆ ಸಂವಿಧಾನದಲ್ಲಿ ದ್ವಿಪೌರತ್ವ ಕುರಿತು ಏನಿದೆ? ಭಾರತದಲ್ಲಿ ಇದು ಕಾನೂನು ಬಾಹಿರನಾ? ಒಂದು ವೇಳೆ ರಾಹುಲ್‌ ಗಾಂಧಿಯವರು ದ್ವಿಪೌರತ್ವ ಹೊಂದಿರುವುದು ಸಾಬೀತಾದರೆ ಏನಾಗುತ್ತೆ ಇತ್ಯಾದಿಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.  ಸಂವಿಧಾನ ಆರ್ಟಿಕಲ್‌ ಮೂರು ಪೌರತ್ವದ ಬಗ್ಗೆ ವಿವರಣೆ ನೀಡುತ್ತದೆ. ಇದರಲ್ಲಿ ಭಾರತದ ಪೌರತ್ವ ಹೊಂದಿರುವ ಯಾರೇ ಆದರೂ ಮತ್ತೊಂದು ದೇಶದ ಪೌರತ್ವ ಹೊಂದುವಂತೆ ಇಲ್ಲ. ಇಸ್ರೇಲ್‌ ಮತ್ತು ಪಾಕಿಸ್ತಾನಗಳಲ್ಲಿ ಎರಡು ದೇಶಗಳ ಪೌರತ್ವಕ್ಕೆ ಅವಕಾಶ ಇದೆ. ಆದರೆ ಭಾರತದ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ. ಒಂದು ವೇಳೆ ಯಾವುದೇ ಭಾರತದ ಪ್ರಜೆ ಎರಡು ದೇಶಗಳ ಪೌರತ್ವ ಹೊಂದಿದರೆ, ಭಾರತದ ಪೌರತ್ವ ರದ್ದಾಗುತ್ತದೆ. ಒಂದು ವೇಳೆ ಭಾರತದ ಪೌರತ್ವ ಬೇಕು ಎಂದಾದರೆ, ಮತ್ತೊಂದು ದೇಶದ ಪೌರತ್ವ ಬಿಟ್ಟುಕೊಡಬೇಕಾಗುತ್ತದೆ.

Tap to resize

Latest Videos

ಪಾಕ್‌ ಧಗ ಧಗ: ಸೇನೆ ವಿರುದ್ಧವೇ ನಾಗರಿಕ ದಂಗೆ! ಸಾವು-ನೋವು; ಸಾವಿರಾರು ಕೋಟಿ ಸುರಿದ್ರೂ ನಿಲ್ಲದ ಕಿಚ್ಚು..

ಒಂದು ವೇಳೆ ಬೇರೆ ದೇಶದ ಪೌರತ್ವ ಹೊಂದಿದ್ದು, ಭಾರತದಲ್ಲಿ ನೆಲೆಸುವ ಆಸೆ ಇದ್ದರೆ ಅದಕ್ಕೂ ಭಾರತದ ಕಾನೂನಿನಲ್ಲಿ ಅವಕಾಶ ಇದೆ. ಅದಕ್ಕಾಗಿ ಅಂಥವರು ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ (Overseas Of Indian Citizenship card) ಪಡೆದುಕೊಳ್ಳಬಹುದು. ಅಂಥವರು ಭಾರತದ ಪ್ರಜೆಗಳಿಗೆ ಇರುವ ಎಲ್ಲಾ ಸೌಲಭ್ಯಗಳನ್ನೂ ಪಡೆದುಕೊಳ್ಳಬಹುದಾಗಿದೆ. ಇದರ ಅರ್ಥ ಅವರು ವೀಸಾ ಇಲ್ಲದೇ ಇಲ್ಲಿಯೇ ಉಳಿಯಬಹುದು, ಉದ್ಯೋಗ ಮಾಡಬಹುದು, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದುಕೊಳ್ಳಬಹುದು, ವ್ಯಾಪಾರ ಮಾಡಬಹುದು, ಸಾಲ ಪಡೆಯಬಹುದು. ಆದರೆ, ಎರಡು ಷರತ್ತುಗಳು ಇಲ್ಲಿ ಗಮನಿಸಬೇಕು. ಅದೇನೆಂದರೆ, ಇಂಥ ಕಾರ್ಡ್ ಪಡೆದಿರುವ ವ್ಯಕ್ತಿ ಭಾರತದಲ್ಲಿ ಕೃಷಿ ಜಮೀನನ್ನು ಖರೀದಿ ಮಾಡುವಂತಿಲ್ಲ, ಅದಕ್ಕಿಂತಲೂ ಮುಖ್ಯ ಎಂದರೆ ಅಂಥವರಿಗೆ ಭಾರತದಲ್ಲಿ ಮತದಾನದ ಅವಕಾಶವಿಲ್ಲ, ಅರ್ಥಾತ್‌ ಅಂಥವರು ಚುನಾವಣೆಯಲ್ಲಿಯೂ ಸ್ಪರ್ಧಿಸುವಂತಿಲ್ಲ!  ಹೀಗೆ ಮಾಡಿದರೆ ಅದು ಅಪರಾಧ ಎನ್ನಿಸಿಕೊಳ್ಳುವುದು.

