May 22, 2022, 4:59 PM IST
ಕೋಲಾರ (ಮೇ. 22): ಬಂಗಾರಪೇಟೆ ಪಟ್ಟಣದಲ್ಲಿರುವ ಒಂದು ವಿಶೇಷವಾದ ಪಾರ್ಕ್. ಈ ಪಾರ್ಕ್ (Park) ನ ವಿಶೇಷ ಏನಂದ್ರೆ ದಾನ ನೀಡಿದವರು ಹಾಜಿ ಇಸ್ಮಾಯಿಲ್ ಸೇಟ್ ಎಂಬುವರು. ಈ ಪಾರ್ಕ್ ನ ಹೆಸರು 'ಪಟ್ಟಾಭಿಷೇಕೋದ್ಯಾನವನ' ಪುರಸಭೆಗಾಗಿಯೇ (Municipality) ಈ ಭೂಮಿಯನ್ನು ದಾನ ನೀಡಿದ್ದಾರೆ. ಪಾರ್ಕ್ ಗಾಗಿ ನೀಡಿರುವ ಈ ಭೂಮಿಯನ್ನು ಕೇವಲ ಸೀಮಿತ ಉದ್ದೇಶಕ್ಕೆ ಮಾತ್ರ ಬಳಸಬೇಕು. ಆದ್ರೆ ನಿಯಮಗಾಳಿಗೆ ತೂರಿರುವ ಸ್ವತಹ ಪುರಸಭೆಯೇ ಇಲ್ಲಿ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿದೆ.
ತುಮಕೂರು: ಹಳ್ಳ ಹಿಡಿದ ಎಮರ್ಜೆನ್ಸಿ ಕಾಲ್ ಬಾಕ್ಸ್, ಬಹುತೇಕರಿಗೆ ಮಾಹಿತಿಯೇ ಇಲ್ಲ!
ಹಾಲಿ ಪುರಸಭೆಯ ಕಟ್ಟಡ 2010ರಲ್ಲಿ ನಿರ್ಮಿತ ಕಟ್ಟಡ ಇದ್ದರೂ ಕೂಡ ಮತ್ತೊಂದು ಪುರಸಭಾ ಕಛೇರಿಯ ಕಟ್ಟಡ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೆ ಪಾರ್ಕ್ ನ ಮತ್ತೊಂದು ಭಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲಾಗಿದೆ. ಪಾರ್ಕ್ ಉದ್ದೇಶಕ್ಕೆ ಮಾತ್ರ ಬಳಸಬಹುದಾದ ಭೂಮಿಯನ್ನು ದುರುಪಯೋಗ ಮಾಡುತ್ತಿರುವ ಕುರಿತು ಈಗಾಗಲೇ ನ್ಯಾಯಾಲಯದಲ್ಲಿ ದಾವೇ ಹೂಡಿದ್ದರು. ತೀರ್ಪು ನೀಡಿದ್ದ ನ್ಯಾಯಾಲಯ ಭೂಮಿಯನ್ನು ಕೇವಲ ಪಾರ್ಕ್ ಉದ್ದೇಶಕ್ಕೆ ಮಾತ್ರ ಬಳಸುವಂತೆ ಪುರಸಭೆಗೆ ಆದೇಶಿಸಿತ್ತು. ಈಗ ಮತ್ತೊಮ್ಮೆ ನ್ಯಾಯಾಲಯದ ತೀರ್ಪು ಉಲ್ಲಂಘನೆ ಹಿನ್ನಲೆ ಪುರಸಭೆ ವಿರುದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಕೆರೆಗಳ ನಾಡಿಗೆ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಯ ಭಾಗ್ಯ!
ಪಾರ್ಕ್ ಜಾಗದಲ್ಲಿ ಒಂದು ಬ್ರಿಟಿಷರ (British Period) ಕಾಲದ ಕಟ್ಟಡವೂ ಇತ್ತು. ಅದನ್ನು ಕೆಡವಿ ಹಾಕಿದ್ದ ಪುರಸಭೆ ಈಗ ಅಲ್ಲಿ ತನ್ನ ನೂತನ ಕಟ್ಟಡ ನಿರ್ಮಿಸಿಕೊಂಡಿದೆ. 2009ರಲ್ಲಿ ಯೇ ಹೈಕೋರ್ಟ್ ಆದೇಶ ಪ್ರಕಾರ ಅಲ್ಲಿ ಯಾವುದೇ ಕಟ್ಟಡ ನಿರ್ಮಿಸದೇ ಪಾರ್ಕ್ ನ್ನು ನಿರ್ವಹಿಸಬೇಕಿತ್ತು. ಆದ್ರೆ 2019ರಿಂದಲೇ ಅಲ್ಲಿ ಕಟ್ಟಡವನ್ನು ನಿರ್ಮಿಸಲು ಪುರಸಭೆಯೇ ಮುಂದಾಗಿದ್ದು ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ಮಾಡಿದೆ. ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಸಹ ಆಗಿದೆ ಸಜ್ಜಾಗಿದೆ. ಆದ್ರೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪುರಸಭೆಯೇ ಪ್ರಮಾದ ಎಸಗಿದೆ. ಅಧಿಕಾರಿಗಳು ಗೊತ್ತಿದ್ದೂ ಕೂಡ ಯಾವುದೋ ಒತ್ತಡಕ್ಕೆ ಮಣಿದಿರೋದು ಇಲ್ಲಿ ಸ್ಲಷ್ಟ. ಸದ್ಯ ಹೊಸದಾಗಿ ಜಿಲ್ಲೆಗೆ ಬಂದಿರುವ ಜಿಲ್ಲಾಧಿಕಾರಿ ಗಳು ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.