ಬಾಲಿವುಡ್ ಹಾಟ್ ಬ್ಯೂಟಿ ಊರ್ವಶಿ ರೌಟೇಲಾ ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಹೇಳಿದ್ದಾರೆ. ಇದನ್ನೆಲ್ಲಾ ನಂಬ್ತೀರಾ ಕೇಳಿದ್ದಾರೆ ಫ್ಯಾನ್ಸ್...
ಬಾಲಿವುಡ್ ನಟಿ ಊರ್ವಶಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್ ಚಿನ್ನದ ಕೇಕ್ ಮಾಡಿಸಿಕೊಂಡು ಬಂದು ಸುದ್ದಿಯಾಗಿದ್ದರು. ಕೊನೆಗೆ, ಅವರು ಜಾಲತಾಣದಲ್ಲಿ ಹಲ್‌ಚಲ್ ಸೃಷ್ಟಿಸಿದ್ದು, ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಒಂದು ವೈರಲ್ ಆಗಿದ್ದ ಕಾರಣದಿಂದ, ಈ ವಿಡಿಯೋದಲ್ಲಿ ನಟಿ ಕೂದಲನ್ನು ಸರಿ ಮಾಡಿಕೊಂಡು ಬಾತ್‌ರೂಮ್‌ಗೆ ಹೋಗುವುದನ್ನು ನೋಡಬಹುದು. ಅಲ್ಲಿ ಬಟ್ಟೆ ತೆಗೆಯಲು ಕೈಹಾಕಿದ್ದರು. ಅಷ್ಟರಲ್ಲಿ ವಿಡಿಯೋ ಕಟ್ ಆಗಿತ್ತು. ನಂತರ ನಟಿ, ಇದು ವಿಷಾದನೀಯ ಘಟನೆ ಎಂದಿದ್ದರು. ಆ ವಿಡಿಯೋ ನೋಡಿ ನನಗೂ ಆ ಕ್ಷಣದಲ್ಲಿ ಶಾಕ್ ಆಯಿತು. ಇದು ಹೇಗೆ ಲೀಕ್ ಆಯಿತು ಎನ್ನುವುದು ಗೊತ್ತಿಲ್ಲ. ಆದರೆ ಅದು ನನ್ನ ಸಿನಿಮಾದ ಶೂಟಿಂಗ್ ಕ್ಲಿಪ್ಪಿಂಗೇ ವಿನಾ ಅಸಲಿಯದ್ದು ಅಲ್ಲ ಎಂದಿದ್ದರು.
30 ವರ್ಷದ ನಟಿ, ಇನ್ನೂ ಮದುವೆಯಾಗದೇ ಇರುವುದಕ್ಕೆ ಇದೀಗ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ನಟಿ, ನನ್ನ ಜಾತಕದಲ್ಲಿ ಕಟನಿ ಯೋಗ ಇದೆ. ಇನ್ನೂ ಎರಡು, ಎಡರೂವರೆ ವರ್ಷ ಮದುವೆ ಆಗುವ ಹಾಗಿಲ್ಲ ಎಂದಿದ್ದಾರೆ. ಕಟನಿ ಯೋಗವಿದ್ದರೆ ಮದುವೆ ಮುರಿದುಬೀಳುವ ಸಾಧ್ಯತೆ ಇರುವ ಕಾರಣ ನಟಿ ತಾವು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ನೀವೂ ನಂಬುತ್ತೀರಾ ಎಂದು ಪ್ರಶ್ನಿಸಿದರೆ, ಮತ್ತೆ ಕೆಲವು ತರ್ಲೆ ನೆಟ್ಟಿಗರು, ನಿಮ್ಮಂಥವರಿಗೆ ಮದ್ವೆ ಯಾಕೆ, ಮೊದಲೇ ಎಲ್ಲವೂ ಆಗಿರತ್ತಲ್ವಾ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅದಾನಿ ನಂಬರ್ 1 ಶ್ರೀಮಂತರಾಗಿ ಇಂದಿಗೆ ಎರಡು ವರ್ಷ: 6 ತಂದ ಅದೃಷ್ಟ 8ರಲ್ಲಿ ಹೋಗಿದ್ದು ಹೇಗೆ?
