ಪ್ರೈಮ್ ಮಿನಿಸ್ಟರ್ ಇಲೆವೆನ್ ವಿರುದ್ಧ ಟೀಂ ಇಂಡಿಯಾ ಪಿಂಕ್ ಬಾಲ್ ಅಭ್ಯಾಸ ಪಂದ್ಯ

By Naveen Kodase  |  First Published Nov 30, 2024, 9:56 AM IST

ಡಿಸೆಂಬರ್ 06ರಿಂದ ಆರಂಭವಾಗಲಿರುವ ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡದ ವಿರುದ್ಧ ಟೀಂ ಇಂಡಿಯಾ ಇಂದಿನಿಂದ ಎರಡು ಪಂದ್ಯಗಳ ಅಭ್ಯಾಸ ಪಂದ್ಯವನ್ನಾಡಲಿದೆ.


ಕ್ಯಾನ್‌ಬೆರ್ರಾ: ಡಿ.6ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಪೂರ್ವಭಾವಿ ಸಿದ್ದತೆಗಾಗಿ ಭಾರತ ತಂಡ ಶನಿವಾರದಿಂದ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಹಗಲು- ರಾತ್ರಿ ಪಂದ್ಯಕ್ಕೆ ಕ್ಯಾನ್‌ಬೆರ್ರಾದ ಮಾನುಕಾ ಓವಲ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಆಸ್ಟ್ರೇಲಿಯಾದ ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡದ ವಿರುದ್ಧ ಈ ಪಂದ್ಯ ನಡೆಯಲಿದ್ದು, ಪಿಂಕ್ ಬಾಲ್ ಬಳಲಾಗುತ್ತದೆ. ಭಾರತ ಈ ವರೆಗೂ 4 ಬಾರಿ ಹಗಲು-ರಾತ್ರಿ ಟೆಸ್ಟ್ ಆಡಿದೆ. ಈ ಪೈಕಿ 4 ವರ್ಷಗಳ ಹಿಂದೆ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್‌ ಆಲೌಟಾಗಿತ್ತು. ಹೀಗಾಗಿ ಈ ಬಾರಿ ಅಭ್ಯಾಸ ಪಂದ್ಯದ ಮೂಲಕ ಮಹತ್ವದ ಟೆಸ್ಟ್‌ಗೆ ಸಿದ್ಧತೆ ನಡೆಸಲಿದೆ.

Latest Videos

undefined

ಅಭ್ಯಾಸ ಪಂದ್ಯದಲ್ಲಿ ಭಾರತ ಬೌಲಿಂಗ್ ಗಿಂತ ಹೆಚ್ಚಿನ ಸಮಯ ಬ್ಯಾಟಿಂಗ್‌ಗೆ ಒತ್ತು ಕೊಡುವ ಸಾಧ್ಯತೆಯಿದೆ. ಪ್ರಮುಖವಾಗಿ ರೋಹಿತ್ ಶರ್ಮಾ, ಶುಭಮನ್ ಗಿಲ್ ಈ ಪಂದ್ಯದ ಮೂಲಕ ಆಸೀಸ್ ದಾಳಿ ಯನ್ನು ಎದುರಿಸಲು ತಯಾರಿ ನಡೆಸಲಿದ್ದಾರೆ. ಅಲ್ಲದೆ, 2ನೇ ಟೆಸ್ಟ್‌ನಲ್ಲಿ ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಗೊಂದಲ ಉಂಟಾಗಿರುವ ಕಾರಣ ಅದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತ ಕಾತರಿಸುತ್ತಿದೆ. ಪ್ರೈಮ್ ಮಿನಿಸ್ಟರ್ ತಂಡದಲ್ಲಿ ಸ್ಕಾಟ್ ಬೊಲಾಂಡ್, ಮ್ಯಾಥ್ಯ ರೆನ್‌ಶಾ ಸೇರಿ ಜೊತೆಗೆ ಹಲವು ಯುವ ಆಟಗಾರರಿದ್ದಾರೆ.

5.4 ಓವರ್‌ಗಳಲ್ಲೇ 86 ರನ್‌ ಚೇಸ್‌ ಮಾಡಿ ಗೆದ್ದ ಕರ್ನಾಟಕ

ಪಂದ್ಯ ಆರಂಭ: ಬೆಳಗ್ಗೆ 9.10ಕ್ಕೆ(ಭಾರತೀಯ ಕಾಲಮಾನ)
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.

ಗಿಲ್‌ ಅಭ್ಯಾಸ ಶುರು: 2ನೇ ಟೆಸ್ಟ್‌ಗೆ ಲಭ್ಯ

ಕ್ಯಾನ್‌ಬೆರ್ರಾ: ಹೆಬ್ಬೆರಳ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ಭಾರತದ ತಾರಾ ಬ್ಯಾಟರ್‌ ಸಂಪೂರ್ಣ ಚೇತರಿಸಿಕೊಂಡಿದ್ದು, ಶುಕ್ರವಾರ ಅಭ್ಯಾಸಕ್ಕೆ ಮರಳಿದ್ದಾರೆ.