ಒಂದು ವೇಳೆ  ನ್ಯಾಯಾಲಯದಲ್ಲಿ ಇವೆಲ್ಲಾ ಸಾಬೀತು ಆದರೆ, ರಾಹುಲ್‌ ಗಾಂಧಿಯವರ ಸಂಸದೀಯ ಸ್ಥಾನ ಹೋಗಬಹುದು ಹಾಗೂ ಸುಳ್ಳು ಮಾಹಿತಿ ನೀಡಿರುವ ಕಾರಣ ಅವರ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನುತ್ತಾರೆ  ಕಾನೂನು ತಜ್ಞರು. ಇವರ ಮೇಲಿರುವ ಆರೋಪ ಸಾಬೀತಾದರೆ, ಅವರು ಬ್ರಿಟನ್‌ ಪೌರತ್ವ ಬಿಟ್ಟುಕೊಟ್ಟು ಭಾರತದ ಪೌರತ್ವಕ್ಕೆ ಪುನಃ ಅರ್ಜಿ ಸಲ್ಲಿಸುವ ಅವಕಾಶ ಭಾರತದ ಕಾನೂನಿನಲ್ಲಿ ಇದೆ. ಆದರೆ ಇದು ಸಾಬೀತು ಆಗಿದ್ದೇ ಹೌದಾದರೆ, ದ್ವಿಪೌರತ್ವ ಇರುವಾಗಲೇ ರಾಹುಲ್‌ ಅವರು ಸಂಸದರಾಗಿರುವ ಹಿನ್ನೆಲೆಯಲ್ಲಿ ಕೇಸ್‌ ದಾಖಲಾಗಬಹುದು ಎನ್ನುವುದು ಕಾನೂನು ತಜ್ಞರ ಅಭಿಮತ. ಆದರೆ ಎಲ್ಲವೂ ಸಾಬೀತಾಗಬೇಕಷ್ಟೇ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ವಿಎಸ್ಎಸ್ ಶರ್ಮಾ ಎನ್ನುವವರು ರಾಹುಲ್‌ ಗಾಂಧಿ ವಿರುದ್ಧ ಬ್ರಿಟನ್‌ ನ್ಯಾಯಾಲಯದಲ್ಲಿಯೂ ಅರ್ಜಿಯೊಂದನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಮುಂದೇನಾಗುತ್ತೋ ನೋಡಬೇಕಿದೆ.   

ಇವ್ರ ಮಾತನ್ನು ಸರಿಯಾಗಿ ಕೇಳಿಸ್ಕೊಳಿ... ಈಕೆ ಹಿಜಾಬ್‌ ಧರಿಸ್ತಿರೋದಕ್ಕೆ ನಾನ್‌ ಕಾರಣ ಅಲ್ಲ ಎಂದ ಸನಾ ಪತಿ
 

click me!