ಚಿನ್ನಮರಿ ರೀಯಲ್ ಮದ್ವೆ ದಿನಾನೇ ಸೈಕೋ ಜಯಂತ್ ಹ್ಯಾಪಿ ಬರ್ತ್‌ಡೇ, ಏನ್ ವಿಚಿತ್ರ ಅಲ್ವಾ!

By Bhavani Bhat  |  First Published Nov 28, 2024, 12:32 PM IST

 ಒಂದು ಕಡೆ ಚಿನ್ನುಮರಿ ರೀಯಲ್ ಆಗಿ ಮದ್ವೆ ನಡೀತಿದೆ, ಇನ್ನೊಂದು ಕಡೆ ಸೈಕೋ ಜಯಂತನ ಹ್ಯಾಪಿ ಬರ್ತ್‌ಡೇ ಬಂದಿದೆ. ಹಿಂಗಾದ್ರೆ ಹೆಂಗೆ ಶಿವಾ ಅಂತಿದ್ದಾರೆ ತಲೆಕೆಟ್ಟ ನೆಟ್ಟಿಗರು..


ಲಕ್ಷ್ಮೀ ನಿವಾಸ ಸೀರಿಯಲ್‌ನ ಮುದ್ದು ಜೋಡಿ ಅಂತಲೇ ಫೇಮಸ್ ಚಿನ್ನುಮರಿ ಅಲಿಯಾಸ್ ಜಾಹ್ನವಿ ಅಲಿಯಾಸ್ ಚಂದನಾ ಅನಂತಕೃಷ್ಣ ಹಾಗೂ ಜಯಂತ ಅಲಿಯಾಸ್ ಸೈಕೋ ಜಯಂತ ಅಲಿಯಾಸ್ ದೀಪಕ್‌ ಸುಬ್ರಹ್ಮಣ್ಯ. ಇವರಿಬ್ಬರ ನಟನೆ ಏನ್ ಚೆನ್ನಾಗಿ ವರ್ಕೌಟ್ ಆಗ್ತಿದೆ ಅಂದರೆ ಜನ ಸೀರಿಯಲ್‌ನ ಈ ಪಾತ್ರಗಳನ್ನು ಜನ ರಿಯಲ್ಲಾಗೋ ಪಾತ್ರಗಳ ಥರನೇ ನೋಡ್ತಾರೆ. ಐ ಮೀನ್ ಪಾತ್ರಗಳನ್ನೇ ರಿಯಲ್ ಅನ್ಕೊಂಡು ಬಿಟ್ಟಿದ್ದಾರೆ ಅಂದರೂ ತಪ್ಪಿಲ್ಲ. ಏಕೆಂದರೆ ಇದರಲ್ಲಿ ಜಾಹ್ಮವಿ ಅಂದರೆ ಜಯಂತನ ಪ್ರೀತಿಯ ಚಿನ್ನುಮರಿ ಪಾತ್ರ ಮಾಡೋ ಚಂದನಾ ಅನಂತಕೃಷ್ಣ ಅವರು ಈಗ ಎಲ್ಲ ಕಡೆ ಚಿನ್ನುಮರಿ ಅಂತಲೇ ಫೇಮಸ್ಸು. ಈ ಪಾತ್ರ ಕೊಟ್ಟ ಫೇಮ್‌ನಲ್ಲಿ ಅವರ ರಿಯಲ್ ಹೆಸರೇ ಜನಕ್ಕೆ ಮರೆತು ಹೋದಂಗಾಗಿದೆ. ಇದನ್ನು ಜಯಂತನದಂತೂ ಕೇಳೋದೇ ಬೇಡ. ಈತ ಜನರ ಕಣ್ಣಲ್ಲಿ ಬರೀ ಜಯಂತ ಅಲ್ಲ, ಸೈಕೋ ಜಯಂತ. ಜನರಿಗೆ ಈತನ ಬಗ್ಗೆ ಏಕಕಾಲಕ್ಕೆ ಸಿಟ್ಟು, ಕರುಣೆ, ಪ್ರೀತಿ ಎಲ್ಲ ಇದೆ. ಜನ ಈ ಪಾತ್ರಕ್ಕೆ ಯಾವ ಮಟ್ಟಿಗೆ ಕನೆಕ್ಟ್ ಆಗಿದ್ದಾರೆ ಅಂದರೆ ಈ ಸೀರಿಯಲ್ ಕಥೆಗಾರನಿಗೂ ಬರದೇ ಇರೋ ಅನೇಕ ಥಾಟ್‌ಗಳು ಈ ಸೀರಿಯಲ್ ಫ್ಯಾನ್ಸ್‌ಗೆ ಬರುತ್ತೆ.

