Karwar | ದಿವ್ಯಾಂಗರ ಮೇಲೆ ತೈಲ ದರ ಏರಿಕೆ ಎಫೆಕ್ಟ್ : ಎಲೆಕ್ಟ್ರಿಕ್ ವಾಹನಕ್ಕೆ ಬೇಡಿಕೆ

Nov 22, 2021, 10:55 AM IST

ಕಾರವಾರ (ನ.22): ದಿವ್ಯಾಂಗ ಮಕ್ಕಳನ್ನು ತಂದೆ ತಾಯಿಯೇ (parents) ದುಡಿದು ಸಾಕುವಂತ ಪರಿಸ್ಥಿತಿ ಇರುತ್ತದೆ.  ಇವರಿಗೆ ಅನುಕೂಲ ಆಗಲೆಂದು ಸರ್ಕಾರ (Govt) ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಜಾರಿಗೆ ತಂದ ಯೋಜನೆಯಲ್ಲಿ ಪ್ರಮುಖವಾಗಿ  ತ್ರಿಚಕ್ರ ವಾಹನ ( Tricycle ) ಸೌಲಭ್ಯವೂ ಕೂಡ ಒಂದಾಗಿದೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ವಾಹನ ನೀಡುತ್ತದೆ. ಇದೀಗ ತ್ರಿಚಕ್ರ ವಾಹನ ಪಡೆದ ದಿವ್ಯಾಂಗರಿಗೆ ಆರ್ಥಿಕ ಸಂಕಷ್ಟವು ಎದುರಾಗಿದೆ. 

ಸುಂದರ ಪರಿಸರ ಸ್ನೇಹಿ ರಾಖಿ: ದಿವ್ಯಾಂಗ ಮಕ್ಕಳ ಹೊಸ ಪ್ರಯತ್ನ

ಯಾವುದೇ ಸಮಸ್ಯೆಯಾದರು ತ್ರಿಚಕ್ರ ವಾಹನದಲ್ಲಿ ಸಾಗಬೇಕಾದ ಕಾರಣ ಪೆಟ್ರೋಲ್ ಬೆಲೆ ಏರಿಕೆ ಇವರನ್ನು ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ. ಬರುವ ಅಲ್ಪಸ್ವಲ್ಪ ಮಾಸಾಶನ ಇವರ ಚಿಕಿತ್ಸೆ ಜೀವನಕ್ಕೆ ಖರ್ಚಾಗುತ್ತಿದ್ದು ಇದೀಗ ತ್ರಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸುವಷ್ಟು ಹಣ ಇವರಲ್ಲಿ ಉಳಿಯುತ್ತಿಲ್ಲ. ಇದರಿಂದ ಕಂಗಾಲಾಗುವಂತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ದಿವ್ಯಾಂಗರು ಹಾಗು ಅವರ ಕುಟುಂಬಕ್ಕೂ ತಟ್ಟಿದೆ.  ಇದರಿಂದ ಇನ್ನು ಮುಂದೆ ದಿವ್ಯಾಂಗರಿಗೆ ಎಲೆಕ್ಟ್ರಿಕ್ ವಾಹನ ನೀಡಬೇಕು ಎಂದು ಕೇಳಲಾಗಿದೆ.