ಮುಂಬೈನಿಂದ ಬಂದ ಮೃತದೇಹ: ಮಂಡ್ಯದ ಕೊಡಗಹಳ್ಳಿ ಗ್ರಾಮ ಸೀಲ್‌ಡೌನ್

May 2, 2020, 3:20 PM IST

ಮಂಡ್ಯ(ಮೇ.02): ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನಾಲ್ಕು ಮಂದಿಗೆ ಸೋಂಕು ತಗುಲಿದ್ದು, ಗ್ರಾಮಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಮಂಡ್ಯದ ಕೊಡಗಹಳ್ಳಿ ಗ್ರಾಮ ಲಾಕ್‌ ಆಗಿದೆ.

ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳೆಲ್ಲವನ್ನೂ ಬ್ಲಾಕ್ ಮಾಡಲಾಗಿದೆ. ಮೇಲುಕೋಟೆ ಸೇರಿ ಸುತ್ತಮುತ್ತಲಿನ ಗ್ರಾಮಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಯಾರೂ ಮನೆಯಿಂದ ಹೊರ ಬಾರದಂತೆ ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಫೇಸ್‌ಬುಕ್‌ನಲ್ಲಿ ಹುಚ್ಚಾಟ; ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ವಿರುದ್ಧ ಸೆಡಿಶನ್ ಕೇಸ್

ಮುಂಬೈನಿಂದ ಬಂದ ಮೃತದೇಹದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೀಲ್‌ಡೌನ್ ಆದ ಗ್ರಾಮಗಳಲ್ಲಿ ಮನೆ ಮನೆಗೆ ಸಾಮಾಗ್ರಿಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.