ಚಿನ್ನುಮರಿ ಪ್ರೆಗ್ನೆಂಟ್ ಅಂತ ಗೊತ್ತಾದಾಗ ಈ ಸೀರಿಯಲ್ ನೋಡೋ ಜನ ಮಾಡಿರೋ ಕಾಮೆಂಟ್‌ಗಳೇ ಇದಕ್ಕೆ ಸಾಕ್ಷಿ ಅಂತ ಅನ್ನಬಹುದು. ಚಿನ್ನುಮರಿ ಪ್ರೆಗ್ನೆಂಟ್ ಅಂತ ಗೊತ್ತಾದಾಗ ಜಯಂತ ಏನ್ ಮಾಡಬಹುದು ಅನ್ನೋದರ ಬಗ್ಗೆ ಜನ ದೊಡ್ಡ ಲಿಸ್ಟ್ ಅನ್ನೇ ಕೊಟ್ರು. ಈ ಸೀರಿಯಲ್ ಟೀಮ್ ತಲೇಲಿ ಮೊದಲು ಕಥೆ ಏನಿತ್ತೋ ಗೊತ್ತಿಲ್ಲ, ಆದರೆ ಈ ಸೀರಿಯಲ್ ಬಗ್ಗೆ, ಸೀರಿಯಲ್ ಕಥೆ ಬಗ್ಗೆ ಜನ ಹೀಗೆಲ್ಲ ಪ್ರೆಡಿಕ್ಟ್ ಮಾಡೋದು ನೋಡಿ ಮತ್ತೇನೋ ಕಥೆ ಮಾಡ್ತಿದ್ದಾರೆ.

Tap to resize

Latest Videos

ಭಾವೀ ಗಂಡನ ಜೊತೆಗೆ ಚಿನ್ನುಮರಿ ಡ್ಯಾನ್ಸ್, ಪ್ರಿ ವೆಡ್ಡಿಂಗ್ ಪ್ರೋಗ್ರಾಂನಲ್ಲಿ ಚಂದನಾ ಫುಲ್ ಮಿಂಚಿಂಗ್!