ಅವರು ನೆಟ್ಸ್‌ನಲ್ಲಿ ಕೆಲ ಕಾಲ ಪಿಂಕ್‌ ಬಾಲ್‌ ಅಭ್ಯಾಸ ನಡೆಸಿದರು. ಯಶ್‌ ದಯಾಳ್‌ ಹಾಗೂ ಆಕಾಶ್‌ದೀಪ್‌ ಬೌಲ್‌ ಮಾಡಿದರು. ಅವರು ಡಿ.6ರಂದು ಆರಂಭಗೊಳ್ಳಲಿರುವ 2ನೇ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರಲಿದ್ದಾರೆ. ಗಿಲ್‌ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್‌ನಲ್ಲಿ ಕರ್ನಾಟಕದ ದೇವದತ್‌ ಪಡಿಕ್ಕಲ್‌ ಆಡಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ 2ನೇ ಟೆಸ್ಟ್‌ಗೆ ಪಡಿಕ್ಕಲ್‌ ಅವರು ಗಿಲ್‌ಗೆ ಜಾಗ ಬಿಟ್ಟುಕೊಡಬೇಕಾಗಬಹುದು. ಗಿಲ್‌ ಎಂದಿನಂತೆ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಸಾಧ್ಯತೆ ಹೆಚ್ಚು.

2025ರ ಐಪಿಎಲ್‌ಗೆ ದೇಸಿ ‘ಸಿಕ್ಸರ್‌ ಮಷಿನ್‌’ಗಳ ಆಯ್ಕೆ! ಈ ಇಬ್ಬರು ಆಟಗಾರರ ಮೇಲೆ ಕಣ್ಣಿಡಿ!

ಭಾರತ ಕ್ರಿಕೆಟಿಗರ ಭೇಟಿಯಾದ ಆಸ್ಟ್ರೇಲಿಯಾ ಪಿಎಂ

ಕ್ಯಾನ್ಬೆರ್ರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಭೇಟಿಯಾಗಿ, ಮಾತುಕತೆ ನಡೆಸಿದರು. ನ.30ರಿಂದ ಪ್ರೈಮ್​ ಮಿನಿಸ್ಟರ್ ಇಲೆವೆನ್ ವಿರುದ್ಧ ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯವಾಡಲು ಭಾರತೀಯ ಆಟಗಾರರು ಬುಧವಾರ ರಾತ್ರಿ ಕ್ಯಾನ್‌ಬೆರ್ರಾಗೆ ಬಂದಿಳಿದರು. ಗುರುವಾರ ಅವರಿಗೆ ಪ್ರಧಾನಿ ಅಲ್ಬನೀಸ್‌ ಭೋಜನ ಕೂಟ ಏರ್ಪಡಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಭಾರತೀಯರ ಆಟಗಾರರನ್ನು ನಾಯಕ ರೋಹಿತ್ ಶರ್ಮಾ ಪ್ರಧಾನಿಗೆ ಪರಿಚಯಿಸಿದರು. ಇದೇ ವೇಳೆ ಬುಮ್ರಾ ಜೊತೆ ಸಂವಾದ ನಡೆಸಿದ ಪ್ರಧಾನಿ, ನಿಮ್ಮ ಬೌಲಿಂಗ್ ಶೈಲಿ ಎಲ್ಲರಿಗಿಂತ ಭಿನ್ನವಾಗಿದೆ ಎಂದರು. ಅಲ್ಲದೆ ಮೊದಲ ಪಂದ್ಯದಲ್ಲಿ ಬುಮ್ರಾ ಪ್ರದರ್ಶನವನ್ನು ಶ್ಲಾಘಿಸಿದರು.

ಇನ್ನು ವಿರಾಟ್ ಕೊಹ್ಲಿ ಜೊತೆ ಪರ್ತ್ ಶತಕವನ್ನು ಪ್ರಸ್ತಾಪಿಸಿದ ಆಸ್ಟ್ರೇಲಿಯಾ ಪ್ರಧಾನಿ, ನಿಮ್ಮ ಆಟದಿಂದಾಗಿ ನಾವು ತೊಂದರೆಗೀಡಾದವು ಎಂದು ಕಿಚಾಯಿಸಿದರು. ಇದರ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಒಂದೇ ಟೀಮ್‌ನಲ್ಲಿ ಶ್ರೇಯಸ್ ಅಯ್ಯರ್-ಯುಜುವೇಂದ್ರ ಚಹಲ್! ಧನಶ್ರೀ ವರ್ಮಾ ಫುಲ್ ಟ್ರೋಲ್

ಆಸ್ಟ್ರೇಲಿಯಾ ಸಂಸತ್‌ನಲ್ಲಿ ರೋಹಿತ್‌ ಶರ್ಮಾ ಭಾಷಣ

ಪ್ರಧಾನಿ ಆಲ್ಬನೀಸ್‌ರನ್ನು ಭೇಟಿಯಾದ ಬಳಿಕ ನಾಯಕ ರೋಹಿತ್‌ ಶರ್ಮಾ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಭಾಷಣ ಮಾಡಿದರು. ಕಿರು ಭಾಷಣದಲ್ಲಿ ಕ್ರಿಕೆಟ್‌ ಸೇರಿದಂತೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ರೋಹಿತ್‌ ಮಾತನಾಡಿದರು. ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ಆಡಲು ಮತ್ತು ಅಲ್ಲಿನ ಸಂಸ್ಕೃತಿ, ವೈವಿಧ್ಯಮಯ ಸ್ಥಳಗಳನ್ನು ಅರಿಯಲು ಭಾರತೀಯ ಆಟಗಾರರು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
 

click me!