ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಎರಡು ಸ್ಥಿರ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಉಳಿದ 50 ವಾರ್ಡ್‌ಗಳ ಪೈಕಿ 42 ವಾರ್ಡ್ ನಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಉಳಿದ 8 ವಾರ್ಡ್‌ನಲ್ಲಿ ಸ್ಥಳ ಹುಡುಕಾಟ ನಡೆಸಲಾಗಿದೆ.
ಬೆಂಗಳೂರು(ನ.28): ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿಯು ಈ ವರೆಗೆ 42 ಕ್ಯಾಂಟಿನ್ ನಿರ್ಮಾಣಕ್ಕೆ ಸ್ಥಳ ಗುರುತಿಸಿದೆ. ಬಿಬಿಎಂಪಿಯ ವಾರ್ಡ್ ಸಂಖ್ಯೆ 198 ರಿಂದ 225ಕ್ಕೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿ ವಾರ್ಡ್‌ನಲ್ಲಿ ಹಾಗೂ ಮೊಬೈಲ್ ಕ್ಯಾಂಟೀನ್ ಇರುವ ವಾರ್ಡ್‌ಗಳಲ್ಲಿ ಸ್ಥಿರ ಕ್ಯಾಂಟೀನ್ ನಿರ್ಮಾಣಕ್ಕೆ ಸೂಚಿಸಿದೆ.
ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಎರಡು ಸ್ಥಿರ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಉಳಿದ 50 ವಾರ್ಡ್‌ಗಳ ಪೈಕಿ 42 ವಾರ್ಡ್ ನಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಉಳಿದ 8 ವಾರ್ಡ್‌ನಲ್ಲಿ ಸ್ಥಳ ಹುಡುಕಾಟ ನಡೆಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಳರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.
Shivamogga: ಇಂದಿರಾ ಕ್ಯಾಂಟಿನ್‌ನಲ್ಲಿ ಹೋಟೆಲ್ ಊಟ ಕೊಟ್ಟು ಸಚಿವರಿಗೆ ಯಾಮಾರಿಸಿದ ಅಧಿಕಾರಿಗಳು?
₹48 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್:
ರಾಜ್ಯ ಸರ್ಕಾರ ಪ್ರತಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ತಲಾ 2 48 ಲಕ್ಷ ನೀಡಲಿದೆ. ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಮನೆ ಇದ್ದರೆ 287 ಲಕ್ಷ ನೀಡಲಿದೆ. ಇವುಗಳ ನಿರ್ಮಾಣಕ್ಕೆ ಶೀಘ್ರದಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯನಿರ್ವಹಿಸದ 10 ಕ್ಯಾಂಟೀನ್:
ನಗರದಲ್ಲಿ 175 ಸ್ಥಿರ ಕ್ಯಾಂಟೀನ್ ಪೈಕಿ 10 ಇಂದಿರಾ ಕ್ಯಾಂಟೀನ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. 165 ಕ್ಯಾಂಟೀನ್ ಚೆನ್ನಾಗಿ ನಡೆಯುತ್ತಿವೆ. 23 ಮೊಬೈಲ್ ಕ್ಯಾಂಟೀನ್ ವಾಹನ ಹಾಳಾಗಿದೆ. ಆ ವಾಹನಗಳ ರಿಪೇರಿ ಕಾರ್ಯವನ್ನು ವಲಯ ಮಟ್ಟದ ಅನುದಾನದಲ್ಲಿ ಮಾಡಬೇಕೆಂದು ಸೂಚಿಸಲಾಗಿದೆ.
2 ವಲಯದಲ್ಲಿ ಶೀಘ್ರ ಹೊಸ ಮೆನು ಜಾರಿ:
ಈಗಾಗಲೇ ನಗರದ 6 ವಲಯದಲ್ಲಿ ಹೊಸ ಮೆನು ಜಾರಿಗೊಳಿಸಿ ರಾಗಿ ಮುದ್ದೆ, ಸೊಪ್ಪಿನ ಸಾರು ಸೇರಿ ಮೊದಲಾದ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ. ಪಶ್ಚಿಮ ಮತ್ತು ದಾಸರಹಳ್ಳಿ ವಲಯ ಆಹಾರ ವಿತರಣೆ ಟೆಂಡರ್‌ಕುರಿತು ನ್ಯಾಯಲಯದಲ್ಲಿ ಪ್ರಕರಣ ಇದೀಗ ಪ್ರಕರಣ ಮುಕ್ತಾಯವಾಗಿದೆ. ಈ ಎರಡು ವಲಯದಲ್ಲಿ ರಾಗಿ ಮುದ್ದೆ. ಸೊಪ್ಪಿನ ಸಾರು ವಿತರಣೆ ಆರಂಭಿಸಲು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರದಲ್ಲಿ ಈ ಎರಡು ವಲಯದ ಇಂದಿರಾ ಕ್ಯಾಂಟೀನ್ ನಲ್ಲಿ ರಾಗಿ ಮುದ್ದೆ ವಿತರಣೆ ಆರಂಭಗೊಳ್ಳಲಿದೆ ಎಂದು ಅವರು ವಿವರಿಸಿದರು.
ವಿಮಾನದಲ್ಲಿ ಬಂದು ಇಂದಿರಾ ಕ್ಯಾಂಟೀನ್ ಊಟ ಮಾಡಿಹೋದ ಮಿನಿಸ್ಟರ್ ರಹೀಂ ಖಾನ್!
ಶಿವಮೊಗ್ಗ: ಕಳೆದೊಂದು ವರ್ಷದ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅದ್ಧೂರಿಯಾಗಿ ಉದ್ಘಾಟನೆಗೊಂಡ ಶಿವಮೊಗ್ಗ ನಗರದ ಬಳಿಯ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಂದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಶಿವಮೊಗ್ಗದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಹೋಗಿದ್ದರು.
ಇಂದಿರಾ ಕ್ಯಾಂಟೀನ್ ಊಟ ಸೇವಿಸಿದ ಬಿಬಿಎಂಪಿ ಮುಖ್ಯ ಆಯುಕ್ತ; ಮುಖ ಹೆಂಗಾಯ್ತು ನೋಡಿ!
ಹೌದು, ಶಿವಮೊಗ್ಗ ನಗರಕ್ಕೆ ವಿಮಾನದಲ್ಲಿ ಬಂದ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಅವರು, ನರದಲ್ಲಿರುವ ಬಿಹೆಚ್. ರಸ್ತೆಯಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಬಂದು ಊಟ ಮಾಡಿದರು. ಜೊತೆಗೆ, ಇಂದಿರಾ ಕ್ಯಾಂಟೀನ್‌ಗೆ ಸರಬರಾಜಾಗುವ ಊಟದ ಬಗ್ಗೆ ಪರಿಶೀಲನೆ ಮಾಡಿ, ಅಲ್ಲಿನ ಸ್ವಚ್ಛತೆ ಹಾಗೂ ಸಿಬ್ಬಂದಿ ಬಗ್ಗೆ ಪರಿಶೀಲನೆ ಮಾಡಿದರು. ನಂತರ ಕ್ಯಾಂಟೀನ್ ಸಿಬ್ಭಂದಿ ಜೊತೆ ಊಟ ಸರಬರಾಜು ಮತ್ತು ಪೂರೈಕೆ ಬಗ್ಗೆ ಚರ್ಚೆ ಮಾಡಿದರು. ಜೊತೆಗೆ, ಕುಡಿಯುವ ನೀರಿಗೆ ಫಿಲ್ಟರ್ ಅಳವಡಿಸುವಂತೆ ಸೂಚನೆ ನೀಡಿದರು. ಇನ್ನು ಇಂದಿರಾ ಕ್ಯಾಂಟೀನ್‌ಗೆ ವಿಐಪಿ ಗಳು ಬಂದಾಗ ಮಾತ್ರ ಉತ್ತಮ ಊಟ ಕೊಡುವ ಬಗ್ಗೆ ದೂರು ಬಂದಿದೆ. ಹಗೆ ಮಾಡದೇ ಎಲ್ಲ ಜನರಿಗೂ ಉತ್ತಮ ಊಟ ನೀಡುತ್ತಾ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದ್ದರು.
ಇನ್ನು ಸಾರ್ವಜನಿಕರಿಗೆ ಮೆನುವಿನ ಪ್ರಕಾರ ನೀಡಲಾಗುತ್ತಿದ್ದ ಚಪಾತಿ ಹಾಗೂ ಪಲ್ಯ ಊಟವನ್ನು ಹಾಕಿಸಿಕೊಂಡು ಅಲ್ಲಿಯೇ ಊಟ ಮಾಡಿದರು. ಇನ್ನು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾರ್ಥ ನೀಡಿದರು. ಎಲ್ಲರೂ ಒಟ್ಟಿಗೆ ಊಟ ಮಾಡಿದ್ದಲ್ಲದೇ ಈ ವೇಳೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಆಗಾಗ ಇಂದಿರಾ ಕ್ಯಾಂಟೀನ್‌ಗೆ ಬಂದು ಊಟ ಮಾಡಿ ಗುಣಮಟ್ಟ ಪರಿಶೀಲನೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದ್ದರು.