ಇನ್ನು ನಟಿಯ ಬಾತ್‌ರೂಮ್ ವಿಡಿಯೋ ಲೀಕ್ ಕುರಿತು ಹೇಳುವುದಾದರೆ, ನಟಿ ಈ ವಿಡಿಯೋ ಇಟ್ಟುಕೊಂಡು ನನ್ನನ್ನು ಬ್ಲ್ಯಾಕ್ ಮಾಡಲಾಗುತ್ತಿದೆ ಎಂದಿದ್ದರು. ಅಂಥ ಒಂದು ಘಟನೆ ಯಾವ ಹೆಣ್ಣಿಗೂ ಬರುವುದು ಬೇಡ ಎಂದಿದ್ದರು. ಆದರೆ ಅದನ್ನು ಬಹುತೇಕರು ನಂಬಿರಲಿಲ್ಲ. ಏಕೆಂದರೆ, ಇದು ಸಿನಿಮಾದ ಕ್ಲಿಪ್ಪಿಂಗ್ ಅಷ್ಟೇ. ಇತ್ತೀಚಿನ ದಿನಗಳಲ್ಲಿ ಸಿನಿಮಾದ ಪ್ರಮೋಷನ್ಗಾಗಿ ಇನ್ನಿಲ್ಲದ ಗಿಮಿಕ್ ಬಳಸಲಾಗುತ್ತದೆ. ಸಿನಿಮಾ ಹಿಟ್ ಆಗದಿದ್ದರೂ ಈ ರೀತಿಯ ಗಿಮಿಕ್ಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ ಎಂದು ಅವರಿಗೂ ಗೊತ್ತಿದೆ. ಅದೇ ರೀತಿ ಊರ್ವಶಿ ಅವರಿಗೂ ಆಗಿದೆ ಎಂದೇ ಹೇಳಲಾಗುತ್ತಿದೆ.
ಹಿಂದೆ ಕೂಡ ಈ ರೀತಿಯ ಗಿಮಿಕ್ಗಳು ನಡೆದಿವೆ. ಶೂಟಿಂಗ್ ಸ್ಪಾಟ್ನ ಕೆಲವು ದೃಶ್ಯಗಳನ್ನುಉದ್ದೇಶಪೂರ್ವಕವಾಗಿ ಲೀಕ್ ಮಾಡುವುದು, ಈ ರೀತಿ ಸೆಕ್ಸ್ ಸೀನ್ಗಳು, ಸ್ನಾನ ಮಾಡುವ ಸೀನ್ಗಳನ್ನು ಲೀಕ್ ಮಾಡುವುದು... ಕೊನೆಗೆ ಅದು ಹೇಗೋ ಲೀಕ್ ಆಯಿತು ಎನ್ನುವುದು... ಇಂಥ ಗಿಮಿಕ್ಗಳೆಲ್ಲಾ ಸರ್ವೇ ಸಾಮಾನ್ಯವಾಗಿದ್ದು, ಒಂದು ಚಿತ್ರ ಹಿಟ್ ಆಗಲು ಇದೆಲ್ಲಾ ಅನಿವಾರ್ಯ ಎನ್ನುವುದು ಸಿನಿಮಾ ಮಂದಿಯ ವಾದವೂ ಇದೆ. ಅದೇನೇ ಇದ್ದರೂ ಊರ್ವಶಿ ರೌಟೇಲಾ ಅವರ ಸ್ನಾನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿದ್ದಂತೂ ಸುಳ್ಳಲ್ಲ. ಆದರೆ ನಟಿಯ ರಿಯಾಕ್ಷನ್ ವೈರಲ್ ಆಗುತ್ತಿದ್ದಂತೆಯೇ ನಟಿಯ ಸೌಂದರ್ಯದ ಗುಣಗಾನ ಕಮೆಂಟ್ಗಳಲ್ಲಿ ತುಂಬಿ ಹೋಗಿದೆ. ಈಕೆಯ ಸ್ನಾನದ ವಿಡಿಯೋ ಏನೇ ಇರಬಹುದು. ಆದರೆ ನಟಿ ಸೌಂದರ್ಯದ ಘನಿ ಎಂದು ಹಲವರು ಹೇಳುತ್ತಿದ್ದಾರೆ.
ಸುಧಾರಾಣಿಯ ಕ್ರಷ್ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!