ಈಗಾಗಲೇ ವೈಟ್ ಫೀಲ್ಡ್ ಹಾಗೂ ಛಲ್ಲಘಟ್ಟ ನಡುವೆ ನಮ್ಮ ಮೆಟ್ರೋದ ನೇರಳೆ ಮಾರ್ಗ ಹಾದು ಹೋಗಿರುವ ಕಾರಣ ಇದೀಗ ಇದೇ ಮಾರ್ಗ ದಲ್ಲಿ ಪುನಃ ಉಪನಗರ ರೈಲು ಯೋಜನೆ ರೂಪಿಸಿಕೊಳ್ಳಬೇಕೆ ಬೇಡವೆ ಎಂಬುದರ ಚರ್ಚೆ ನಡೆದಿದೆ.
ಬೆಂಗಳೂರು(ನ.28): ಬೆಂಗಳೂರು ಉಪನಗರ ರೈಲು ಯೋಜನೆಯಿಂದಾಗಿ (ಬಿಎಸ್‌ಆರ್‌ಪಿ) ನಮ್ಮ ಮೆಟ್ರೋದ ಕೆಂಗೇರಿ - ವೈಟ್ ಫೀಲ್ಡ್ ಸಂಪರ್ಕಿಸುವ 'ಪಾರಿಜಾತ ಕಾರಿಡಾರ್ (35ಕಿಮೀ) ನಿರ್ಮಾಣ ಕೈಬಿಡುವ ಸಾಧ್ಯತೆಯಿದೆ.
ಇತ್ತೀಚೆಗೆ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ನಡೆದ ಕೆ-ರೈಡ್ ಸಭೆಯಲ್ಲಿ ಈ ಬಗ್ಗೆ ಪರಾಮರ್ಶೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ವೈಟ್ ಫೀಲ್ಡ್ ಹಾಗೂ ಛಲ್ಲಘಟ್ಟ ನಡುವೆ ನಮ್ಮ ಮೆಟ್ರೋದ ನೇರಳೆ ಮಾರ್ಗ ಹಾದು ಹೋಗಿರುವ ಕಾರಣ ಇದೀಗ ಇದೇ ಮಾರ್ಗ ದಲ್ಲಿ ಪುನಃ ಉಪನಗರ ರೈಲು ಯೋಜನೆ ರೂಪಿಸಿಕೊಳ್ಳಬೇಕೆ ಬೇಡವೆ ಎಂಬುದರ ಚರ್ಚೆ ನಡೆದಿದೆ.
ಬೆಂಗ್ಳೂರಿನ ಸಬರ್ಬನ್ ರೈಲಿಗೆ 2800 ಕೋಟಿ ರೂ. ಯುರೋಪ್ ಸಾಲ
ಪಾರಿಜಾತ ಮಾರ್ಗದ ಬದಲಾಗಿ ಬಿಎಸ್ ಆರ್‌ಪಿ ಯೋಜನೆಯಡಿ ಚಿಕ್ಕಬಾಣಾವರ- ತುಮಕೂರು, ಚಿಕ್ಕಬಾಣಾವರ -ಮಾಗಡಿ ಅಥವಾ ರಾಜಾನುಕುಂಟೆ ಗೌರಿ ಬಿದನೂರು ನಡುವೆ ಉಪನಗರ ರೈಲು ಮಾರ್ಗ ನಿರ್ಮಿಸುವ ಕುರಿತು ಚಿಂತನೆ ನಡೆಸಿದ್ದಾರೆ.
ಒಟ್ಟಾರೆ 148ಕಿಮೀ ಉದ್ದದ ಉಪನಗರ ರೈಲು ಯೋಜನೆಗೆ 202000 ಅನುಮೋದನೆ ದೊರೆತಿದೆ. ಈಗಾಗಲೇ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಸಂಪರ್ಕಿಸುವ ' ಮಲ್ಲಿಗೆ' ಮಾರ್ಗದ (25.01ಕಿಮೀ) ಕಾಮಗಾರಿ ಶೇ.30ರಷ್ಟು ಮುಗಿದಿದೆ. ಹೀಲಲಿಗೆ ಹಾಗೂ ರಾಜಾನುಕುಂಟೆ ಸಂಪರ್ಕಿಸುವ 'ಕನಕ' ಮಾರ್ಗಕ್ಕೆ (46.24) ಕಾಮಗಾರಿ ಆರಂಭವಾ ಗಿದೆ. ಇನ್ನು, ಮೆಜೆಸ್ಟಿಕ್ ಹಾಗೂ ದೇವನಹಳ್ಳಿ ಸಂಪರ್ಕಿಸುವ 'ಸಂಪಿಗೆ' ಮಾರ್ಗ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.
ಬೆಂಗಳೂರು ಉಪನಗರ ರೈಲಿಗೆ 306 ಬೋಗಿ ಖರೀದಿ
ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗೆ ಬೇಕಾದ 306 ರೈಲ್ವೆ ಬೋಗಿಗಳನ್ನು (ರೋಲಿಂಗ್ ಸ್ಟಾಕ್) ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಯಮಿತವು (ಕೆ-ರೈಡ್) ನೇರವಾಗಿ ಖರೀದಿಸಲು ನಿರ್ಧರಿಸಿದೆ. ಇದಕ್ಕೆ 4270 ಕೋಟಿ ವೆಚ್ಚ ವಾಗಲಿದ್ದು, ರಾಜ್ಯ ಹಾಗೂ ರೈಲ್ವೆ ಇಲಾಖೆಗಳು ಅನುಪಾತ 50:50 ಅನುದಾನದಲ್ಲಿ ಬೋಗಿಗಳನ್ನು ಖರೀದಿ ಮಾಡುವ ಸಲುವಾಗಿ ಕೆ-ರೈಡ್‌ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರೈಲ್ವೆ ಇಲಾಖೆಯು ಐಸಿಎಫ್ (ಇಂಟೆಗ್ರಲ್ ಕೋಚ್ ಫ್ಯಾಕ್ಟರಿ-ಚೆನ್ನೈ) ಮೂಲಕ ಬೋಗಿಗಳನ್ನು ಪೂರೈಸುವ ವಿಚಾರ ಮುಂದಿಟ್ಟಿದೆ. ಈ ಸಂಬಂಧ ಇಂದು (ಮಂಗಳವಾರ) ರಾಜ್ಯದ ಆರ್ಥಿಕ ಇಲಾಖೆ ಉನ್ನತಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಯಲಿದ್ದು, ಯಾವ ರೀತಿ ಬೋಗಿಗಳನ್ನು ಪಡೆಯಬೇಕು ಎಂಬ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಕೆ-ರೈಡ್ ಅಧಿಕಾರಿಗಳು ತಿಳಿಸಿದ್ದರು.
ಇದಕ್ಕೂ ಮುನ್ನ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಸರ್ವೀಸ್ ಶಿಫಾರಸ್ಸಿನ ಮೇರೆಗೆ ಕೆ-ರೈಡ್ ದೇಶದಲ್ಲೇ ಮೊದಲ ಬಾರಿಗೆ ಪಿಪಿಪಿ ಮಾದರಿಯಲ್ಲಿ ಉಪನಗರ ರೈಲು ಯೋಜನೆಗೆ 35 ವರ್ಷಗಳ ಅವಧಿಗೆ ರೈಲನ್ನು ನಿಯೋಜಿಸಿಕೊಳ್ಳಲು ಕೆ-ರೈಡ್ ನಿರ್ಧರಿಸಿತ್ತು. ಇದಕ್ಕಾಗಿ ಕರೆದಿದ್ದ ತಾಂತ್ರಿಕ ಬಿಡ್‌ನಲ್ಲಿ ಬಿಇಎಂಎಲ್, ಭಾರತ್ ಹೆವಿ ಎಲೆಕ್ಟಿಕಲ್ಸ್ ಹಾಗೂ ಸಿಇಎಫ್ ಕಂಪನಿಗಳು ಅರ್ಹತೆ ಪಡೆದು ಆರ್ಥಿಕ ಬಿಡ್ ಹಂತಕ್ಕೆ ಬಂದಿದ್ದವು. ಆದರೆ, ಅಂತಿಮ ವಾಗಿ ಹಿಂದೇಟು ಹಾಕಿದವು. ಇದರಿಂದ ಕೆ-ರೈಡ್ ರೈಲ್ವೆ ಬೋಗಿಗಳನ್ನು