ಇರಲಿ, ಇಷ್ಟೆಲ್ಲ ಹೇಳಿದ್ದರ ಉದ್ದೇಶ ಇಷ್ಟೇ. ಆರ್ಟಿಸ್ಟ್ ತಮ್ಮೆಲ್ಲ ಶ್ರಮ ಹಾಕಿ ಪಾತ್ರಗಳಿಗೆ ಜೀವ ತುಂಬಿದರೆ ಜನ ಅವರನ್ನು ಹೇಗೆ ಆರಾಧಿಸುತ್ತಾರೆ ಅನ್ನೋದಕ್ಕೆ ಸಾಕ್ಷಿಯಾಗಿ ನಮ್ಮ ಮುಂದೆ ಇರೋದು ಜಯಂತ್ ಪಾತ್ರ ಮಾಡಿರೋ ದೀಪಕ್ ಸುಬ್ರಹ್ಮಣ್ಯ ಹಾಗೂ ಜಾನು ಪಾತ್ರ ಮಾಡಿರೋ ಚಿನ್ನುಮರಿ ಖ್ಯಾತಿಯ ಚಂದನಾ ಅನಂತಕೃಷ್ಣ. ಈ ದಿನ ಈ ಇಬ್ಬರು ಕಲಾವಿದರಿಗೂ ವೆರಿ ವೆರಿ ಸ್ಪೆಷಲ್. ಯಾಕೆಂದರೆ ಇವತ್ತು ಒಂದು ಕಡೆ ಚಂದನಾ ಅವರ ಮದುವೆ. ಇನ್ನೊಂದು ಕಡೆ ದೀಪಕ್ ಸುಬ್ರಹ್ಮಣ್ಯ ಅವರ ಹ್ಯಾಪಿ ಬರ್ತ್‌ಡೇ. ಚಂದನಾ ಮದುವೆ ಬಲು ಅದ್ದೂರಿಯಿಂದ ನಡೆಯುತ್ತಿದೆ. ಅವರ ಸ್ನೇಹಿತರು, ಬಂಧುಗಳು, ಕಿರುತೆರೆ ಹಿರಿತೆರೆಯ ಸೆಲೆಬ್ರಿಟಿಗಳೆಲ್ಲ ಮದುವೆಯಲ್ಲಿ ಭಾಗಿಯಾಗಿದ್ದಾರಂತೆ. ಚಂದನಾ ಮದುವೆ ಆಗ್ತಿರೋ ಹುಡುಗ ಪ್ರತ್ಯಕ್ಷ ಅವರದೂ ಸಿನಿಮಾ ಹಿನ್ನೆಲೆಯ ಕುಟುಂಬವೇ ಆಗಿರೋ ಕಾರಣ ಸ್ನೇಹಿತರ ಬಳಗ ಬಲು ದೊಡ್ಡದಿರುತ್ತೆ.

ಇನ್ನೊಂದು ಕಡೆ ನಟ ಭೈರವ ಜಯಂತ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ ಹ್ಯಾಪಿ ಬರ್ತ್‌ಡೇ ಇವತ್ತು. ಬೆಳಗ್ಗೆಯಿಂದ ತನಗೆ ವಿಶ್ ಮಾಡಿರೋರಿಗೆ ಪ್ರತಿಕ್ರಿಯೆ ನೀಡಿ ನೀಡಿ ದೀಪಕ್ ಅವರಿಗೆ ಸುಸ್ತಾಗಿದೆ. ಜೊತೆಗೆ ಜಯಂತನ ಪಾತ್ರಕ್ಕೆ ತಾನು ಅಷ್ಟು ಜೀವ ತುಂಬಿದ್ದಕ್ಕೂ ಸಾರ್ಥಕ ಅನ್ನೋ ಭಾವನೆ ಇದೆ. ದೀಪಕ್ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಒಂದಿಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಲಕ್ಷ್ಮೀ ನಿವಾಸದಲ್ಲಿ ಭಾವನಾನೇ ಜವರೇಗೌಡ್ರ ಮನೆಗೆ ಅದೃಷ್ಟ ಲಕ್ಷ್ಮಿ ಅಂತೆ, ಗೇಮ್ ಫುಲ್ ಚೇಂಜ್, ಹೊಡಿ ಒಂಭತ್ ಅಂತಿದ್ದಾರೆ ಫ್ಯಾನ್

ಮಿ.ರಾಣಿ ಅನ್ನೋದು ಅವರ ಮುಂದಿನ ಸಿನಿಮಾ. ಇದರಲ್ಲಿ ಅವರು ಸ್ತ್ರೀ ವೇಷದಲ್ಲಿ ಹೀರೋಯಿನ್ ಆಗೋ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಅವರಿಗೆ ಭರಪೂರ ಹೆಸರು ತಂದುಕೊಟ್ಟಿದ್ದು 'ಲಕ್ಷ್ಮೀ ನಿವಾಸ'ದ ಜಯಂತನ ಪಾತ್ರ. ಸದ್ಯ ಮರೆಯಲಾರದ ದಿನದ ಖುಷಿಯಲ್ಲಿರುವ ಈ ಇಬ್ಬರು ಕಲಾವಿದರಿಗೂ ನಮ್ಮ ಕಡೆಯಿಂದ ಶುಭ ಹಾರೈಕೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!