ಕ್ಯಾನ್ಸರ್ ಚಿಕಿತ್ಸೆಯಿಂದ ಸಂಪೂರ್ಣವಾಗಿ ಬದಲಾದ ಮಗ : ಭಾವುಕರಾಗಿ ನೆನಪುಗಳನ್ನ ಬಿಚ್ಚಿಟ್ಟ ಅಮೃತಧಾರೆಯ ಮಾನ್ಯಾ

First Published | Nov 26, 2024, 4:21 PM IST

ಅಮೃತಧಾರೆಯಲ್ಲಿ ಮಾನ್ಯಾ ಪಾತ್ರದಲ್ಲಿ ನಟಿಸಿದ್ದ ನಟಿ ಶಾಂಭವಿ ವೆಂಕಟೇಶ್ ಅವರು ಮೂರು ವರ್ಷದ ಪುತ್ರನಿಗೆ ಕ್ಯಾನ್ಸರ್ ಕಾಡುತ್ತಿದ್ದು, ಇದೀಗ ಕಿಮೋಥೆರಪಿ ಪಡೆದುಕೊಳ್ಳುತ್ತಿದ್ದು, ಮುಖ ಗುರುತು ಸಿಗದಂತೆ ಬದಲಾಗಿದೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಗೌತಮ್ ದಿವಾನರನ್ನು ಪ್ರೀತಿಸುತ್ತಿದ್ದ ಮಾನ್ಯಾ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ನಟಿ ಶಾಂಭವಿ ವೆಂಕಟೇಶ್ ಜೀವನದಲ್ಲಿ ಅತ್ಯಂತ ಕೆಟ್ಟ ದಿನಗಳನ್ನ ಎದುರಿಸುತ್ತಿದ್ದಾರೆ. ಯಾಕಂದ್ರೆ ಇವರು ಪುತ್ರ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. 
 

ಈ ಬಗ್ಗೆ ಕೆಲದಿನಗಳ ಹಿಂದೆ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ "3rd ಸ್ಟೇಜ್ ಬ್ಲಡ್ ಕ್ಯಾನ್ಸರ್" (3rd stage blood cancer) ಇರೋದು ಪತ್ತೆ ಆಯ್ತು . ಇದು 95% ಕ್ಯೂರೇಬಲ್ ಅಂತಾ ಡಾಕ್ಟರ್ ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ.
 

Tap to resize

ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ" ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ. ಕೀಮೋಥೆರಪಿಯ (chemotherapy)  ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಮಗು ಕಳೆದ ಎರಡು ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. 
 

ಇದೀಗ ಶಾಂಭವಿ (Shaambhawi Venkatesh) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದಿಷ್ಟು ಮಾಹಿತಿ ಹಾಗೂ ಮಗನ ಒಂದಷ್ಟು ಫೋಟೊಗಳನ್ನು ಹಂಚಿಕೊಂಡು, ಮಗ ದುಷ್ಯಂತ್ ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದಕ್ಕೆ ಕಾರಣ ಚಿಕಿತ್ಸೆಯ ಸೈಡ್ ಎಫೆಕ್ಟ್ ನಿಂದಾಗಿ ಮಗು ಗುರುತೇ ಸಿಗದಷ್ಟು ಬದಲಾಗಿರೋದು. 
 

ಒಂದೇ ತಿಂಗಳಲ್ಲಿ ಆದ ಬದಲಾವಣೆ ಇದು. ದುರ್ಗೆಗೆ ಹೋಲಿಸಿದಾಗ ದುಷ್ಯು ಕೊಂಚ chubby ಆಗಿದ್ದ. ಹೀಗಾಗಿ ಗುಂಡು, ಡುಮ್ಮ ಅಂತೆಲ್ಲ ಕರೀತಾ ಇದ್ದೆ. ಕಿಮೋಥೆರಪಿ ಮೆಡಿಸಿನ್ ಅಡ್ಡ ಪರಿಣಾದಿಂದಾಗಿ ಇವಾಗ ನಿಜವಾಗ್ಲೂ ಗುಂಡಣ್ಣ ಆಗಿದ್ದಾನೆ. ಇಡೀ ದೇಹದ ಜೊತೆಗೆ ಕೆನ್ನೆ ಎಷ್ಟೊಂದು ಊದಿದೆ ಅಂದ್ರೆ ಅವನ ಬಟ್ಟಲು ಕಂಗಳು ಸಣ್ಣಕ್ಕಾಗಿದೆ. 3 ಅಲ್ಲಾ, 6 ವರ್ಷದ ಮಗುವಿನ ಹಾಗೆ ಕಾಣ್ತಾ ಇದಾನೆ . ಆ ಪುಟಾಣಿ ದುಷ್ಯೂನ ಮಿಸ್ ಮಾಡ್ಕೋತಿದೀನಿ ಎಂದು ಬರೆದುಕೊಂಡಿದ್ದಾರೆ. 
 

ಮಗು ಬೇಗನೆ ಹುಷಾರಾಗಿ ಬರಲೆಂದು ಸ್ನೇಹಿತರು, ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ. ಜೊತೆಗೆ ಸ್ಟ್ರಾಂಗ್ ಆಗಿರು, ನಿಂಗೆ ಏನೂ ಆಗಲ್ಲ, ಆದಷ್ಟು ಬೇಗನೆ ಮೊದಲಿನಂತೆ ಆಗುವೆ, ಆ ದೇವರ ಆಶೀರ್ವಾದ ಯಾವಾಗ್ಲೂ ನಿನ್ನ ಮೇಲಿರುತ್ತೆ ಮಗು ಎಂದು ಹಾರೈಸಿದ್ದಾರೆ ಜನ. 
 

ಶಾಂಭವಿ ಕನ್ನಡ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಮಿಂಚಿದ್ದಾರೆ. ಕೆಜಿಎಫ್, ಸಲಗ, ಸಿನಿಮಾಗಳಲ್ಲಿ ಹಾಗೂ ಅಮೃತಧಾರೆ, ನಿಗೂಢ ರಾತ್ರಿ, ಪಾರು, ಲಕ್ಷ್ಮೀ ಸ್ಟೋರ್ಸ್ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಸದ್ಯ ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ ನಾತಿಚರಾಮಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. 
 

Latest Videos

click me!