ಪಡೆ ಯಶವಂತಪುರದ ಬಳಿ ನಡೆಯುತ್ತಿರುವ ಉಪನಗರ ರೈಲು ಯೋಜನೆಯ ಎಲಿವೇಟೆಡ್ ಕಾರಿಡಾರ್ ಕಾಮಗಾರಿ. ಸಂದಿಗ್ಧತೆ ಎದುರಿಸುವಂತಾಗಿತ್ತು. ಹೀಗಾಗಿ ಪಿಪಿಪಿ ಮಾದರಿ ಕೈಬಿಡಲಾಯಿತು. ಈ ನಡುವೆ ವಂದೇ ಮೆಟ್ರೋ ರೈಲ್ವೆ ಬೋಗಿಗಳನ್ನು ಪಡೆಯಲು ಯೋಜಿಸ ಲಾಗಿತ್ತು. ಆದರೆ, ಅದು ಸಮಂಜಸವಲ್ಲದ ಕಾರಣ ದಿಂದ ಬೋಗಿಗಳನ್ನು ನೇರವಾಗಿ ಖರೀದಿ ಮಾಡಲು ಮುಂದಾಗಿಲಾಗಿದೆ ಎಂದು ಕೆ-ರೈಡ್ ತಿಳಿಸಿದೆ.
ರಾಜ್ಯ ಸರ್ಕಾರದ ಅಂತಿಮ ತೀರ್ಮಾನದ ಬಳಿಕ ರೈಲ್ವೆ ಮಂಡಳಿ, ಸಂಪುಟ ಸಮಿತಿಗೆ ನಮ್ಮ ಪ್ರಸ್ತಾವನೆ ಕಳಿಸಲಾಗುವುದು. ಅಲ್ಲಿ ಅನುದಾನದ ಕುರಿತು ನಿರ್ಧಾರ ಆಗಬೇಕಾಗುತ್ತದೆ. ಬಳಿಕ ನೀತಿ ಆಯೋಗದ ಜೊತೆಗೂ ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೆಂಗಳೂರು ಉಪನಗರ ರೈಲು ಯೋಜನೆಯ ಲೊಕೇಶನ್ ಸರ್ವೆ ಶೀಘ್ರ ಪೂರ್ಣಗೊಳಿಸಲು ಸೋಮಣ್ಣಗೆ ಸಂಸದ ಸುಧಾಕರ್ ಮನವಿ!
ಇನ್ನು, ಬಿಎಸ್‌ಆರ್‌ಪಿ ಯೋಜನೆಗಾಗಿ ಜರ್ಮನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಹಾಗೂ ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ಆರ್ಥಿಕ ನೆರವು ಪಡೆಯಲಾಗು ತಿದೆ. ಈ ಒಪಂದದ ನಿಬಂಧನೆ ಪ್ರಕಾರ 2025ರ ಸೆಪ್ಟೆಂಬರ್ ಹೊತ್ತಿಗೆ ರೋಲಿಂಗ್ ಸ್ಟಾಕ್ ನಿಯೋಜನೆ ಬಗ್ಗೆ ಎರಡೂ ಸಂಸ್ಥೆಗಳಿಗೆ ಅಂತಿಮ ವರದಿ ನೀಡಬೇ ಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಬೋಗಿಗಳ ಬಗ್ಗೆ ತೀರ್ಮಾನ ಮಾಡಲಿದ್ದೇವೆ ಎಂದರು.
ಬಿಎಸ್‌ಆರ್‌ಪಿ ಯೋಜನೆಯಲ್ಲಿ ಮೆಟ್ರೋದಂತೆ ಹವಾನಿಯಂತ್ರಿತ ರೈಲನ್ನು ಬಳಸಲು ತೀರ್ಮಾನವಾಗಿದೆ. ಒಂದು ಬೋಗಿಯಲ್ಲಿ 300 ಜನ ಪ್ರಯಾಣಿ ಸುವ ಸಾಮರ್ಥ ಇರಲಿದ್ದು, ಆರಂಭಿಕ ಹಂತದಲ್ಲಿ ಮೂರು ಬೋಗಿಗಳ ರೈಲನ್ನು ಓಡಿಸುವ ಬಗ್ಗೆ ಚಿಂತನೆ ನಡೆದಿದೆ.