
ಮಂಗಳೂರು (ನ.28): ಲವ್, ಸೆಕ್ಸ್, ದೋಖಾ ಕೇಸ್‌ನಲ್ಲಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಪ್ರಿಯತಮ ಕೈಕೊಟ್ಟ ಕಾರಣಕ್ಕೆ ಅಪ್ರಾಪ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. 17 ವರ್ಷದ ಹೃಷ್ಟಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯಗೆ ಪ್ರಯತ್ನ ಮಾಡಿದ್ದಳು. ನವೆಂಬರ್ 20 ರಂದು ಹೃಷ್ಟಿ ವಿಷ ಸೇವಿಸಿದ್ದರು. ಚಿಕಿತ್ಸೆ ಫಲಿಸದೇ ಅಪ್ರಾಪ್ತ ಯುವತಿ ಹೃಷ್ವಿ ಕೊನೆಯುಸಿರೆಳೆದಿದ್ದಾರೆ. ಹೃಷ್ಟಿ ಹಾಗೂ ಆಕೆಯ ಸಂಬಂಧಿ ಪ್ರವೀಣ್ ಪ್ರೀತಿ ಮಾಡುತ್ತಿದ್ದರು. ಮದುವೆ ಆಗೋದಾಗಿ ನಂಬಿಸಿ ವಂಚನೆ ಆರೋಪ ಮಾಡಲಾಗಿದೆ.
ಪ್ರವೀಣ್ ವಿರುದ್ಧ ಹೃಷ್ವಿ ಪೋಷಕರಿಂದ ದೂರು ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೃಷ್ವಿ ಆತ್ಮಹತ್ಯೆ ಬಳಿಕ ಆರೋಪಿ ಪ್ರವೀಣ್ ಪರಾರಿಯಾಗಿದ್ದಾನೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸಂಬಂಧಿ ಪ್ರವೀಣ್ ಚಾರ್ಮಾಡಿ ಜೊತೆ ಹೃಷ್ಟಿ ಪ್ರೇಮದಲ್ಲಿದ್ದಳು. ಮದುವೆ ಆಗುವುದಾಗಿ ಆಕೆಯೊಂದಿಗೆ ಪ್ರವೀಣ್ ಸೆಕ್ಸ್ ಕೂಡ ನಡೆಸಿದ್ದ. ಆ ಬಳಿಕ ಮದುವೆ ಆಗೋದಿಲ್ಲ ಎಂದು ಆಕೆಗೆ ವಂಚನೆ ಮಾಡಿದ್ದಾನೆ. ಇದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.
ಮಾಜಿ ಬಾಯ್‌ಫ್ರೆಂಡ್‌ನ ಬಿಟ್‌ಕಾಯಿನ್ ಇದ್ದ ಹಾರ್ಡ್‌ಡ್ರೈವ್ ಕಸದ ಗಾಡಿಗೆ ಎಸೆದ ಯುವತಿ, ಇದರ ಮೌಲ್ಯ 5900 ಕೋಟಿ!
ಬೆಳ್ತಂಗಡಿ ಮಿತ್ತಬಾಗಿಲಿನ ಕೋಡಿ ನಿವಾಸಿಯಾಗಿರುವ ಹೃಷ್ಟಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕೆಲ ದಿನಗಳ ಹಿಂದೆ ಆಕೆ ಅಚಾನಕ್ ಆಗಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಆಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Chitradurga: 20 ವರ್ಷದ ಯುವತಿಗೆ 40ರ ಅಂಕಲ್ ಜೊತೆ ಲವ್-ಮದುವೆ; ಅಳಿಯನ ಜೀವ ತೆಗೆದ ಪೋಷಕರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