Jun 8, 2022, 4:12 PM IST
ರಾಯಚೂರು (ಜೂ. 08): ರಾಯಚೂರಿನ (Raicur) ಕಲುಷಿತ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ, ನೀರಿಗೆ ನಾಲ್ಕನೇ ಬಲಿಯಾಗಿದೆ. 3 ದಿನದ ಹಿಂದೆ ಆಸ್ಪತ್ರೆ ಸೇರಿದ್ದ ಅಬ್ದುಲ್ ಕರೀಂ ಸಾವನ್ನಪ್ಪಿದ್ದಾರೆ. ಕಲುಷಿತ ನೀರು ಸೇವಿಸಿ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅಂದೂನ್ ಖಿಲಾ ನಿವಾಸಿ ಕರೀಂ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಿಡ್ನಿ ಫೆಲ್ಯೂರ್ ಆಗಿರುವುದಾಗಿ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ.