Nov 11, 2021, 10:56 AM IST
ಕೋಲಾರ (ನ.11): ಕೋಲಾರ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ಕೆರೆ ಇಂದಾಗಿ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಕೆರೆ ತುಂಬಿ ಕೋಡಿ ಹರಿಯುತ್ತಿರುವ ಪರಿಣಾಮ ಗ್ರಾಮ ಪೂರ್ತಿ ಭರಪೂರ ನೀರಿನಿಂದಾಗಿ ಹಸಿರಿನಿಂದ ಕಂಗೊಳಿಸುತ್ತಿದೆ. ಬರದ ನಾಡು ಎಂದೇ ಕರೆಸಿಕೊಳ್ಳುವ ಕೆರೆಯಲ್ಲೀಗ ಭಾರಿ ಪ್ರಮಾಣದಲ್ಲಿ ನೀರು ತುಂಬಿದೆ. ಕಳೆದ ವರ್ಷ ಚೌಡೇಶ್ವರಿ ದೇವಿಗೆ ಗುಡಿ ನಿರ್ಮಾಣ ಮಾಡಿ ಪರಿಷ್ಠಾಪನೆ ಮಾಡಿದ ಬಳಿಕ ಖಾಲಿ ಮೈದಾನದಂತೆ ಆಗಿದ್ದ ಕೆರೆಯಲ್ಲಿ ನೀರುಕ್ಕುತ್ತಿದೆ.
Mandya : ಮೇಲುಕೋಟೆ ಕೊಳದ ನೀರು ಕಲುಷಿತ, ಭಕ್ತರಲ್ಲಿ ಆತಂಕ
ಇಲ್ಲಿನ ಚೌಡೇಶ್ವರಿ ಹಾಗು ತ್ರಯಂಬಕೇಶ್ವರಿ ದೇವಾಲಯದ ಬಳಿಯಲ್ಲಿ ಕೆರೆ ಇದ್ದು ಶುದ್ಧ ನೀರನ್ನು ಕಂಡು ದೇವರ ಕೃಪೆ ಎಂದೇ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಕೆರೆಯಲ್ಲಿ ನೀರು ತುಂಬಿರುವ ಪರಿಣಾಮ ಸಂಪೂರ್ಣ ಗ್ರಾಮವೇ ಹಚ್ಚಹಸಿರಿನಿಂದ ತುಂಬಿದೆ. ಎಲ್ಲೆಡೆ ಮಲೆನಾಡಿನಂತೆ ಊರು ಕಾಣಬರುತ್ತಿದೆ.